ಮುಂಬೈ (ನ.20): ಕಾರು ಚಾಲಕ ಸೇರಿ ಮೂವರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಕುಟುಂಬದ ಸದಸ್ಯರು ತಮ್ಮ ನಿವಾಸದಲ್ಲಿಯೇ ಐಸೋಲೇಶನ್‌ಗೆ ಒಳಪಟ್ಟಿದ್ದಾರೆ. 

14 ದಿನಗಳ ಕಾಲ ಕ್ವಾರಂಟೈನ್‌ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ ಸೋಂಕು ತಗುಲಿರುವ ಸಿಬ್ಬಂದಿಗಳು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ ಘೋಷಣೆಯಾಗಿದ್ದಗಲೂ ಸಲ್ಮಾನ್‌ ಖಾನ್‌ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಕ್ವಾರಂಟೈನ್‌ ಆಗಿದ್ದರು.

ಈ ನಟಿ ಜೊತೆ ರೋಮ್ಯಾನ್ಸ್‌ ಮಾಡಲು ಭಯ ಪಡುತ್ತಿದ್ದರಂತೆ ಸಲ್ಮಾನ್ ಖಾನ್ ! ..

ಈಗಾಗಲೇ ಸಾಕಷ್ಟು ಮಂದಿ ಬಾಲಿವುಡ್ ನಟ ನಟಿಯರು ಕೊರೋನಾ ಮಹಾಮಾರಿಯಿಂದ ಬಳಲಿ ಚೇತರಿಸಿಕೊಂಡಿದ್ದಾರೆ. ಸ್ವತಃ ಬಿಗ್ ಬೀಯನ್ನೂ ಕೊರೋನಾ ಕಾಡಿತ್ತು.