ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್ ಪ್ರಾಡೆಕ್ಟ್?
ಬಾಲಿವುಡ್‌ನ ನಟಿ ಐಶ್ವರ್ಯಾ ತನ್ನ ಸೌಂದರ್ಯದಿಂದನೇ ಹೆಚ್ಚು ಫೇಮಸ್. ಎವರ್‌ಗ್ರೀನ್ ಸುಂದರಿ ಐಶ್ವರ್ಯಾ ರೈಯ ಬ್ಯೂಟಿಗೆ ಮನಸೋಲದವರು ಯಾರು? ಈ ಭುವನ ಸುಂದರಿಯಂತೆ ಚೆಂದ ಕಾಣುವ ಕನಸು ಎಲ್ಲರಿಗೂ. ಕೊನೆಗೂ ಈ ಬೆಡಗಿಯ ಚೆಲುವಿನ ಗುಟ್ಟು ಬಯಲಾಗಿದೆ. ಐಶ್ವರ್ಯಾ ರೈ ಬ್ಯೂಟಿಗೆ ಕೇರಳದ ಆಯುರ್ವೇದ ಪ್ರಾಡೆಕ್ಟ್ ಕಾರಣ ಎಂಬ ವರದಿಯೊಂದು ಹೊರಬಿದ್ದಿದೆ.ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಐಶ್ವರ್ಯಾ ರೈ ಕೇರಳದಿಂದ ಆಯುರ್ವೇದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ತೈಲ ಉತ್ಪನ್ನಗಳನ್ನು ತುಂಬಿದ ಪೆಟ್ಟಿಗೆಯನ್ನು ರಹಸ್ಯವಾಗಿ ಆರ್ಡರ್ ಮಾಡುತ್ತಾರೆ ಎಂದು ಹೇಳಲಾಗಿದೆ.
ನಟಿ ಐಶ್ವರ್ಯಾ ರೈ ತಮ್ಮ ಸೌಂದರ್ಯದಿಂಲೇ ಸುಲಭವಾಗಿ ಬಾಲಿವುಡ್‌ಗೆ ಎಂಟ್ರಿ ಪಡೆದವರು.
ಎಂಟು ವರ್ಷದ ಮಗಳನ್ನು ಹೊಂದಿರುವ ಐಶ್ವರ್ಯಾ ರೈ ಇನ್ನೂ ಕಾಲೇಜ್ ಹುಡುಗಿಯಂತೆ ಕಾಣುತ್ತಾರೆ.
ವರ್ಷ 40 ದಾಟಿದರೂ ಮುಖದಲ್ಲಿ ಒಂದು ಸುಕ್ಕು ಕಾಣದ ಈ ಚೆಲುವಿನ ಹಿಂದಿನ ರಹಸ್ಯ ಏನು?
ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಐಶ್ವರ್ಯಾ ರೈ ಕೇರಳದಿಂದ ಆಯುರ್ವೇದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ತೈಲ ಉತ್ಪನ್ನಗಳನ್ನು ತರಿಸಿಕೊಳ್ಳುತ್ತಾರಂತೆ.
ಕೇರಳದ ಆಯುರ್ವೇದ ಪ್ರಾಡೆಕ್ಟ್ ತುಂಬಿದ ಪೆಟ್ಟಿಗೆಯನ್ನು ರಹಸ್ಯವಾಗಿ ಆರ್ಡರ್ ಮಾಡುವ ನಟಿ, ಹೆರಿಗೆಯಾದಾಗಿನಿಂದ ತೈಲವನ್ನು ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಐಶ್ವರ್ಯಾ ರೈ ಬ್ಯೂಟಿಗೆ ಕಾರಣ ಕೇರಳದ ಆಯುರ್ವೇದ ಪ್ರಾಡೆಕ್ಟ್ ಎಂಬ ವರದಿ ವೈರಲ್.
'ಐಶ್ವರ್ಯಾ ರೈ ದಕ್ಷಿಣ ಭಾರತದ ಈ ಭಾಗದಿಂದ ಬರುವ ಮಸಾಲೆಗಳು ಮತ್ತು ಎಣ್ಣೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಒಂದು ಫಾರ್ಮ್‌ನಿಂದ ದೊಡ್ಡ ಪ್ಯಾಕೇಜ್ ಬಚ್ಚನ್ ಮನೆಯತ್ತ ಹೊರಟಿತ್ತು. ಪೆಟ್ಟಿಗೆಯಲ್ಲಿ ಏನಿದೆ ಎಂದು ನಾವು ಕೇಳಿದಾಗ, ಅವುಗಳು ಆಯುರ್ವೇದದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ಎಣ್ಣೆಗಳಾಗಿದ್ದವು ಹಾಗೂ ಡೆಲಿವರಿಯ ನಂತರ ಪ್ರತಿ ಸಿನಿಮಾಕ್ಕೂ ಮೊದಲು ನಟಿ ಆರ್ಡರ್ ಮಾಡುತ್ತಾರೆ ಎಂದು ತಿಳಿಸಲಾಯಿತು' ಎಂದ ಟ್ಯಾಬ್ಲಾಯ್ಡ್ ಮೂಲವೊಂದನ್ನು ವರದಿಮಾಡಿದೆ
ಐಶ್ವರ್ಯಾ ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಮತ್ತು ಯಂಗ್ ಮತ್ತು ಬ್ಯೂಟಿಫುಲ್ ಲುಕ್‌ಗೆ ಫೇಮಸ್.
ಹಾಗಾದರೆ ಬಚ್ಚನ್ ಸೊಸೆ ಸೌಂದರ್ಯ ರಹಸ್ಯಕ್ಕೆ ಪ್ರಾಚೀನ ವ್ಯವಸ್ಥೆಯಾಗಿರುವ ಆಯುರ್ವೇದದಲ್ಲಿ ಮದ್ದಿದೆ ಎನ್ನಬಹುದು.