ಮೋಹನ್‌ಲಾಲ್‌ Empuraan ರಿಲೀಸ್‌ಗೆ ರೆಡಿ; ರಜೆ ಘೋಷಿಸಿದ ಬೆಂಗಳೂರು ಕಾಲೇಜು, ಮ್ಯಾನೇಜ್‌ಮೆಂಟ್‌ನಿಂದಲೇ FDFS!

ಬೆಂಗಳೂರಿನ ಗುಡ್‌ ಶೆಫರ್ಡ್‌ ಕಾಲೇಜು ಮೋಹನ್‌ಲಾಲ್‌ ನಟನೆಯ ಎಂಪುರಾನ್‌ ಸಿನಿಮಾ ಬಿಡುಗಡೆಯ ದಿನ ರಜೆ ಘೋಷಿಸಿದೆ. ವಿದ್ಯಾರ್ಥಿಗಳಿಗೆ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

Good Shepherd College in Bengaluru declares a holiday on March 27 for Mohanlals Empuraan release san

ಬೆಂಗಳೂರು (ಮಾ.24): ದೇಶದಲ್ಲಿ ಮಲಯಾಳಂ ಸಿನಿಮಾಗಳಿಗೆ ಇರುವ ಕ್ರೇಜ್‌ ಎಲ್ಲರಿಗೂ ಗೊತ್ತಿರುವಂಥದ್ದೇ. ಈಗ ಮಲಯಾಳಂ ಸಿನಿಮಾ ಎಂದರೆ ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಆ ಬಗ್ಗೆ ನಿರೀಕ್ಷೆ ಇರುತ್ತದೆ. ಇಡೀ ಮಲಯಾಳಂ ಚಿತ್ರರಂಗ ಭಾರೀ ನಿರೀಕ್ಷೆಯ ಮೋಹನ್‌ಲಾಲ್‌ ನಟನೆಯ ಎಂಪುರಾನ್‌ ಸಿನಿಮಾದ ರಿಲೀಸ್‌ಗೆ ಕಾಯುತ್ತಿದೆ. ಆದರೆ, ಎಂಪುರಾನ್‌ ಸಿನಿಮಾದ ರಿಲೀಸ್‌ಗಾಗಿ ಬೆಂಗಳೂರಿನ ಕಾಲೇಜು ಅಚ್ಚರಿ ಎನ್ನುವಂಥ ನಿರ್ಧಾರ ತೆಗೆದುಕೊಂಡಿದೆ. ಸಿನಿಮಾ ಬಿಡುಗಡೆ ಆಗುವ ಹೊತ್ತಿನಲ್ಲಿ ಮೋಹನ್‌ಲಾಲ್‌ ಸಿನಿಮಾವನ್ನು ಸಂಭ್ರಮಿಸಬೇಕು ಎನ್ನುವ ಕಾರಣಕ್ಕೆ ಯಾರೂ ನಿರೀಕ್ಷೆಯೇ ಮಾಡದಂಥ ನಿರ್ಧಾರವನ್ನು ತೆಗೆದುಕೊಂಡಿದೆ.

ಹೌದು, ಬೆಂಗಳೂರಿನ ಗುಡ್‌ ಶೆಫರ್ಡ್‌ ಕಾಲೇಜು ಮೋಹನ್‌ಲಾಲ್‌ ನಟನೆಯ ಎಂಪುರಾನ್‌ ಸಿನಿಮಾದ ಬಿಡುಗಡೆ ದಿನಾಂಕವಾದ ಮಾರ್ಚ್‌ 27ಅನ್ನು ಅಧಿಕೃತ ರಜಾ ದಿನವನ್ನಾಗಿ ಘೋಷಣೆ ಮಾಡಿದೆ. ತಮ್ಮ ಕಾಲೇಜುನ ವಿದ್ಯಾರ್ಥಿಗಳು ದೊಡ್ಡ ಪರದೆಯಲ್ಲಿ ಎಂಪುರಾನ್‌ ಸಿನಿಮಾದ ಅನುಭವ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಸಂಸ್ಥೆಯ ಮ್ಯಾನೇಜ್‌ಮೆಂಟ್‌ ಇದರ ಘೋಷಣೆಯನ್ನೂ ಕೂಡ ಅತ್ಯಂತ ಡಿಫರೆಂಟ್‌ ಆಗಿ ಮಾಡಿದೆ. 'ಲೈಟ್ಸ್‌, ಕ್ಯಾಮೆರಾ, ಹಾಲಿಡೇ..!' ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯ ಚೇರ್ಮನ್‌  ಮೋಹನ್‌ಲಾಲ್‌ ಅವರ ದೊಡ್ಡ ಅಭಿಮಾನಿಯಾಗಿದ್ದು, ಅದೇ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್‌ಗೆ ತಮ್ಮ ಟ್ರಿಬ್ಯೂಟ್‌ ಅನ್ನೋ ರೀತಿಯಲ್ಲಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಕಾಲೇಜು ಮ್ಯಾನೇಜ್‌ಮೆಂಟ್‌ನಿಂದಲೇ ಸ್ಪೆಷಲ್‌: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಲೇಜು ತನ್ನ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಸಹ ಏರ್ಪಡಿಸಿದೆ. ಆಡಳಿತ ಮಂಡಳಿಯು ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ನಲ್ಲಿರುವ ಮೂವೀಟೈಮ್ ಸಿನಿಮಾಸ್‌ನಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರದರ್ಶನವನ್ನು ಕಾಯ್ದಿರಿಸಿದೆ. ಇದಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಟಿಕೆಟ್‌ಗಳನ್ನು ನೀಡುತ್ತಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಬಗ್ಗೆ ತನ್ನ ಉತ್ಸಾಹ ವ್ಯಕ್ತಪಡಿಸಿರುವ ಕಾಲೇಜು, "ಉತ್ಸಾಹ ಮತ್ತು ಅಭಿಮಾನಿಗಳು ಒಂದಾದಾಗ, ಇತಿಹಾಸ ನಿರ್ಮಾಣವಾಗುತ್ತದೆ! ಲಾಲೆಟ್ಟೆನ್‌ ನಿಷ್ಠಾವಂತ ಅಭಿಮಾನಿಯಾದ ನಮ್ಮ ಪ್ರೀತಿಯ ಎಂಡಿ, ಮೋಹನ್ ಲಾಲ್ ಅವರ ಪ್ರತಿಭೆ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ  ನಿರ್ದೇಶನವನ್ನು ಗೌರವಿಸಲು ಎಂಪುರಾನ್‌ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದು ಕೇವಲ ಒಂದು ಚಲನಚಿತ್ರಕ್ಕಿಂತ ಹೆಚ್ಚಿನದು - ಇದು ಒಂದು ವಿದ್ಯಮಾನ!" ಎಂದು ಬರೆದುಕೊಂಡಿದೆ. 

ʼದೇವರ ನಾಡುʼ ಕಾಪಾಡಲು ಬಂದ ಮೋಹನ್‌ಲಾಲ್!‌ 

ಅಭಿಮಾನಿಗಳಿಂದ ನಡೆಸಲ್ಪಡುವ ಈ ಆಚರಣೆ ಮೊದಲೇನಲ್ಲ. ಇದಕ್ಕೂ ಮೊದಲು, 2023 ರಲ್ಲಿ ರಜನಿಕಾಂತ್ ಅವರ ಜೈಲರ್ ಬಿಡುಗಡೆಯಾದಾಗ, ಚೆನ್ನೈ ಮತ್ತು ಬೆಂಗಳೂರಿನ ಹಲವಾರು ಕಂಪನಿಗಳು ಅದರ ಪ್ರೀಮಿಯರ್ ದಿನದಂದು ಚಿತ್ರವನ್ನು ವೀಕ್ಷಿಸಲು ತಮ್ಮ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದ್ದವು. ಕೆಲವರು ತಮ್ಮ ಸಿಬ್ಬಂದಿಗೆ ಉಚಿತ ಟಿಕೆಟ್‌ಗಳನ್ನು ವಿತರಣೆ ಮಾಡಿದ್ದವು. ಆದರೆ, ಕಾಲೇಜು  ಸಂಸ್ಥೆಯೊಂದು ಸಿನಿಮಾಗಾಗಿ ಈ ರೀತಿ ನಿರ್ಧಾರ ಮಾಡಿದ್ದು ಇದೇ ಮೊದಲಾಗಿದೆ.

ʼಮಲಯಾಳಂ ಚಿತ್ರರಂಗದ ಲೆಜೆಂಡ್ʼ ಮಮ್ಮುಟ್ಟಿಗೆ ಕ್ಯಾನ್ಸರ್‌ ವದಂತಿ:

 

Latest Videos
Follow Us:
Download App:
  • android
  • ios