Asianet Suvarna News Asianet Suvarna News

ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್, ಕಿವಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್!

ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿರುತ್ತದೆ. ಚಾಲೆಂಜಿಂಗ್ ಸ್ಟಾರ್ ಮನೆ ಹುಡುಗನೊಬ್ಬ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದು ಚಿತ್ರದ ಟೀಸರ್ ಅನ್ನು ದರ್ಶನ್ ಕೊಂಡಾಡಿದ್ದಾರೆ. ಯಾವುದು ಆ ಹೊಸ  ಸಿನಿಮಾ?

Challenging star Darshan Praises Sandalwood Movie Takkar Teaser
Author
Bengaluru, First Published May 2, 2019, 4:55 PM IST

ಬೆಂಗಳೂರು[ಮೇ. 02] ಎಸ್.ಎಲ್.ಎನ್. ಕ್ರಿಯೇಶನ್ಸ್ ಲಾಂಛನದಲ್ಲಿ ನಾಗೇಶ್ ಕೋಗಿಲು ನಿರ್ಮಿಸುತ್ತಿರುವ ಎರಡನೇ ಸಿನಿಮಾ ‘ಟಕ್ಕರ್’. ದರ್ಶನ್ ಅವರ ಕುಟುಂಬದ ಹುಡುಗ ಮನೋಜ್ ಈ ಸಿನಿಮಾದ ಮೂಲಕ ನಾಯಕ ನಟನಾಗಿ ಪದಾರ್ಪಣೆ  ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೇ ಟಕ್ಕರ್ ಚಿತ್ರದ ಮೊದಲ ಟೀಸರ್ ಅನ್ನು ದಿನಕರ್ ತೂಗುದೀಪ ಲೋಕಾರ್ಪಣೆಗೊಳಿಸಿದ್ದರು. ಈಗ ದರ್ಶನ್ ಅವರು ಟಕ್ಕರ್ ಚಿತ್ರತಂಡವನ್ನು ಮನೆಗೆ ಕರೆಸಿಕೊಂಡು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಈ ಚಿತ್ರವನ್ನು ಯಾವ ರೀತಿ ಬಿಡುಗಡೆ ಮಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. 

ರಕ್ಷಿತ್ ಶೆಟ್ಟಿ- ರಶ್ಮಿಕಾ ಮತ್ತೆ ಒಂದಾಗುತ್ತಿದ್ದಾರಾ?

ನಿರ್ಮಾಪಕ ನಾಗೇಶ್ ಕೋಗಿಲು ದರ್ಶನ್ ಭೇಟಿ ಮಾಡಿದ ವಿಚಾರ ಹಂಚಿಕೊಂಡಿದ್ದಾರೆ. ಮೊದಲ ಟೀಸರ್ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದು ಮಾತ್ರವಲ್ಲದೆ, ಧ್ವನಿಮುದ್ರಣಗೊಂಡಿರುವ ಟೈಟಲ್ ಸಾಂಗ್‍ ಕೇಳಿ ಅದರ ಬಗ್ಗೆ ಕೂಡಾ ದರ್ಶನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ವಿ ರಘು ಶಾಸ್ತ್ರಿ ತಿಳಿಸಿದ್ದಾರೆ.

ನಾಯಕನಟ ಮನೋಜ್ ಅವರಿಗೆ ಕಿವಿಮಾತು ಹೇಳಿರುವ ಚಾಲೆಂಜಿಂಗ್ ಸ್ಟಾರ್, ನಿನ್ನನ್ನು ನಂಬಿ ನಿರ್ಮಾಪಕರು ಹಣ ಹೂಡಿದ್ದಾರೆ. ಪ್ರತೀ ಹಂತದಲ್ಲೂ ಅವರ ಜೊತೆಗಿರಬೇಕು. ನಿರ್ಮಾಪಕರ ಹಿತ ಕಾಯಬೇಕಿರುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ. ನಾಗೇಶ್ ಕೋಗಿಲು ಮತ್ತು ನಿನ್ನ ಸ್ನೇಹ ಬಾಂಧವ್ಯ ಈ ಒಂದು ಸಿನಿಮಾಗೆ ಕೊನೆಯಾಗಬಾರದು. ಟಕ್ಕರ್ ಸಿನಿಮಾ ತೆರೆಗೆ ಬಂದಮೇಲೂ ಇನ್ನೂ ಸಾಕಷ್ಟು ಸಿನಿಮಾಗಳು ನೀವು ಒಟ್ಟಿಗೇ ಕೆಲಸ ಮಾಡಬೇಕು ಎಂದು ಶುಭ ಹಾರೈಸಿದ್ದಾರೆ.

 


 

Follow Us:
Download App:
  • android
  • ios