ಕೊಡಗು[ಜ.16]: ಕೊಡಗಿನ ಕುವರಿ, ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ ಖ್ಯಾತ ನಟಿ ರಶ್ಮಿಕಾ ಮಂದಣ್ಣರವರ ಮನೆ ಮೇಲೆ ನಡೆದಿರುವ ಐಟಿ ಹಾಗೂ ಇಡಿ ದಾಳಿ ಸದ್ಯ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್. ಒಂದರ ಬಳಿಕ ಮತ್ತೊಂದರಂತೆ ಹೊಚ್ಚ ಹೊಸ ವಿಚಾರಗಳು ಬೆಳಿಕಿಗೆ ಬರಲಾರಂಭಿಸಿವೆ.

"

ಈ ನಡುವೆ, ರಶ್ಮಿಕಾ ನಟಿಸಿದ ಸಿನಿಮಾಗಳು, ಅವರು ಪಡೆದ ಸಂಭಾವನೆ, ಸಿನಿ ಜರ್ನಿ ಶುರುವಾಗಿದ್ದು ಯಾವಾಗ? ಈ ಎಲ್ಲಾ ವಿಚಾರಗಳನ್ನು ಜನರು ಹುಡುಕಲಾರಂಭಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ರಶ್ಮಿಕಾ ಮನೆ ಮೇಲೆ ದಾಳಿ ನಡೆಸಿದ್ದು, ಕರ್ನಾಟಕ ವಲಯದ ಅಧಿಕಾರಿಗಳಲ್ಲ ಎಂಬ ಸುದ್ದಿಯೂ ವರದಿಯಾಗಿದೆ. ಹಾಗಾದ್ರೆ ದಾಳಿ ನಡೆಸಿದ ಅಧಿಕಾರಿಗಳು ಎಲ್ಲಿಯವರು?

"

5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ, ಈಗಿರುವ ಸಂಭಾವನೆ ಅಬ್ಬಬ್ಬಾ...!

ಹೌದು ರಶ್ಮಿಕಾ ಮಂದಣ್ಣರವರ ವಿರಾಜಪೇಟೆ ನಿವಾಸದ ಮೇಲೆ ಇಂದು, ಗುರುವಾರ ಬೆಳಗ್ಗೆ 07.30ಕ್ಕೆ ಐಟಿ ಹಾಗೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಈ ದಾಳಿಯಲ್ಲಿ ಕರ್ನಾಟಕ ವಲಯದ ಅಧಿಕಾರಿಗಳಿಲ್ಲ. ದಾಳಿ ನಡೆಸಿದ್ದು, ಆಂಧ್ರ-ತೆಲಂಗಾಣ ವಿಭಾಗದ ಐಟಿ ಅಧಿಕಾರಿಗಳು. ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ 'ಸಾನ್ವಿ' ಖ್ಯಾತಿಯ ರಶ್ಮಿಕಾ ಬಳಿಇಕ ಮುಖ ಮಾಡಿದ್ದು ಟಾಲಿವುಡ್‌ ಸಿನಿಮಾ ಕ್ಷೇತ್ರದತ್ತ. ನಟ ವಿಜಯ್ ದೇವರಕೊಂಡ ಜತೆ ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ತೆಲುಗು ಸಿನಿಮಾ ರಂಗದಲ್ಲಿ ಹೈ ಬಜೆಟ್ ಸಿನಿಮಾಗಳಲ್ಲಿ ನಟಿಸಿದ್ದರು. 

ರಶ್ಮಿಕಾ ಮಂದಣ್ಣ ವಯಸ್ಸಿನ್ನೂ 23, ಸಂಪಾದನೆ ಮಾತ್ರ ಕೋಟಿ ಕೋಟಿ!

4 ವರ್ಷಗಳ ಹಿಂದೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಸದ್ಯ ಟಾಲಿವುಡ್‌ನ ಟಾಪ್ ನಟಿ. ಟಾಲಿವುಡ್ನಲ್ಲಿ ಸಾಲು, ಸಾಲು ಹಿಟ್ ಚಿತ್ರಗಳನ್ನು ನೀಡಿದ್ದ ರಶ್ಮಿಕಾ ವಿಜಯ್ ದೇವರಕೊಂಡ, ನಾಗಾರ್ಜುನ, ನಾನಿ, ಮಹೇಶ್‌ ಬಾಬು ಹಾಗೂ ಅಲ್ಲು ಅರ್ಜುನ್ ಜೊತೆ ಮಿಂಚಿದ್ದರು. ಕನ್ನಡದಲ್ಲಿ 5, ತೆಲುಗಿನಲ್ಲಿ 7 ಚಿತ್ರಗಳಲ್ಲಿ ನಟಿಸಿದ್ದರು. ಖ್ಯಾಥಿ ಹೆಚ್ಚಿದಂತೆಲ್ಲಾ ಕೋಟಿ, ಕೋಟಿ ಸಂಭಾವಣೆ ಪಡೆಯುತ್ತಿದ್ದರೆನ್ನಲಾಗಿದೆ.

ಇಲ್ಲಿ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದರೂ ಅವರು ಸರಿಯಾಗಿ ತೆರಿಗೆ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಇದೇ ಕಾರಣದಿಂದ ಆಂಧ್ರ-ತೆಲಂಗಾಣ ವಿಭಾಗದ ಐಟಿ ಅಧಿಕಾರಿಗಳು ರಶ್ಮಿಕಾ ಮಂದಣ್ಣ ಮನೆ ಮೇಲೆ ದಾಳಿನಡೆಸಿದ್ದಾರೆನ್ನಲಾಗಿದೆ.

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ, ಇಡಿ ದಾಳಿ: ಈವರೆಗೆ ಏನೇನಾಯ್ತು?