ವಿದೇಶಿ ರಾಯಭಾರಿ ಜೊತೆ ಅಫೇರ್ ಇಟ್ಟುಕೊಂಡ ಮಾಡೆಲ್ ಮೆಘ್ನಾ ಅರೆಸ್ಟ್ ಆಗಿದ್ದಾರೆ. ಮದುವೆಯಾಗಿರುವ ರಾಯಭಾರಿ ಜೊತಗಿನ ಸಂಬಂಧವನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸದ್ದೇ ಮೆಘ್ನಾಗೆ ಮುಳುವಾಗಿದೆ.
ಢಾಕ(ಏ.14) ಕೆಲ ಮಿಸ್ ಸ್ಪರ್ಧೆ ಕಿರೀಟ, ಹಲವು ಬ್ರ್ಯಾಂಡ್ ಪ್ರಮೋಶನ್, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಆ್ಯಂಡ್ ಹಾಟ್ ಫೋಟೋಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಜನಪ್ರಿಯ ಮಾಡೆಲ್ ಮೆಘ್ನಾ ಅಲಮ್ ಅರೆಸ್ಟ್ ಆಗಿದ್ದಾರೆ. ಮದುವೆಯಾಗಿರುವ ವಿದೇಶಿ ರಾಯಭಾರಿ ಜೊತೆ ಅಫೇರ್ ಇಟ್ಟುಕೊಂಡಿದ್ದೆ ಈ ಬಂಧನಕ್ಕೆ ಕಾರಣ ಎನ್ನಲಾಗುತ್ತಿದೆ. ವಿದೇಶಿ ರಾಯಭಾರಿಗೆ ಈಗಾಗಲೇ ಮದುವೆಯಾಗಿದೆ. ಆದರೆ ರಹಸ್ಯವಾಗಿ ಮಾಡೆಲ್ ಮೆಘ್ನಾ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಆದರೆ ಮೆಘ್ನಾ ತನ್ನ ರಿಲೇಶನ್‌ಶಿಪ್‌ನ್ನು ಫೇಸ್‌ಬುಕ್ ಮೂಲಕ ಬಹಿರಂಗಪಡಿಸಿದ್ದಳು. ಇದು ರಾಯಭಾರಿ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಮಾಡೆಲ್ ಮೆಘ್ನಾ ಅರೆಸ್ಟ್ ಆದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ರಹಸ್ಯ ಫೇಸ್‌ಬುಕ್ ಮೂಲಕ ಬಯಲು
ಸ್ಪೆಷಲ್ ಪವರ್ ಕಾಯ್ದಿ ಅಡಿ ಮೆಘ್ನಾ ಅಲಮ್ ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಮಾಡೆಲ್ ಆಗಿ, ನಟಿಯಾಗಿ ಮೆಘ್ನಾ ಮಿಂಚಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ವಿದೇಶಿ ರಾಯಭಾರಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಆದರೆ ಈ ಸಂಬಂಧ ರಹಸ್ಯವಾಗಿತ್ತು. ಕಾರಣ ವಿದೇಶಿ ರಾಯಭಾರಿಗೆ ಈಗಾಗಲೇ ಒಂದು ಮದುವೆಯಾಗಿ ಸಂಸಾರವಿದೆ. ಹೀಗಾಗಿ ರಹಸ್ಯವಾಗಿ ಈ ಸಂಬಂಧ ಇಟ್ಟುಕೊಳ್ಳಲಾಗಿತ್ತು ಎಂದು ಮೆಘ್ನಾ ಹೇಳಿದ್ದಾರೆ. ಆದರೆ ಮೆಘ್ನಾ ಈ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಮದುವೆಯಾಗಲು ತಯಾರಾಗಿದ್ದರು. ಅತ್ತ ರಾಯಭಾರಿ ಮಾತ್ರ ಈ ಸಂಬಂಧವನ್ನು ಕೊನೆಯವರೆಗೂ ರಹಸ್ಯವಾಗಿ ಇಟ್ಟುಕೊಳ್ಳಲು ಬಯಸಿದ್ದ.
ಭಾರತದ ವಿರುದ್ಧ ಸೈಲೆಂಟಾಗಿ ಚೀನಾ, ಬಾಂಗ್ಲಾ, ಪಾಕ್ ಸಂಚು! ಏನಿದು 'ಚಿಕನ್ ನೆಕ್' ಪ್ಲಾನ್?
ಇದರ ನಡುವೆ ಮೆಘ್ನಾ ಫೇಸ್‌ಬುಕ್ ಮೂಲಕ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಇದು ಕೋಲಾಹಲ ಎಬ್ಬಿಸಿದೆ. ರಾಯಭಾರಿ ಅಧಿಕಾರಿ ಸಂಸಾರದಲ್ಲೂ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಅಧಿಕಾರಿ ಫೋಟೋಗಳನ್ನು ಡಿಲೀಟ್ ಮಾಡುವಂತೆ ಹಾಗೂ ಸಂಬಂಧ ಕುರಿತು ಎಲ್ಲೂ ಬಾಯಿಬಿಡದಂತೆ ಧಮ್ಕಿ ಹಾಕಿದ್ದಾರೆ ಎಂದು ಮೆಘ್ನಾ ಆರೋಪಿಸಿದ್ದಾಳೆ. ಫೇಸ್‌ಬುಕ್ ಪೋಸ್ಟ್ ಡಿಲೀಟ್ ಮಾಡಿದರೂ ಅಧಿಕಾರಿ ಮಾತ್ರ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರ ದುರ್ಬಳಕೆ ಆರೋಪ
ಮೆಘ್ನಾ ರಿಲೇಶನ್‌ಶಿಪ್ ಬಹಿರಂಗಪಡಿಸುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ರಾಯಭಾರಿ ಅಧಿಕಾರಿಗಳೆ ಸಾಂಸರಿಕ ಸಮಸ್ಯೆಗಳು ಎದುರಾಗಿದೆ. ಹೀಗಾಗಿ ಹೀಗೆ ಮುಂದುವರಿದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ ಅನ್ನೋದು ಮನಗಂಡ ಅಧಿಕಾರಿ ತನ್ನ ಅಧಿಕಾರ ಬಳಸಿ ಮೆಘ್ನಾ ಅಲಮ್ ಬಂಧಿಸಲು ಬಾಂಗ್ಲಾದೇಶ ಪೊಲೀಸರಿಗೆ ಸೂಚಿಸಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
ಲೈವ್ ಸ್ಟ್ರೀಮ್ ವೇಳೆ ಬಂಧನ
ಢಾಕಾ ಪೊಲೀಸರು ಮೆಘ್ನಾ ಮನೆಗೆ ಆಗಮಿಸುವ ಕೆಲ ನಿಮಿಷಗಳ ಮೊದಲು ಫೇಸ್‌ಬುಕ್ ಮೂಲಕ ಲೈವ್ ಆಗಮಿಸಿದ್ದ ಮೆಘ್ನಾ ತನ್ನ ಬಂಧನ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರು ಆಗಮಿಸಿ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಇದರಿಂದ ಲೈವ್ ಸ್ಟ್ರೀಮ್ ಅರ್ಧಕ್ಕೆ ನಿಂತಿದೆ. ಇತ್ತ ಕೆಲ ಹೊತ್ತಿನ ಬಳಿಕ ಈ ವಿಡಿಯೋ ಡಿಲೀಟ್ ಮಾಡಲಾಗಿದೆ.
ಪಾಕಿಸ್ತಾನವನ್ನೂ ಮೀರಿಸಿದ ಬಾಂಗ್ಲಾದೇಶ; ಮನೆ ಬಾಗಿಲವರೆಗೂ ಬಂತು ವಿಮಾನ
