ಇಂಡೋ ಫ್ರೆಂಚ್‌ ಜೋಡಿಯ ಹಾಡಿಗೆ ನೆಟ್ಟಿಗರು ಫಿದಾ ಸಾಮ್ನೆ ಯೇ ಕೌನ್‌ ಆಯಾ ಹಾಡು ಹಾಡಿದ ಜೋಡಿ

ಇಂಡೋ-ಫ್ರೆಂಚ್‌ ಜೋಡಿಯೊಂದು ಕಿಶೋರ್‌ ಕುಮಾರ್‌ ಅವರ ಫೇಮಸ್ ಹಾಡು 'ಸಾಮ್ನೆ ಯೇ ಕೌನ್‌ ಆಯಾ' ಹಾಡನ್ನು ಹಾಡಿದ್ದು, ಇದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಇಂಡೋ ಫ್ರೆಂಚ್‌ ಜೋಡಿಯಾದ ಮೇಘದತ್ ರಾಯ್ (Meghdut Roy Chowdhury) ಚೌಧರಿ ಮತ್ತು ಪಾಲಿನ್ ಲಾರಾವೊಯಿರ್ (Pauline Laravoire) ಅವರು ಕಿಶೋರ್‌ ಕುಮಾರ್ ಅವರ 'ಸಾಮ್ನೆ ಯೇ ಕೌನ್‌ ಆಯಾ' ಹಾಡನ್ನು ಸಖತ್‌ ಆಗಿ ಹಾಡಿದ್ದು, ನೆಟ್ಟಿಗರು ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 31,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಕೋಲ್ಕತ್ತಾದ ಮೇಘದತ್ ರಾಯ್ ಚೌಧುರಿ ಮತ್ತು ಫ್ರಾನ್ಸ್‌ನ ಪಾಲಿನ್ ಲಾರಾವೊಯಿರ್ ತಮ್ಮ ಜೀವನವನ್ನು ಒಟ್ಟಿಗೆ ನಡೆಸುತ್ತಿದ್ದು, ಇವರಿಬ್ಬರು ಈ ಹಿಂದೆಯೂ ಹೀಗೆ ಹಲವು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್‌ ಮಾಡಿದ್ದರು. ಹಾಗೆಯೇ ಈ ಬಾರಿಯೂ ಕೂಡ ಜನವರಿ 9 ರಂದು ಮೇಘದತ್ ಮತ್ತು ಪಾಲಿನ್ ಇಬ್ಬರೂ 1972 ರ ಚಲನಚಿತ್ರ 'ಜವಾನಿ ದಿವಾನಿ'ಯಿಂದ ಎವರ್‌ಗ್ರೀನ್‌ ಹಾಡು ಕಿಶೋರ್ ಕುಮಾರ್ ಹಾಡಿದ ಸಾಮ್ನೆ ಯೇ ಕೌನ್ ಆಯಾ ಹಾಡನ್ನು ಹಾಡಿದ್ದಾರೆ.

View post on Instagram

ಟೀಚರ್‌ ಬೆಲ್ಲಿ ಡಾನ್ಸ್‌ ವೈರಲ್‌... ಮನೆಗೆ ಕಳುಹಿಸಿದ ಶಾಲೆ : ಡಿವೋರ್ಸ್‌ ನೀಡಿದ ಗಂಡ

ಈ ಸಿನಿಮಾದಲ್ಲಿ ರಣಧೀರ್ ಕಪೂರ್ ಮತ್ತು ಜಯಾ ಬಚ್ಚನ್ ಅವರು ನಟಿಸಿದ್ದಾರೆ. ಪಾಲಿನ್ ತನ್ನ ಇನ್ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಾರದ ಇಂಡೋ ಫ್ರೆಂಚ್‌ ಸಿಂಗಿಂಗ್‌ ಸಂಡೇ (indofrenchsingingsundays) ಭಾಗವಾಗಿ @paulinelaravoire ಅವರೊಂದಿಗೆ ಸಾಮ್ನೆ ಯೇ ಕೌನ್ ಆಯಾ ಹಾಡು ಇಲ್ಲಿದೆ. ನಾವು ಈ ಹಿಂದೆ ಕಿಶೋರ್‌ಕುಮಾರ್ ಅವರ ಹಾಡನ್ನು ಪ್ರಯತ್ನಿಸಿದ್ದೇವೆ ಎಂದು ಭಾವಿಸಬೇಡಿ. ಈ ಹೋಮ್ ಕ್ವಾರಂಟೈನ್ ಹೆಚ್ಚು ಕಾಲ ಮುಂದುವರಿದರೆ, ನೀವು ಬಹುಶಃ ಪ್ರತಿ ವಾರಾಂತ್ಯದಲ್ಲಿ ನಿಮಗಾಗಿ ಹೊಸ ಹಾಡನ್ನು ನಾವು ಆರಿಸಿಕೊಳ್ಳುವುದನ್ನು ನೀವು ನೋಡಬಹುದು. ಅಲ್ಲದೆ, ನಮ್ಮ ಕೊನೆಯ ವೀಡಿಯೊವನ್ನು ನೋಡಿದ ಎಲ್ಲಾ 7,50,000 ಜನರಿಗೆ ಧನ್ಯವಾದಗಳು. ಅದು ಸಂಪೂರ್ಣ ಹುಚ್ಚುತನವಾಗಿತ್ತು. ಅಲ್ಲದೇ ಎಲ್ಲರೂ ಅದನ್ನು ಇಷ್ಟಪಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ. 

ಐಫೋನ್‌ ರಿಂಗ್‌ಟೋನ್‌ ಉಲಿಯುವ ಗಿಳಿ... ವಿಡಿಯೋ ವೈರಲ್‌