ಸಿನಿಮಾದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಅಲೆದಾಡಿದ್ದರು ಪರ್ಲ್ ಪಂಜಾಬಿ | ಅವಕಾಶ ಸಿಗದಿದ್ದುದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣು | 

ಮುಂಬೈ (ಆ. 30): ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಾಕಷ್ಟು ಸಮಯದಿಂದ ಪ್ರಯತ್ನಿಸುತ್ತಿದ್ದ ಮಹಿಳೆಯೊಬ್ಬಳು ಸಕ್ಸಸ್ ಆಗದೇ ಇದ್ದುದ್ದಕ್ಕೆ ಮನನೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪರ್ಲ್ ಪಂಜಾಬಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಇವರು ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜೊತೆಗೆ ಅಮ್ಮನ ಜೊತೆ ಆಗಾಗ ಜಗಳಗಳು ಆಗುತ್ತಿತ್ತು ಎಂದು ಹೇಳಲಾಗಿದೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಬಚಾವ್ ಮಾಡಲಾಗಿತ್ತು. 

Scroll to load tweet…

ಮುಂಬೈನಲ್ಲಿರುವ ಈಶಿವಾರಾ ಅಪಾರ್ಟ್ ಮೆಂಟ್ ನಿಂದ ಗುರುವಾರ ರಾತ್ರಿ ಅಂದರೆ ಆ. 30 ರ ಮಧ್ಯರಾತ್ರಿ 12.30 ರ ಸುಮಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.