Asianet Suvarna News Asianet Suvarna News

ನನ್ನಮ್ಮ ಯಾರು : ಒಂದೇ ತರ ಸೀರೆ ಉಟ್ಟು ಮಗುವಿಗೆ ಕನ್‌ಫ್ಯೂಸ್‌ ಮಾಡಿದ ಮಹಿಳೆಯರು

  • ನನ್ನ ಅಮ್ಮ ಯಾರು ಎಂದು ಗೊಂದಲಕ್ಕೊಳಗಾದ ಮಗು
  • ಅಮ್ಮನಂತೆ ಸೀರೆ ಉಟ್ಟು ಕುಳಿತಿದ್ದ ಹೆಂಗಳೆಯರು
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌
Hiding among women dressed in similar sarees in viral video akb
Author
Bangalore, First Published Mar 11, 2022, 11:26 AM IST | Last Updated Mar 11, 2022, 11:26 AM IST

ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಆ ಮನೆಯ ಸಂತೋಷವೇ ಬೇರೆ ಅದರಲ್ಲೂ ಅಮ್ಮನಿಗೆ ಯಾವಾಗಲೂ ತನ್ನ ಪುಟ್ಟ ಕಂದನ ತುಂಟಾಟವನ್ನು ನೋಡುವುದೇ ಕೆಲಸ. ಅಲ್ಲದೇ ನನ್ನಂತೆ ನನ್ನ ಕಂದ ನನ್ನನ್ನು ಗುರುತಿಸುತ್ತಾನೆಯೇ ಇಲ್ಲವೋ  ಎಂದು ತಿಳಿದುಕೊಳ್ಳುವ ಕುತೂಹಲವೂ ತಾಯಿಗೆ ಸದಾ ಇರುವುದು. ಅದಕ್ಕೆ ತಕ್ಕಂತೆ ಹಾಲುಗಲ್ಲದ ಪುಟ್ಟ ಕಂದಮ್ಮಗಳು ತಮ್ಮ ಅಮ್ಮ ಯಾರು ಎಂಬುದನ್ನು ಪತ್ತೆ ಮಾಡಲು ಕೆಲವೊಮ್ಮ ಗೊಂದಲಕ್ಕೊಳಗಾಗುತ್ತವೆ. ಹಾಗೆಯೇ ಇಲ್ಲಿ ತನ್ನ ತಾಯಿಯಂತೆಯೇ ವೇಷ ಧರಿಸಿ ಕೂತ ಹೆಂಗೆಳೆಯರ ಮಧ್ಯೆ ನನ್ನ ಅಮ್ಮ ಯಾರೂ ಎಂದು ಹುಡುಕಲು ಪರದಾಡುತ್ತಿರುವ ಮಗುವಿನ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಮುದ ನೀಡುತ್ತಿದೆ. 

ಈ ವಿಡಿಯೋದಲ್ಲಿ ಅಮ್ಮ ಮನೆಯ ಒಳಗಿದ್ದಾಳೆ ಎಂಬುದನ್ನು ಅರಿತ ಮಗುವೊಂದು ಅಮ್ಮ ಅಮ್ಮ ಎನ್ನುತ್ತಾ ಖುಷಿಯಿಂದ ಬಾಗಿಲು ದಾಟಿ ಹಾಲ್‌ನೊಳಗೆ ಬರುತ್ತದೆ. ಆದರೆ ಅಲ್ಲಿ ನೋಡಿದರೆ ಅಮ್ಮನಂತೆಯೇ ಹಳದಿ ಬಣ್ಣದ ಸೀರೆಯುಟ್ಟ ಐದು ಆರು ಹೆಂಗಳೆಯರು ಮುಖ ಕಾಣದಂತೆ ತಲೆ ಮೇಲೆ ಮುಸುಕು ಹಾಕಿಕೊಂಡು ಕೈಯಲ್ಲಿ ಬಾ ಬಾ ಎಂದು ಎಲ್ಲರೂ ಮಗುವನ್ನು ಕರೆಯಲು ಶುರು ಮಾಡುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಮಗು ಮೊದಲ ಸಲ ಜೊತೆಯಲ್ಲಿ ಕುಳಿತಿದ್ದ ಒಬ್ಬರು ಮಹಿಳೆಯ ಬಳಿ ಅಮ್ಮ ಎಂದು ಹೋಗುತ್ತಾನೆ. ಆದರೆ ಕ್ಷಣದಲ್ಲೇ ಇದು ನನ್ನ ಅಮ್ಮ ಅಲ್ಲ ಎಂಬುದು ಆ ಮಗುವಿಗೆ ತಿಳಿಯುತ್ತದೆ. ಕೂಡಲೇ ಆ ಮಹಿಳೆಯ ಕೈಯಿಂದ ಕೆಳಗಿಳಿಯುವ ಮಗು ಕೊನೆಗೂ ತನ್ನ ಅಮ್ಮನ ಗುರುತಿಸುವಲ್ಲಿ ಯಶಸ್ವಿಯಾಗುತ್ತಾನೆ. 

 
 
 
 
 
 
 
 
 
 
 
 
 
 
 

A post shared by SFT (@status.fan.tranding)

ಈ ವಿಡಿಯೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದ್ದು,  18 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮಾರ್ಚ್ 6 ರಂದು  ಅಪ್ಲೋಡ್ ಆದ ಈ ವಿಡಿಯೋ ನೋಡುಗರ ಮುಖದಲ್ಲಿ ನಗು ಮೂಡಿಸುತ್ತಿದೆ. ಮಗು ಜನಿಸಿದ ಮೊದಲ ಕೆಲವು ತಿಂಗಳುಗಳು ತಾಯಿ ಮತ್ತು ಮಗು ಇಬ್ಬರಿಗೂ ಸ್ವಲ್ಪ ಕಷ್ಟಕರವಾಗಿರುತ್ತದೆ. ಮಗು ತಾಯಿಯ ಹಾಲನ್ನು (breat milk)ಕುಡಿದು ಕೆಲವು ತಿಂಗಳ ಕಾಲ ತಾಯಿಗೆ ಅಂಟಿಕೊಳ್ಳುವುದರಿಂದ, ತಾಯಿ ಏನು ಮಾಡಿದರೂ ಅಥವಾ ತಿನ್ನುವುದಿರಲಿ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ನವಜಾತ ಶಿಶುವಿಗೆ ಶೀತ ಹವಾಮಾನವು ಹೆಚ್ಚು ಕಷ್ಟಕರವಾಗಿದೆ. ಏಕೆಂದರೆ ಅದರ ರೋಗನಿರೋಧಕ ವ್ಯವಸ್ಥೆಯು ಶೀತದ ವಿರುದ್ಧ ಹೋರಾಡಲು ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಮಗುವನ್ನು ಚಳಿಯಲ್ಲಿ ಹೆಚ್ಚು ಸುರಕ್ಷಿತವಾಗಿಡುವ ಪ್ರಯತ್ನವನ್ನು ಮಾಡುವುದೊಂದೇ ಉತ್ತಮ ಮಾರ್ಗ.

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ...

ತಾಯಿಗೆ ಶೀತವಾದಾಗ ಅಥವಾ ತಣ್ಣೀರಿನಲ್ಲಿ ಸ್ನಾನ (cold water bath)ಮಾಡಿದಾಗ, ಮಗುವೂ ತಣ್ಣಗಾಗುತ್ತದೆ ಎಂದು ಆಗಾಗ್ಗೆ ಕಂಡುಬರುತ್ತದೆ. ಹೀಗಾದಾಗ ಮಗುವಿಗೆ ತಾಯಿಯಿಂದ ಶೀತ ಬಂದಿದೆ ಎಂದು ಹೇಳಲಾಗುತ್ತದೆ. ತಾಯಿ ತಣ್ಣಗೆ ತಿನ್ನುವಾಗ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಿದಾಗ ಮಗುವಿಗೆ ನಿಜವಾಗಲೂ ಶೀತವಾಗುತ್ತದೆಯೇ? ಸ್ತ್ರೀರೋಗ ತಜ್ಞರು ಹೇಳುವಂತೆ, ಚಳಿಗಾಲದಲ್ಲಿ ತಾಯಿಗೆ ವೈರಲ್ ಸೋಂಕು ತಗುಲಿದ್ದರೆ, ಅದು ಮಗುವಿನ ಮೇಲೂ ಪರಿಣಾಮ ಬೀರಬಹುದು, ಆದರೆ ಪ್ರತಿ ಸಂದರ್ಭ ಅಥವಾ ಪ್ರತಿ ಬಾರಿಯೂ ಹಾಗೆ ಆಗುತ್ತದೆಂಬುದು ಖಚಿತವಿಲ್ಲ.

ಗರ್ಭಾವಸ್ಥೆಯಲ್ಲಿ ಮಹಿಳೆ ಮೀನು ತಿನ್ನೋದ್ರಿಂದ ಮಗುವಿಗೆ ತೊಂದರೆ ಇದೆಯೇ?
ಇದಲ್ಲದೆ, ಚಳಿಗಾಲದಲ್ಲಿ ತಾಯಿ ತಣ್ಣೀರಿನಿಂದ ಸ್ನಾನ (cold water bath)ಮಾಡಬಾರದು ಎಂದು ತಜ್ಞರು ವಿವರಿಸುತ್ತಾರೆ. ಇದು ಅವಳಿಗೆ ಮತ್ತು ಅವಳ ನವಜಾತ ಶಿಶುವಿಗೆ ಹಾನಿಕಾರಕವಾಗಬಹುದು. ಚಳಿಯಲ್ಲಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಇಲ್ಲವಾದರೆ ಮಗುವಿಗೆ ಸಹ ಅರೋಗ್ಯ ಸಮಸ್ಯೆ ಉಂಟಾಗಬಹುದು ಎನ್ನಲಾಗಿದೆ. ತಾಯಿಗೆ  ಶೀತವಾದಾಗ ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಿದಾಗ ಮಗುವಿಗೆ ಶೀತ ಬರುತ್ತದೆ ಎಂದು ಸಾಬೀತುಪಡಿಸುವ ಯಾವುದೇ ವೈದ್ಯಕೀಯ ಸಂಶೋಧನೆ ಇಲ್ಲಿಯವರೆಗೆ ನಡೆದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.

Latest Videos
Follow Us:
Download App:
  • android
  • ios