ಬೆಂಗಳೂರು (ಮೇ. 19): ನಟಿ ರಾಧಿಕಾ ಕುಮಾರಸ್ವಾಮಿಗೆ ಪಿತೃವಿಯೋಗವಾಗಿದೆ.  

ರಾಧಿಕಾ ಕುಮಾರಸ್ವಾಮಿ ತಂದೆ ದೇವರಾಜ್ ಕೆಲದಿನಗಳಿಂದ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ. 
ಕಳೆದ ನಾಲ್ಕು ದಿನಗಳಿಂದ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ರಾಧಿಕಾ ಕುಟುಂಬ ನೇಮ ಕೋಲ ಸೇವೆಯಲ್ಲಿ ಭಾಗವಹಿಸಿತ್ತು. ಅಲ್ಲಿಂದ ವಾಪಸ್ಸಾದ ಬಳಿಕ ಕಫದ ಸಮಸ್ಯೆ ಹೆಚ್ಚಾಗಿ ದೇವರಾಜ್ ವಿಧಿವಶರಾಗಿದ್ದಾರೆ.