ರೋಗಪೀಡಿತರಿಂದ ದೂರ ಓಡಿರಿ. ಹೇಗೆ ಕುಷ್ಠ ರೋಗಿಷ್ಟರನ್ನು ಕಂಡರೆ ದೂರ ಓಡುತ್ತೀರೋ ಹಾಗೆ ಓಡಿರಿ. ಸೋಂಕುಪೀಡಿತವಾದ ಪ್ರದೇಶಗಳಿಗೆ ಹೋಗಬೇಡಿ. ಅಲ್ಲಿಂದ ಬಂದವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ. ದಿನಕ್ಕೆ ಮೂರು ಬಾರಿ ಶುದ್ಧವಾಗಿ ಕೈ ತೊಳೆದುಕೊಳ್ಳಿರಿ. ಇದು ದೇವರ ಆಜ್ಞೆಯೂ ಆಗಿದೆ ಎಂದು ಐಸಿಸ್‌ ನೋಟೀಸ್‌, ಹದೀಸ್‌ಗಳನ್ನು ಉಲ್ಲೇಖಿಸುತ್ತಾ ಹೇಳಿದೆ.

ಕೊರೊನಾ ವೈರಸ್ ಎಲ್ಲೆಡೆ ಹಾವಳಿ ಎಬ್ಬಿಸಿರುವುದು ಸರಿಯಷ್ಟೆ. ಇದು ನಮ್ಮ ನಿಮ್ಮಂಥ ಸಾಮಾನ್ಯರಲ್ಲಿ ಭಯ ಮೂಡಿಸಿರುವುದು ಸಹಜ. ಆದರೆ ಸಾವಿಗೆ ಹೆದರದವರು, ಜನಜಂಗುಳಿಯಲ್ಲಿ ನುಗ್ಗಿ ಆತ್ಮಹತ್ಯಾ ದಾಳಿ ನಡೆಸುವವರು, ಸಾವಿನ ಕಡೆಗೆ ತಾವೇ ಮುಂದಾಗಿ ನುಗ್ಗಿ ಹೋಗುವವರು ಅಂತ ನಾವು ಅಂದುಕೊಂಡ ಇಸ್ಲಾಮಿಕ್‌ ಉಗ್ರರನ್ನೂ ಈ ಕೊರೊನಾ ಹಾವಳಿ ಬಿಟ್ಟಿಲ್ಲ! ಸಿರಿಯಾದಲ್ಲಿರುವ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥರು ಈ ಬಗ್ಗೆ ತಮ್ಮ ಉಗ್ರಗಾಮಿಗಳಿಗೆ ಎಚ್ಚರಿಕೆಯ ನೋಟಿಸ್‌ ಹೊರಡಿಸಿದ್ದಾರೆ.

ಈ ಸೂಚನೆಗಳನ್ನು ನೀಡಲು ಅದು ಇಸ್ಲಾಮಿಕ್‌ ಧರ್ಮಗ್ರಂಥದಲ್ಲಿರುವ ಹದೀಸ್‌ಗಳನ್ನು ಬಳಸಿಕೊಂಡಿದೆ. ರೋಗಪೀಡಿತರಿಂದ ದೂರ ಓಡಿರಿ. ಹೇಗೆ ಕುಷ್ಠ ರೋಗಿಷ್ಟರನ್ನು ಕಂಡರೆ ದೂರ ಓಡುತ್ತೀರೋ ಹಾಗೆ ಓಡಿರಿ. ಸೋಂಕುಪೀಡಿತವಾದ ಪ್ರದೇಶಗಳಿಗೆ ಹೋಗಬೇಡಿ. ಅಲ್ಲಿಂದ ಬಂದವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ. ದಿನಕ್ಕೆ ಮೂರು ಬಾರಿ ಶುದ್ಧವಾಗಿ ಕೈ ತೊಳೆದುಕೊಳ್ಳಿರಿ. ಇದು ದೇವರ ಆಜ್ಞೆಯೂ ಆಗಿದೆ ಎಂದು ಐಸಿಸ್‌ ನೋಟೀಸ್‌, ಹದೀಸ್‌ಗಳನ್ನು ಉಲ್ಲೇಖಿಸುತ್ತಾ ಹೇಳಿದೆ.

ಚೀನಾದಿಂದ ಆಗಮಿಸಿದ ಕೊರೊನಾ ವೈರಸ್‌ ಯುರೋಪ್‌ ಎಲ್ಲೆಡೆ ಹಬ್ಬಿದೆ. ಮುಖ್ಯವಾಗಿ ಇರಾನ್‌ ಹಾಗೂ ಇಟಲಿಗಳಲ್ಲಿ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಈ ಎರಡು ದೇಶಗಳಿಗೆ ಹೋಗುವವರು ಹುಷಾರು. ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ನೇತೃತ್ವ ವಹಿಸಿಕೊಂಡವರು ತಮ್ಮವರು ಹುಷಾರಾಗಿರುವಂತೆ ನೋಡಿಕೊಳ್ಬೇಕು. ಅಲ್ಲಿಂದ ಬಂದವರನ್ನು ಸದ್ಯಕ್ಕೆ ಹತ್ತಿರ ಬಿಟ್ಟುಕೊಳ್ಳುವುದು ಬೇಕಾಗಿಲ್ಲ. ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಿ. ಫಂಡಿಂಗ್‌ ಕೂಡ ಸದ್ಯಕ್ಕೆ ಕಡಿಮೆಯಾಗಿರುವುದರಿಂದ ಎಲ್ಲ ಕಾರ್ಯಾಚರಣೆಗಳನ್ನು ನಿಲ್ಲಿಸಿ. ಇಂಟರ್ನೆಟ್‌ ಮೂಲಕ ನಡೆಸಬಹುದಾದ ಕಾರ್ಯಾಚರಣೆಗಳಿಗೆ ಹೆಚ್ಚಿನ ಗಮನ ಕೊಡುವುದು- ಹೀಗೆಂದು ಐಸಿಸ್‌ ಮುಖ್ಯಸ್ಥರು ಸೂಚನೆ ನೀಡಿದ್ದಾರಂತೆ.

ಮೊಟ್ಟೆ, ಮಾಂಸದಿಂದ ಬರುತ್ತಾ ಕೊರೋನಾ ..? 

ಇದು ಅಧಿಕೃತವಾಗಿ ಐಸಿಸ್‌ ಕೇಂದ್ರ ಸ್ಥಾನದಿಂದಲೇ ನೀಡಲಾಗಿರುವ ಸೂಚನೆ. ಇನ್ನು ನೇರವಾಗಿ ನೀಡದ, ಆದರೆ ಬಾಯ್ದೆರೆಯಾಗಿ ನೀಡಲಾದ ಸೂಚನೆಗಳೂ ಹಲವು ಇವೆ ಎಂದು ಸಿರಿಯಾದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ವರದಿ ಮಾಡಿದ್ದಾರೆ. ಅದೇನೆಂದರೆ, ಸದ್ಯಕ್ಕೆ ಐಸಿಸ್‌ ಎಲ್ಲ ಆತ್ಮಹತ್ಯಾ ದಾಳಿಗಳನ್ನು ನಿಲ್ಲಿಸುತ್ತಿದೆ. ಅದಕ್ಕೆ ಒಂದನೇ ಕಾರಣ- ಆತ್ಮಹತ್ಯಾ ದಾಳಿಗಳ ಮೂಲಕ ಶ್ವೇತವರ್ಣೀಯರನ್ನು ಸಾಯಿಸುವ ಕೃತ್ಯ ಮಾಡಲಾಗುತ್ತದೆ. ಬಿಳಿಯರಲ್ಲಿ ಭಯ ಹುಟ್ಟಿಸುವುದು ಈ ದಾಳಿಗಳ ಮೂಲ ಉದ್ದೇಶ. ಆದರೆ ಈಗ ಆ ಉದ್ದೇಶವನ್ನು ಸ್ವತಃ ಕೊರೊನಾ ವೈರಸ್ಸೇ ಮಾಡುತ್ತದೆ. ಹೀಗಾಗಿ ಸೂಸೈಡ್‌ ಬ್ಲಾಸ್ಟ್‌ಗಳ ಅಗತ್ಯವಿಲ್ಲ. ಯುರೋಪಿಯನ್ನರು ಹಾಗೂ ಅಮೆರಿಕನ್ನರು ಕೊರೊನಾ ರೋಗಕ್ಕೆ ತುತ್ತಾಗಿ ತಮಗೆ ತಾವೇ ಸತ್ತು ಹೋಗುತ್ತಾರೆ. ಈ ವಾದಕ್ಕೆ ಸಮರ್ಥನೆಯಾಗಿ ಅವರು ನೀಡುವ ದೃಷ್ಟಾಂತ ಎಂದರೆ, ಸಿರಿಯಾದ ಅಕ್ಕಪಕ್ಕದ ದೇಶಗಳು ಒಂದಲ್ಲ ಒಂದು ಕೊರೊನಾ ಕೇಸು ಹೊಂದಿದ್ದರೆ, ಐಸಿಸ್‌ ಮುಖ್ಯವಾಗಿ ನೆಲೆ ಊರಿರುವ ಸಿರಿಯಾದಲ್ಲಿ ಇದುವರೆಗೆ ಒಂದೇ ಒಂದು ಕೊರೊನಾ ಕೇಸು ಪತ್ತೆಯಾಗಿಲ್ಲ! ಅಂದರೆ, ಅಲ್ಲಾಹನು ಇಸ್ಲಾಮಿಕ್‌ ಸ್ಟೇಟ್‌ ಆಡಳಿತಕ್ಕೆ ಮುಂದಾಗಿರುವವರನ್ನು ಕಾಯುತ್ತಿದ್ದಾನೆ ಎಂದೇ ಅರ್ಥವಲ್ಲವೇ ಎಂದು ಕೇಳುತ್ತಾರೆ ಈ ಉಗ್ರರು. ಮುಸ್ಲಿಮೇತರರನ್ನು ಶಿಕ್ಷಿಸುವುದಕ್ಕಾಗಿಯೇ ಈ ರೋಗವನ್ನು ಅಲ್ಲಾಹ್‌ ಭೂಮಿಗೆ ಇಳಿಸಿದ್ದಾನೆ ಎಂದು ಅವರು ನಂಬಿದ್ದಾರೆ. ಪಾಪಿಷ್ಟರನ್ನು ಕೊರೊನಾ ವೈರಸ್‌ ಅಟ್ಯಾಕ್‌ ಮಾಡುತ್ತದೆ ಎಂದು ಹೇಳುತ್ತಿದ್ದಾರೆ.

ಕೊರೋನಾ ದೇಶದ ‘ಸೂಚಿತ ವಿಪತ್ತು’!

ಇನ್ನೊಂದು ಕುತೂಹಲಕಾರಿ ಸೂಚನೆ ಎಂದರೆ, ಹಳ್ಳಿಗಳಿಗೆ ದಾಳಿ ಮಾಡುವ ಸಂದರ್ಭದಲ್ಲಿ ಅಲ್ಲಿರುವ ಹೆಂಗಸರ ಮೇಲೆ ರೇಪ್‌ ಮಾಡುವಿಕೆಯನ್ನು ಸದ್ಯಕ್ಕೆ ಬಿಟ್ಟುಬಿಡಿ ಎಂದು. ಈ ರೇಪ್‌ ಹಾಗೂ ಉಗ್ರ ದಾಳಿ ಕೃತ್ಯಗಳಿಂದ ಸಿರಿಯಾ ಹಾಗೂ ಅಫಘಾನಿಸ್ತಾನದಲ್ಲಿರುವ ಕೆಲವು ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳೇ ನಾಶವಾಗುವ ಹಂತ ತಲುಪಿವೆ. ಈ ರೇಪ್‌ಗಳು ಹಾಗೂ ದಾಳಿಗಳು ಅಲ್ಲಿನ ಸರಕಾರಳಿಗೆ ಮಾತ್ರವಲ್ಲ, ಸ್ವತಃ ಐಸಿಸ್‌ನವರಿಗೂ ತಲೆನೋವಾಗುವ ಹಂತ ತಲುಪಿವೆ. ರೇಪ್‌ ಮಾಡುವುದು ಇಸ್ಲಾಮ್‌ ಧರ್ಮದ ಪ್ರಕಾರ ಅಪರಾಧ. ಆದರೆ ಉಗ್ರರು ಅದನ್ನೆಲ್ಲ ದಾಟಿ ಮುಂದೆ ಹೋಗಿದ್ದಾರೆ. ಅವರು ದಿನಕ್ಕೊಂದಾದರೂ ರೇಪ್‌ ಮಾಡದಿದ್ದರೆ ಹುಚ್ಚರ ಥರ ಆಡಲು ಆರಂಭಿಸುತ್ತಾರೆ. ಇದೊಂದು ಮಾನಸಿಕ ರೋಗವಾಗಿ ಪರಿಣಮಿಸಿದೆ. ಹೀಗಾಗಿ, ಸದ್ಯ ಈ ಗೀಳನ್ನು ತಡೆಹಿಡಿಯಲು ಈ ಕೊರೊನಾ ಭೀತಿಯನ್ನು ಐಸಿಸ್‌ ಮುಖ್ಯಸ್ಥರು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.