ಅದೊಂದೇ ಕಾರಣ, ಸತ್ಯವಾಗಿಯೂ ನಮ್ಮಿಬ್ಬರ ಡಿವೋರ್ಸ್‌ಗೆ ಮತ್ತೇನೂ ಕಾರಣವಿರಲಿಲ್ಲ; ಚಂದನ್ ಶೆಟ್ಟಿ

'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೂಲಕ ನಟರೂ ಆಗಿರುವ ಚಂದನ್ ಶೆಟ್ಟಿ ಇದೀಗ ಆ ಚಿತ್ರದ ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಬುಕ್ ಆಗಿರುವ ಸಿಂಗಿಂಗ್ ಪ್ರೋಗ್ರಾಂಗಳು ಸಾಕಷ್ಟು ಇವೆಯಂತೆ. ಅತ್ತ ನಿವೇದಿತಾ ಗೌಡ ಅವರಿಗೂ ಸಿನಿಮಾಗಳ..

Exact reason behind Chandan Shetty and Niveditha Gowda divorce revealed srb

ಇತ್ತೀಚಿಗಷ್ಟೇ ಡಿವೋರ್ಸ್ ತೆಗೆದುಕೊಂಡಿರುವ ಚಂದನ್‌ ಶೆಟ್ಟಿ (Chandan shetty) ಹಾಗು ನಿವೇದಿತಾ ಗೌಡ (Niveditha Gowda) ಈಗ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ, ಟೀ-ಕಾಫೀ ಶಾಪ್‌ಗಳಲ್ಲಿ 'ಅವರು ಯಾಕೆ ವಿಚ್ಛೇದನ ತೆಗೆದುಕೊಂಡಿರಬಹುದು' ಎಂಬ ಚರ್ಚೆ ಮಾತ್ರ ನಿಂತಿಲ್ಲ. 'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬಂತೆ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ದಾಂಪತ್ಯದಿಂದ ಹೊರಬಂದರೂ ಸಮಾಜದಲ್ಲಿ ಅವರಿಬ್ಬರ ಲವ್, ದಾಂಪತ್ಯ  ಹಾಗು ಡಿವೋರ್ಸ್‌ ಬಗೆಗಿನ ಮಾತುಕತೆ ಮಾತ್ರ ನಿಂತೇ ಇಲ್ಲ.

ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಈಗ ಇಂಡಿವ್ಯೂಸ್ವಲ್ ಆಗಿ  ಖುಷಿಖುಷಿಯಾಗಿ ಲೈಫ್ ಲೀಡ್ ಮಾಡತೊಡಗಿದ್ದಾರೆ. ಯಾಕೆ ಡಿವೋರ್ಸ್ ಆಗಿದ್ದು ಎಂಬ ಬಗ್ಗೆ ತಮ್ಮ ಅತ್ಯಾಪ್ತರ ಬಳಿ ಚಂದನ್ ಶೆಟ್ಟಿ ಶೇರ್ ಮಾಡಿಕೊಂಡಿದ್ದಾರೆ. 'ಲವ್ ಮಾಡುವ ವೇಳೆ ನಾವಿಬ್ಬರೂ ನಮ್ಮ ಲವ್‌ನಲ್ಲಿ ಫುಲ್ ಇನ್‌ವಾಲ್ವ್ ಆಗಿದ್ವಿ. ಆ ಮೂಲಕ ಮದುವೆಯೂ ಆಯ್ತು. ಆಗ ನಮ್ಮ ಮುಂದಿನ ಜೀವನದಲ್ಲಿ ಯಾವುದರ ಬಗ್ಗೆ ಪ್ರಿಪರೆನ್ಸ್ ನೀಡಲಿದ್ದೇವೆ ಎಂಬ ಬಗ್ಗೆ ನಮಗಿಬ್ಬರಿಗೂ ಸ್ಪಷ್ಟತೆ ಇರಲಿಲ್ಲ. ಮುಂದಿನ ದಿನಗಳು ಹೇಗೆ ಬರಲಿವೆ ಎಂಬ ಕಲ್ಪನೆ ಕೂಡ ಇರಲಿಲ್ಲ. 

ನಮಿತಾಗೆ ಮಹಾ ಮೋಸ, ನಟ ಧನುಷ್ ಜೊತೆ ರೊಮಾನ್ಸ್ ಇರ್ಲಿಲ್ಲ; ರೊಚ್ಚಿಗೆದ್ದ ನಟಿ ಮಾಡಿದ್ದೇನು?

ಆದರೆ, ಮದುವೆಯಾಗಿ ನಾಲ್ಕು ವರ್ಷಗಳಲ್ಲಿ ನಮ್ಮಿಬ್ಬರ ಜೀವನದಲ್ಲೂ ಸಾಕಷ್ಟು ಬದಲಾವಣೆಗಳು ಆದವು. ನನಗೆ ಹಾಗೂ ನಿವೇದಿತಾ ಅವರಿಬ್ಬರಿಗೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬಹಳಷ್ಟು ಕೆಲಸದ ಅವಕಾಶಗಳು ಬಂದು ನಾವಿಬ್ಬರೂ ಫುಲ್ ಬ್ಯುಸಿ ಆಗಿಬಿಟ್ವಿ. ಸಂಸಾರಕ್ಕೆ ಅಂತ ಸಪರೇಟ್‌ ಆಗಿ ಟೈಮ್ ಸ್ಪೆಂಡ್‌ ಮಾಡಲು ಸಾಧ್ಯವೇ ಇರಲಿಲ್ಲ. ಆದರೆ, ಸಂಸಾರ ಮಾಡಬೇಕು ಅಂತ ಬಂದಾಗ ಇಬ್ಬರೂ ಒಟ್ಟಿಗೇ ಕಾಲ ಕಳೆಯಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ನಮ್ಮಿಬ್ಬರಿಗೆ ಅದು ಸಾಧ್ಯವಾಗಲೇ ಇಲ್ಲ. ಹೀಗಾಗಿ ಇಬ್ಬರ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ.  

ಕೋಟಿ ಚಿತ್ರದ ತಾರಾಬಳಗ ಹೇಳ್ತಿರೋದೇನು? ಸತ್ಯ ಗೊತ್ತಾಗೋದಕ್ಕೆ ಕೆಲವೇ ದಿನ ಬಾಕಿ!

ಮದುವೆಯಾಗಿದ್ದರೂ ಸಿಂಗಲ್‌ ತರಹವೇ ಕೆಲಸದಲ್ಲಿ ಬ್ಯುಸಿ ಆಗಿಬಿಟ್ವಿ. ಸಹಜವಾಗಿಯೇ ಮನೆಯಲ್ಲಿ ಚಿಕ್ಕಪುಟ್ಟ ಸಂಗತಿಗಳಲ್ಲಿಯೂ ಹೊಂದಾಣಿಕೆ ಕೊರತೆ ಕಾಡತೊಡಗಿತು. ಈ ಬಗ್ಗೆ ನಮ್ಮನಮ್ಮ ಕುಟುಂಬಗಳ ಜೊತೆಯೂ ಮಾತುಕತೆ ಮಾಡಿದಾಗಲೂ ಅದಕ್ಕೊಂದು ಸೂಕ್ತ ಪರಿಹಾರ ದೊರಕುವ ದಾರಿ ಸಿಗಲಿಲ್ಲ. ಇಬ್ಬರಿಗೂ ಕುಳಿತು ಯೋಚನೆ ಮಾಡುವಷ್ಟು ಸಮಯವೇ ಸಿಗುತ್ತಿರಲಿಲ್ಲ. ಇತ್ತೀಚೆಗೆ ನಿವೇದಿತಾ ಅವರಿಗೆ ಕೂಡ ಸಿನಿಮಾಗಳಲ್ಲಿ ಅವಕಾಶಗಳು ಬರತೊಡಗಿದ್ದರಿಂದ ಸಂಸಾರ ಮುಂದುವರಿಸಬೇಕಾ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಯಿತು.

ಮಾಲಾಶ್ರೀ ಮೇನಿಯಾಗೆ ಫುಲ್ ಸ್ಟಾಪ್ ಹಾಕಿದ್ಯಾರು; ಕನಸಿನ ರಾಣಿ ತೆರೆಮರೆಗೆ ಸರಿತಾರಾ? 

ಆ ಬಗ್ಗೆ ಇಬ್ಬರೂ ಯೋಚಿಸಿ ನಿರ್ಧಾರ ಮಾಡುವ ವೇಳೆ, ಸಂಸಾರ ಬೇಡ, ಇಬ್ಬರೂ ನಮ್ಮ ನಮ್ಮ ಕೆಲಸಗಳಲ್ಲಿ ಬ್ಯುಸಿ ಆಗೋಣ ಎನ್ನುವ ತೀರ್ಮಾನವೇ ಅಂತಿಮವಾಯಿತು. ನಮ್ಮ ನಿರ್ಧಾರದ ಬಗ್ಗೆ ಮನೆಯವರ ಬಳಿ ಚರ್ಚಿಸಿ ಇಬ್ಬರೂ ಬೇರೆಬೇರೆಯಾಗುವ ನಿರ್ಧಾರಕ್ಕೆ ಬಂದ್ವಿ. ಮ್ಯೂಚ್ಯುವಲ್ ಅಂಡರ್‌ಸ್ಟ್ಯಾಂಡಿಂಗ್ ಮೂಲಕ ಡಿವೋರ್ಸ್‌ಗೆ ಅಪ್ಯೈ ಮಾಡಿರೋದ್ರಿಂದ, ಯಾವುದೇ ತೊಡಕು ಎದುರಾಗಲಿಲ್ಲ. ತಕ್ಷಣಕ್ಕೆ ಡಿವೋರ್ಸ್ ದೊರಕಿತು, ನಾವು ಸಂಸಾರ ಎಂಬ ಬಂಧನದಿಂದ ಹೊರಗೆ ಬಂದು ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇವೆ' ಎಂದಿದ್ದಾರೆ ನಟ, ಗಾಯಕ ಚಂದನ್ ಶೆಟ್ಟಿ.

ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?

ಅಂದಹಾಗೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೂಲಕ ನಟರೂ ಆಗಿರುವ ಚಂದನ್ ಶೆಟ್ಟಿ ಇದೀಗ ಆ ಚಿತ್ರದ ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಬುಕ್ ಆಗಿರುವ ಸಿಂಗಿಂಗ್ ಪ್ರೋಗ್ರಾಂಗಳು ಸಾಕಷ್ಟು ಇವೆಯಂತೆ. ಅತ್ತ ನಿವೇದಿತಾ ಗೌಡ ಅವರಿಗೂ ಸಿನಿಮಾಗಳ ಶೂಟಿಂಗ್ ಹತ್ತಿರ ಬಂದಿರುವುದರಿಂದ ಈಗಾಗಲೇ ಆಗಿರುವ ಡಿವೋರ್ಸ್‌ ಬಗ್ಗೆ ಚಿಂತಿಸುತ್ತಾ ಕುಳಿತುಕೊಳ್ಳುವ ಸಮಯವಿಲ್ಲ. ಹೀಗಾಗಿ, ಇಬ್ಬರೂ ತಮ್ಮ ತಮ್ಮ ಸಾಧನೆಯ ಹಾದಿಯಲ್ಲಿ ಸಾಗತೊಡಗಿದ್ದಾರೆ. ಸದ್ಯಕ್ಕೆ ಇಬ್ಬರೂ ಸಿಂಗಲ್ ಆಗಿಯೇ ಸಾಗುವ ಪ್ಲಾನ್‌ ಮಾಡಿದ್ದಾರೆ' ಎಂದಿವೆ ಚಂದನ್ ಶೆಟ್ಟಿ ಅವರ ಆಪ್ತ ವಲಯ. 

Latest Videos
Follow Us:
Download App:
  • android
  • ios