ಲಾಕ್‌ಡೌನ್ ಮುಗಿದ ಮೇಲೆ ತಮ್ಮದೇ ಅಗತ್ಯ ಕೆಲಸಗಳನ್ನು ಎಲ್ಲರೂ ಪ್ಲಾನ್ ಮಾಡಿಕೊಂಡಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೂ ಲಾಕ್‌ಡೌನ್‌ ನಂತರದ ಕೆಲಸಕ್ಕೆ ಸಜ್ಜಾಗಿದ್ದಾರೆ.

ಲಾಕ್ ಡೌನ್ ಮುಗಿದ ಮೇಲೆ ರಾಜಸ್ಥಾನದತ್ತ ದರ್ಶನ್ ಪ್ರಯಾಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ. 'ರಾಜವೀರ ಮದಕರಿ ನಾಯಕ' ಸಿನಿಮಾಗೆ ಈಗಾಗಲೇ ಬೃಹತ್ ಸೆಟ್ ಸಿದ್ಧವಾಗುತ್ತಿದೆ.

ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್‌ ಪ್ರಾಡೆಕ್ಟ್‌?

ಚಾಲೆಂಜಿಂಗ್ ಸ್ಟಾರ್ ನಟನೆಯ ಮತ್ತೊಂದು ಐತಿಹಾಸಿಕ ಸಿನಿಮಾ 'ರಾಜವೀರ ಮದಕರಿ ನಾಯಕ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್‌ನಲ್ಲಿಲ್ಲಿ ಸಿದ್ಧವಾಗ್ತಿರೋ ಸಿನಿಮಾ ಕೊರೊನಾ ಆರಂಭಕ್ಕೂ ಮೊದಲೇ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿತ್ತು.

ಕೇರಳದಲ್ಲಿ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ನಡೆದಿತ್ತು. ಇದೀಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಚಿತ್ರದ ಕುರಿತು ಫೇಸ್ ಬುಕ್ ಲೈವ್‌ನಲ್ಲಿ ಒಂದಷ್ಟು  ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ರಾಜವೀರ‌‌ ಮದಕರಿ ನಾಯಕ ಸಿನಿಮಾದ ಶೇ. 20 ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಸಿನಿಮಾದ ಕನ್ನಡ ಚಿತ್ರರಂಗದ ಮೈಲಿಗಲ್ಲಿನ ಸಿನಿಮಾ ಆಗಲಿದೆ ಎಂದು ಅವರು ಹೇಳಿದ್ದಾರೆ.

ಪೋರ್ನ್‌ ನೋಡಿದ್ರೆ ದುಡ್ಡು ಕೊಡ್ತಾರೆ!ಏನಿದು ಈ ಉದ್ಯಮದ ಲೆಕ್ಕಚಾರ?

ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ರಾಜಸ್ಥಾನದಲ್ಲಿ ನಡೆಯಬೇಕಿತ್ತು.  ಅಲ್ಲಿ ಬೃಹತ್ ಸೆಟ್ ನಿರ್ಮಾಣ ಯೋಚನೆಯಿತ್ತು ಲೊಕೇಷನ್ ಕೂಡ‌ ನೋಡಿಕೊಂಡು ಬರಲಾಗಿತ್ತು.. ಆದರೆ ಕೊರೊನಾ ಕಾಟದಿಂದಾಗಿ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಎಲ್ಲವೂ ಶಾಂತ ಸ್ಥಿತಿಗೆ ಬಂದ್ಮೇಲೆ ಶೂಟಿಂಗ್ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ದರ್ಶನ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತುಂಬಾ ಡೆಡಿಕೇಟೆಡ್ ಆಗಿ ದರ್ಶನ್ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ತುಂಬಾನೇ ತಯಾರಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.