ಮುಂಬೈ (ಅ.23): ಬಾಲಿವುಡ್‌ನ ಪ್ರಸಿದ್ಧ ನಟ ಹೃತಿಕ್‌ ರೋಶನ್‌ ಅವರ ತಾಯಿ ಪಿಂಕಿ ರೋಶನ್‌ ಅವರು ತಾವು ಕೊರೋನಾ ವೈರಸ್‌ಗೆ ತುತ್ತಾಗಿದ್ದಾರೆ. 

ಈ ಬಗ್ಗೆ ಗುರುವಾರ ಮಾತನಾಡಿದ ಹೃತಿಕ್‌ ತಂದೆ ಹಾಗೂ ಬಾಲಿವುಡ್‌ ನಿರ್ಮಾಪಕ ರಾಕೇಶ್‌ ರೋಶನ್‌, ವಾರದ ಹಿಂದೆಯೇ ಪಿಂಕಿ ಅವರು ಸೋಂಕಿಗೆ ತುತ್ತಾಗಿದ್ದಾರೆ. 

ಸದ್ಯ ಅವರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸುತ್ತಿಲ್ಲ. ಆದಾಗ್ಯೂ, ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದಾರೆ ಎಂದಿದ್ದಾರೆ. ಏತನ್ಮಧ್ಯೆ ಬುಧವಾರ ಬಲೂನ್‌ ಮತ್ತು ಹೂವಿನ ಗುಚ್ಛವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಪಿಂಕಿ ರೋಶನ್‌, ನನ್ನ ಹುಟ್ಟುಹಬ್ಬಕ್ಕೆ ನನ್ನ ಕುಟುಂಬಸ್ಥರು ಸರ್‌ಪ್ರೈಸ್‌ ಆಗಿ ನೀಡಿದ ಉಡುಗೊರೆಗಳು ಇವು ಎಂದು ಬರೆದುಕೊಂಡಿದ್ದಾರೆ.

ಕೊರೋನಾ ಸೋಂಕಿತ ಶವ ಪರೀಕ್ಷೆ : ಹೊರಬಿತ್ತು ಆತಂಕಕಾರಿ ಸಂಗತಿ ...

ಈಗಾಗಲೇ ದೇಶದಲ್ಲಿ ಲಕ್ಷ ಲಕ್ಷ ಮಂದಿ ಕೊರೋನಾ ಮಹಾಮಾರಿಗೆ ಒಳಗಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.  ರಾಜಕೀಯ ವಲಯದಲ್ಲಿಯೂ ಕೂಡ ಅನೇಕ ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.