2023ರಲ್ಲಿ ಮರಳಿ ಭಾರತದ ಪೌರತ್ವ ಪಡೆದುಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನ ಚಲಾಯಿಸಿದ್ದಾರೆ. ಮತದಾನದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ಈ ಬಾರಿ ಹೆಚ್ಚು ವೋಟಿಂಗ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ನಡೆದಿದೆ. ಇಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಬ್ಬ ನಡೆಯುತ್ತಿದ್ದು, ಮತದಾನದ ಹಕ್ಕು ಚಲಾಯಿಸಿದ ಬಳಿಕ ಕಿಲಾಡಿ ಅಕ್ಷಯ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಮತದಾನದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ನನ್ನ ಭಾರತ ವಿಕಸಿತ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇವತ್ತು ಮತ ಚಲಾಯಿಸಿದ್ದೇನೆ. ಭಾರತದ ಜನರು ತಮ್ಮ ಸ್ವವಿವೇಚನೆಯಿಂದ ಆಲೋಚಿಸಿ ಮತ ಹಾಕಬೇಕು ಎಂದು ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡರು. 

ಹೆಚ್ಚ ಮತದಾನ ಆಗಲಿದೆ, ಅಕ್ಕಿ ವಿಶ್ವಾಸ

ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಕ್ಷಯ್, ಇಂದು ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆ ಬಂದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಈಗಲೂ ಸುಮಾರು 200 ರಿಂದ 300 ಜನರು ಮತಗಟ್ಟೆಯೊಳಗೆ ನಿಂತಿದ್ದಾರೆ. ಹಾಗಾಗಿ ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ಹೇಳಿದ ಅಕ್ಷಯ್ ಕುಮಾರ್ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

Scroll to load tweet…

ಅಕ್ಷಯ್ ಕುಮಾರ್ 2023ರ ಆಗಸ್ಟ್‌ನಲ್ಲಿ ಭಾರತದ ಪೌರತ್ವ ಪಡೆದುಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೌರತ್ವ ಪಡೆದ ಪ್ರಮಾಣಪತ್ರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. 

ರಾತ್ರಿ ಬೆಳಗಾಗೋದ್ರೊಳಗೆ ತಮ್ಮ ಪಾತ್ರಕ್ಕೆ ಸ್ಟಾರ್ ಕಿಡ್ ಹಾಕಿದ್ದರು; ರಾಜ್‌ಕುಮಾರ್ ರಾವ್ ಬೇಸರ

1990ರಲ್ಲಿ ಕೆನಡಾದ ಪೌರತ್ವಕ್ಕೆ ಅರ್ಜಿ 

ಅಕ್ಷಯ್ ಕುಮಾರ್ 1990ರಲ್ಲಿ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಮಯದಲ್ಲಿ ಅಕ್ಷಯ್ ಕುಮಾರ್ ನಟನೆಯ 15ಕ್ಕೂ ಹೆಚ್ಚು ಸಿನಿಮಾಗಳು ಯಶಸ್ಸು ಕಂಡಿರಲಿಲ್ಲ. ತದನಂತರ ಮತ್ತೆ ಸಿನಿಮಾಗಳಲ್ಲಿ ಯಶಸ್ಸು ಸಿಗುತ್ತಿದ್ದಂತ 2019ರಲ್ಲಿ ಮತ್ತೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿ, ನಾಗರೀಕತ್ವ ಪಡೆದುಕೊಂಡಿದ್ದರು.

View post on Instagram

ಭಾರತವೇ ನನಗೆ ಸರ್ವಸ್ವ

ಕೆನಡಾದ ಪೌರತ್ವ ತ್ಯಜಿಸುವ ಪ್ರತಿಕ್ರಿಯಿಸಿದ್ದ ಅಕ್ಷಯ್ ಕುಮಾರ್, ಭಾರತವೇ ನನಗೆ ಸರ್ವಸ್ವ. ನನ್ನ ಹೃದಯ ಮತ್ತು ಪೌರತ್ವ ಎಲ್ಲವೂ ಹಿಂದೂಸ್ತಾನವಾಗಿದೆ. ನಾನು ಗಳಿಸಿದ್ದು ಎಲ್ಲವೂ ಇಲ್ಲಿಂದಲೇ, ಮತ್ತೆ ಭಾರತದ ಪೌರತ್ವವನ್ನು ಹಿಂಪಡೆಯುತ್ತಿರೋದಕ್ಕೆ ನನಗೆ ಸಂತೋಷವಾಗಿದೆ ಎಂದು ಸಂತಸವನ್ನು ಹಂಚಿಕೊಂಡಿದ್ದರು. ಕೆಲವೊಮ್ಮೆ ಜನರು ಯಾವ ವಿಷಯವನ್ನು ತಿಳಿದುಕೊಳ್ಳದೇ ಮಾತನಾಡಿದ ಬೇಸರ ಆಗುತ್ತದೆ ಎಂದು ತಮ್ಮ ವಿರುದ್ಧ ಕೇಳಿ ಬಂದ ಟೀಕೆಗೆ ಅಸಮಾಧಾನ ಹೊರ ಹಾಕಿದ್ದರು. 

ಕೇನ್ಸ್ ಫೆಸ್ಟಿವಲ್​ನಲ್ಲಿ ವೇಶ್ಯೆ ಪಾತ್ರಧಾರಿ ಶೋಭಿತಾ: ಗೋಲ್ಡನ್​ ಡ್ರೆಸ್​ನಲ್ಲಿ ಮತ್ಸ್ಯಕನ್ಯೆಯಂತೆ ಕಂಡ ನಟಿ

ಜಾಹ್ನವಿ ಕಪೂರ್, ರಾಜಕುಮಾರ್ ರಾವ್, ಫರ್ಹಾನ್ ಅಖ್ತರ್, ಜೋಯಾ ಅಖ್ತರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮತದಾನ ಚಲಾಯಿಸುತ್ತಿದ್ದಾರೆ. ಬಡೇ ಮಿಯಾ, ಚೋಟೇ ಮಿಯಾ ಸಿನಿಮಾದಲ್ಲಿ ಕೊನೆಯ ಬಾರಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಈ ಚಿತ್ರ ಸದ್ದು ಮಾಡಿರಲಿಲ್ಲ. ಇದೇ ಚಿತ್ರದಲ್ಲಿ ಟೈಗರ್ ಶ್ರಾಫ್ ಸಹ ನಟಿಸಿದ್ದರು.