ಮುಂಬೈ[ಮಾ. 07] ತನ್ನ ಇಸ್ಟಾಗ್ರ್ಯಾಮ್ ಪೋಟೋಕ್ಕೆ ಕಮೇಂಟ್ ಮಾಡಿದ್ದ ವ್ಯಕ್ತಿ ತಿರುಗಿ ಏಳದ ರೀತಿ ಈ ನಟಿ ಪ್ರತಿಕ್ರಿಯೆ ನೀಡಿದ್ದಾರೆ.ಸೆಲೆಬ್ರಿಟಿಗಳು ವಿವಿಧ ಪೋಸ್ ಹಾಕುವುದು ಸಾಮಾನ್ಯ. ತಮ್ಮ ಅಭಿಮಾನಿಗಳಿಗಾಗಿ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕಮೆಂಟ್ ಗಳನ್ನು ಸಾಮಾನ್ಯವಾಗಿ ನಟ ನಟಿಯರು  ನಿರ್ಲಕ್ಷ್ಯ ಮಾಡಿಬಿಡುತ್ತಾರೆ. ಆದರೆ ಈ ನಟಿ ಮಾತ್ರ ಸುಮ್ಮನಾಗಿಲ್ಲ.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

 ಬಾಲಿವುಡ್ ಮತ್ತು ಪಂಜಾಬಿ ಸಿನಿಮಾಗಳಲ್ಲಿ ಹೆಸರು ಮಾಡಿರುವ ದಿವ್ಯಾ ದತ್ತ  ಕೊಟ್ಟಿರುವ ತಿರುಗೇಟು ಅಂಥಿದ್ದಲ್ಲ. ಕಿಡಿಗೇಡಿಯೊಬ್ಬ ದಿವ್ಯಾ ದತ್ತಾ ಅವರ ಫೋಟೋಕ್ಕೆ ‘ಬಿಗ್ ಟಿಟ್ಸ್’ ಎಂದು ಕಮೆಂಟ್ ಮಾಡಿದ್ದ. ಇದಕ್ಕೆ ಖಡಕ್ ರಿಯಾಕ್ಷನ್ ಕೊಟ್ಟ ದಿವ್ಯಾ ‘ಹೆಣ್ಣು ಮಕ್ಕಳ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಿನಗೆ ಮನೆ ಅಥವಾ ಶಾಲೆಯಲ್ಲಿ ಹೇಳಿ ಕೊಟ್ಟಂತೆ ಇಲ್ಲ.. ನೀನು ಇನ್ನು ಮುಂದೆ ಕಲಿತಿಲ್ಲ ಎಂದಾದರೆ ಮಧ್ಯ ರಸ್ತೆಯಲ್ಲಿ ನಿಂತು ಹೇಳಿಸಿಕೊಡಬೇಕಾಗುತ್ತದೆ’ ಎಂದಿದ್ದಾರೆ.