ನವದೆಹಲಿ(ಮೇ.19: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಖಿ ಅವರ ಪತ್ನಿ ಆಲಿಯಾ ಸಿದ್ದಿಖಿ ಅವರು ವಿಚ್ಛೇದನ ಕೋರಿ ನವಾಜುದ್ದೀನ್‌ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಸ್ಪೀಡ್‌ ಪೋಸ್ಟ್‌ಗೆ ಅವಕಾಶ ಇಲ್ಲದ ಕಾರಣ ಮೇ 7ರಂದು ಇ-ಮೇಲ್‌ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ನೋಟಿಸ್‌ ರವಾನಿಸಿದ್ದಾರೆ.

ನವಾಜುದ್ದೀನ್‌ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಲಿಯಾ ಪರ ವಕೀಲ ತಿಳಿಸಿದ್ದಾರೆ. ಸಿದ್ದಿಖಿ ಮತ್ತು ಆಲಿಯಾ ಅವರು 2009ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆಲಿಯಾ ಅವರನ್ನು ವರಿಸುವ ಮುನ್ನ ಶೀಬಾ ಎಂಬವರನ್ನು ಸಿದ್ದಿಖಿ ವಿವಾಹವಾಗಿದ್ದರು.

ಅನಾರೋಗ್ಯಪೀಡಿತರಾಗಿರುವ ತಾಯಿ ನೋಡಲು ಉತ್ತರ ಪ್ರದೇಶದ ಬುಢಾನಾಗೆ ಸಿದ್ದಿಖಿ ಅವರು ಹೋಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ನವಾಜುದ್ದೀನ್‌ ಹಾಗೂ ಅವರ ಕುಟುಂಬದವರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.