ಬೆಂಗಳೂರು[ಆ. 15]  ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಸಿದ್ಧವಾಗ್ತಿದೆ. ಸಂಪುಟಕ್ಕೆ ಸೇರ್ಪಡೆಯಾಗಲು ದೊಡ್ಡ ಮಟ್ಟದ ಲಾಬಿ ನಡೆಯುತ್ತಿರುವ ಮಧ್ಯೆಯೇ ಹೈಕಮಾಂಡ್ ಸೂತ್ರದಂತೆ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ತಯಾರಿ ಮಾಡ್ಕೊಂಡಿದ್ದಾರೆ. ಇದಕ್ಕಾಗಿ ದೆಹಲಿಗೆ ತೆರಳಿರುವ ಬಿಎಸ್​ವೈ ಮೂರು ದಿನಗಳ ಕಾಲ ದೆಹಲಿಯಲ್ಲಿ ಸಂಪುಟ ವಿಸ್ತರಣೆಗೆ ಪ್ಲಾನ್ ಆಫ್ ಆ್ಯಕ್ಷನ್ ಸಿದ್ಧಮಾಡಿಕೊಳ್ಳುತ್ತಿದ್ದಾರೆ.

ಮೊದಲ ಹಂತದಲ್ಲಿ 15 ಸಚಿವರಿಗೆ ಅವಕಾಶ ಕೊಡಬೇಕು ಅನ್ನೋ ಚಿಂತನೆ ಬಿಜೆಪಿ ಕೇಂದ್ರ ನಾಯಕರದ್ದಾಗಿದೆ. ಹೀಗಾಗಿ ಎಲ್ಲ ದೃಷ್ಟಿಕೋನದಿಂದಲೂ ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಡಬಲ್ ನಿರೀಕ್ಷೆಯೊಂದಿಗೆ ದೆಹಲಿಗೆ BSY, ಅಮಿತ್ ಶಾ ಬಳಿಯಿದೆ ಮತ್ತೊಂದು ಪಟ್ಟಿ!

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ, ಸಂಪುಟದ ಕುರಿತು ಸಲಹೆ ಕೇಳಲಿದ್ದಾರೆ. ಇದ್ರ ನಡುವೆ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಆಕಾಂಕ್ಷಿಗಳು ಯಡಿಯೂರಪ್ಪ ಭೇಟಿ ಮಾಡಿ, ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಸೋಮವಾರ ಅಥವಾ ಮಂಗಳವಾರ ನೂತನ ಸರ್ಕಾರದ ಸಚಿವರು ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.

ಹಾಗಾದರೆ ಸಂಭ್ಯಾವ್ಯ ಸಚಿವರು ಯಾರು? ಪಟ್ಟಿ ಇಲ್ಲಿದೆ

1.  ಆರ್. ಅಶೋಕ್ [ ಪದ್ಮನಾಭನಗರ , ಒಕ್ಕಲಿಗ]     

2. ಕೆ.ಎಸ್.ಈಶ್ವರಪ್ಪ [ಶಿವಮೊಗ್ಗ ನಗರ, ಕುರುಬ  ]

3. ಅರವಿಂದ ಲಿಂಬಾವಳಿ [ಮಹಾದೇವಪುರ, ದಲಿತ]

4. ಜೆ.ಸಿ. ಮಾಧುಸ್ವಾಮಿ [ ಚಿಕ್ಕನಾಯಕನಹಳ್ಳಿ ,ಲಿಂಗಾಯತ] 

5. ಸುನೀಲ್ ಕುಮಾರ್ [ಕಾರ್ಕಳ, ಈಡಿಗ]

6. ಗೋವಿಂದ ಕಾರಜೋಳ [ ಮುಧೋಳ, ದಲಿತ(ಎಡ)]

7.ಶ್ರೀರಾಮುಲು [ಮೊಳಕಾಲ್ಮೂರು, ವಾಲ್ಮೀಕಿ]     

8. ಉಮೇಶ್ ಕತ್ತಿ[ ಹುಕ್ಕೇರಿ, ಲಿಂಗಾಯತ]

9. ಎಸ್ ಅಂಗಾರ [ಸುಳ್ಯ, ದಲಿತ]

10. ಸಿ.ಟಿ.ರವಿ[ ಚಿಕ್ಕಮಗಳೂರು, ಒಕ್ಕಲಿಗ]

11. ಶಶಿಕಲಾ ಜೊಲ್ಲೆ [ನಿಪ್ಪಾಣಿ. ಲಿಂಗಾಯತ]     

12. ಎಂ.ಚಂದ್ರಪ್ಪ [ಹೊಳಲ್ಕೆರೆ , ದಲಿತ ಎಡ]

13. ರಾಮದಾಸ್ [ಕೃಷ್ಣರಾಜ, ಬ್ರಾಹ್ಮಣ]

14. ಕೆ.ಜಿ.ಬೋಪಯ್ಯ [ವಿರಾಜಪೇಟೆ, ಅರೆಭಾಷೆ ಗೌಡ]

15. ಜಿ.ಕರುಣಾಕರ ರೆಡ್ಡಿ [ಹರಪನಹಳ್ಳಿ,ರೆಡ್ಡಿ]

16. ನೆಹರು ಓಲೆಕಾರ್[ ಹಾವೇರಿ, ದಲಿತ ಬಲ] 

17. ಕಳಕಪ್ಪ ಬಂಡಿ [ರೋಣ, ಲಿಂಗಾಯತ]

18. ಕೆ.ಶಿವನಗೌಡ ನಾಯಕ [ ದೇವದುರ್ಗ, ವಾಲ್ಮೀಕಿ]               

19. ದತ್ತಾತ್ರೇಯ ಪಾಟೀಲ್ [ ಕಲ್ಬುರ್ಗಿ ಗ್ರಾಮೀಣ, ಲಿಂಗಾಯತ]

20. ರಾಜುಗೌಡ [ ಸುರಪುರ, ವಾಲ್ಮೀಕಿ ]