ಬೆಂಗಳೂರು, [ಜ.07]:  ನಾಳೆ ಅಂದ್ರೆ ಬುಧವಾರ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ 34ನೇ ಜನ್ಮ ದಿನ. ಇದಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದನ್ನು ಅವರ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. 

ಬೆಂಗಳೂರಿನ ನಾಯಂಡಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಹೇಳಿದಂತೆ ವಿಶ್ವದ ಯಾವುದೇ ನಟನಿಗೂ ಮಾಡಿರದ ಅತೀ ದೊಡ್ಡ ಕಟೌಟ್ ನ್ನು ಅನಾವರಣಗೊಳಿಸಲಾಗಿದೆ.

ಯಶ್ ಬರ್ತ್ ಡೇ ಸಮಾರಂಭಕ್ಕೆ ಉಚಿತ ಬಸ್: ರಾಕಿಭಾಯ್ ನೋಡುವುದನ್ನು ಮಿಸ್ ಮಾಡ್ಕೊಬೇಡಿ
 
ಈಗಾಗಲೇ 5 ಸಾವಿರ ಕೆ.ಜಿ ತೂಕದ ಕೇಕ್​ ಸಿದ್ಧಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದೀಗ 216 ಅಡಿ ಎತ್ತರದ ಕಟೌಟ್ ಅನಾವರಣಗೊಳಿಸಿ ಸಲಾಂ ರಾಕಿಭಾಯ್ ಎಂದಿದ್ದಾರೆ. ಕೆಜಿಎಫ್ ಚಿತ್ರದ ರಾಕಿ ಭಾಯ್ ಗೆಟಟ್‌ನಲ್ಲಿದೆ. 

ಈಗಾಗಲೇ ಪಾದದಿಂದ ಹಿಡಿದು ಎದೆಯವರೆಗಿನ ಕಟೌಟ್ ಜೋಡಿಸಲಾಗಿದ್ದು, ಸರಿಯಾಗಿ ಮಧ್ಯರಾತ್ರಿ 12ಕ್ಕೆ ಉಳಿದ ಕತ್ತು ಭಾಗವನ್ನು ಜೋಡಿಸಿಸಲಾಗುತ್ತದೆ. ಇದರೊಂದಿಗೆ ವಿಶ್ವದಲ್ಲೇ ಅತಿ ಎತ್ತರದ ಕಟೌಟ್ ದಾಖಲೆ ಕೂಡ ಯಶ್ ಪಾಲಾಯ್ತು.

ಈ ಹಿಂದೆ ಕಾಲಿವುಡ್​ ನಟ ಸೂರ್ಯ ಅವರ  215 ಅಡಿ ಎತ್ತರದ ಕಟೌಟ್ ದಾಖಲೆ ಇತ್ತು. ಈಗ ಹುಟ್ಟುಹಬ್ಬದಂದು ಅಭಿಮಾನಿಗಳು ರಾಕಿಂಗ್ ಸ್ಟಾರ್ ಹೆಸರಿಗೆ ಬರೆದಿದ್ದಾರೆ.

ಮತ್ತೊಂದೆಡೆ ಕೆ.ಜಿ.ಎಫ್​ ಚಿತ್ರತಂಡ ಕೂಡ ಯಶ್​ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಲಿದೆ. ಕೆ.ಜಿ.ಎಫ್​ ಚಾಪ್ಟರ್​-2 ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಹುಟ್ಟು ಹಬ್ಬದ ಪ್ರಯುಕ್ತ ರಾಕಿ ಬಾಯ್​ ಸೆಕೆಂಡ್​ ಲುಕ್​ ಬಿಡುಗಡೆಯಾಗಲಿದೆ.