ಸೋಶಿಯಲ್ ಮೀಡಿಯಾದಲ್ಲಿ ಮಂಗಳವಾರ ಪ್ರಿಯಾಂಕಾ ಚೋಪ್ರಾ ಅವರದ್ದೇ ಹವಾ.. ಎಲ್ಲಿ ನೋಡಿದರೂ ಪಿಗ್ಗಿ ಧರಿಸಿದ್ದ ವೇಷ ಭೂಷಣ, ಅವರ ಹೇರ್ ಸ್ಟೈಲ್ ನದ್ದೇ ಮಾತು. ಅಂಥದ್ದೇನು ಮಾಡಿದರು ಪ್ರಿಯಾಂಕಾ?

ಮುಂಬೈ[ಮಾ. 07] ಅಮೆರಿಕದಲ್ಲಿ ಮೆಟ್ ಗಾಲಾ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಧಿರಿಸು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿರುವುದು ಮಾತ್ರ ಅಲ್ಲ ಟ್ರೋಲ್ ಗೆ ಗುರಿಯಾಗಿದೆ.

ಗುಂಗುರು ಕೂದಲಿನ ವಿಶಿಷ್ಟ ವಿನ್ಯಾಸ, ಸಿಲ್ವರ್ ಬಣ್ಣದ ಗೌನಿನಲ್ಲಿ ಗುರುತೇ ಸಿಗದಂತೆ ಕಾಣಿಸಿಕೊಂಡಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಗುಲಾಬಿ ಬಣ್ಣದ ಗೌನಿನಲ್ಲಿ ಮಿಂಚಿದ್ದಾರೆ.

ಮೂರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಿಯಾಂಕಾ ಈ ಸಾರಿ ಪತಿ ನಿಕ್ ಜೋನಾಸ್ ಜತೆಗೆ ಕಾಣಿಸಿಕೊಂಡಿದ್ದಾರೆ. ನ್ಯೂಯಾರ್ಕ್‍ನಲ್ಲಿನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್, ಕಾಸ್ಟ್ಯೂಮ್ ಇನ್‍ಸ್ಟಿಟ್ಯೂಟ್ ಪ್ರತಿ ವರ್ಷ ನಿರ್ವಹಿಸುವ ಕಾರ್ಯಕ್ರಮವೇ 'ಮೆಟ್ ಗಾಲಾ'. ಈ ಕಾರ್ಯಕ್ರಮಕ್ಕೆ ತಾರೆಗಳು ಭಿನ್ನವಾದ ಬಟ್ಟೆಗಳನ್ನು ತೊಟ್ಟು ಹಾಜರಾಗುತ್ತಾರೆ. ಪ್ರತಿ ವರ್ಷ ಹೊಸ ಥೀಮ್ ಇಟ್ಟುಕೊಂಡು ಕಾರ್ಯಕಮ ನಿರ್ವಹಿಸಲಾಗುತ್ತದೆ. 

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…