ಬೆಂಗಳೂರು[ಮಾ. 31] ಈ ವರ್ಷದ ಜನವರಿ 1ರಂದು ಬಾಯ್ ಫ್ರೆಂಡ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದ ಆ್ಯಮಿ ಜಾಕ್ಸನ್ ಇದೀಗ ತಾನು ಗರ್ಭವತಿಯಾಗಿದ್ದೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.

ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿದ್ದ ಆ್ಯಮಿ ಬಳಿಕ ಮದುವೆ ಮಾತಿಂದ ದೂರವೇ ಇದ್ದರು. ಆ್ಯಮಿ ಜಾಕ್ಸನ್ ತನ್ನ ಭಾವಿ ಪತಿ ಜಾರ್ಜ್ ಅಪ್ಪಿಕೊಂಡಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿ ಸಂಚಲನ ಮೂಡಿಸಿದ್ದರು.

ಹಾಟ್ ಅವತಾರದಲ್ಲಿ ಜಾಕ್ಸನ್

ಯಾಯಂದಿರ ದಿನವೇ ನಾನು ಗರ್ಭವತಿಯಾಗಿರುವುದು ತಿಳಿಯಿತು ಎಂದು ಜಾಕ್ಸನ್ ಹೇಳಿದ್ದಾರೆ. 2020ಕ್ಕೆ ಜೋಡಿ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.