ಬೆಂಗಳೂರು, (ನ.03): ಕನ್ನಡ ಚಿತ್ರರಂಗದ ಹಿರಿಯ ನಟ, ರಂಗಭೂಮಿ ಕಲಾವಿದ ಹೆಚ್‍. ಜಿ ಸೋಮಶೇಖರ ರಾವ್  ಇಂದು (ಮಂಗಳವಾರ) ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ  ಸೋಮಶೇಖರ ರಾವ್ (86 ವರ್ಷ) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಜಯನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದಿದ್ದಾರೆ.

ಸಂಜನಾ, ರಾಗಿಣಿಗಿಲ್ಲ ಜಾಮೀನು, ರಾರಾ-ಶಿರಾದಲ್ಲಿ ಯಾರಿಗೆ ಜಾಮೂನು? ನ.3ರ ಟಾಪ್ 10 ಸುದ್ದಿ!

86 ವರ್ಷ ವಯಸ್ಸಿನ ಸೋಮಶೇಖರ್ ರಾವ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಸೋಮಶೇಖರ ರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 

ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಶೇಖರ್ 1981ರಲ್ಲಿ ಚಿತ್ರೋದ್ಯಮ ಪ್ರವೇಶಿಸಿದ್ದರು. ಟಿಎಸ್ ರಂಗಾ ಅವರ "ಸಾವಿತ್ರಿ" ಇವರ ಮೊದಲ ಚಿತ್ರ. 

ರವೀ ನಿರ್ದೇಶನದ "ಮಿಥಿಲೆಯ ಸೀತೆಯರು" ಸೋಮಶೇಖರ್ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೆ ರವೀ ನಿರ್ದೇಶನದ "ಹರಕೆಯ ಕುರಿ",  ಚಿತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.