Youth Dies After Being Falsely Accused in Minor Pregnancy Case ಅಪ್ರಾಪ್ತೆ ಗರ್ಭಿಣಿ ಪ್ರಕರಣದಲ್ಲಿ ತನ್ನ ಮೇಲೆ ಬಂದ ಸುಳ್ಳು ಆರೋಪದಿಂದ ಮನನೊಂದು, ಮೈಸೂರಿನ ಪಿರಿಯಾಪಟ್ಟಣದ ಯುವಕನೊಬ್ಬ ವಾಟ್ಸಾಪ್ ಆಡಿಯೋ ನೋಟ್ ಕಳುಹಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಮೈಸೂರು (ನ.3): ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಯುವಕ ಕಾರಣ ಎನ್ನುವ ಆರೋಪದಿಂದ ಮನನೊಂದು ಯುವಕನೊಬ್ಬ ವಾಟ್ಸಾಪ್‌ನಲ್ಲಿ ಆಡಿಯೋ ನೋಟ್‌ ದಾಖಲಿಸಿ ಆ*ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಾಯ್ಸ್‌ ನೋಟ್‌ಅನ್ನು ಕಳಿಸಿ ನಾಲೆಗೆ ಹಾರಿ ಯುವ ಆ*ಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ನಿವಾಸಿ 27 ವರ್ಷದ ರಾಮು ಮೃತ ಯುವಕ ಎಂದು ಗುರುತಿಸಲಾಗಿದೆ.

ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇದರಿಂದಾಗಿ ಊರಿನಲ್ಲಿ ನನಗೆ ಎಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ. ಘಟನೆಯಿಂದ ತುಂಬಾ ನೋವಾಗಿದೆ. ಶಾಲೆಗೆ ವೈದ್ಯರು ಬಂದು ವಿದ್ಯಾರ್ಥಿನಿಯನ್ನು ಚೆಕ್‌ ಮಾಡಿದ ವೇಳೆ ಆಕೆ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಶಾಲೆಗೆ ಕಳಂಕ ಬರುತ್ತೆ ಅಂತಾ ಕೇಸ್ ಮುಚ್ಚಿ ಹಾಕ್ತಿದ್ದಾರೆ ಎಂದು ವಾಯ್ಸ್‌ನೋಟ್‌ನಲ್ಲಿ ರಾಮು ಹೇಳಿದ್ದಾನೆ.

ಶಾಲೆಯ ದೈಹಿಕ ಶಿಕ್ಷಕನೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ಮೃತ ಯುವಕ ಆರೋಪಿಸಿದ್ದಾರೆ. ಆದರೆ ಆಕೆಯ ಜೊತೆ ಸಲುಗೆಯಿಂದ ಮಾತಾಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡಲಾಗಿದೆ. ಶಾಲೆಯ ದೈಹಿಕ ಶಿಕ್ಷಕ ಇದಕ್ಕೆಲ್ಲ ಕಾರಣ. ಅವರು ಹೀಗೆ ಮಾಡಿದಕ್ಕೆ ಈಗ ನನ್ನ ಮೇಲೆ ಹೇಳುತ್ತಿದ್ದಾರೆ. ಹೀಗಾಗಿ ತಾನು ಸೂಸೈಡ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಯ್ಸ್ ನೋಟ್‌ನಲ್ಲಿ ತಿಳಿಸಲಾಗಿದೆ.

ತುಂಗಾ ನಾಲೆಯಲ್ಲಿ ಪತ್ತೆಯಾದ ಶವ

ಪಿರಿಯಾಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಅಕ್ಟೋಬರ್‌ 31 ರಂದು ವಾಯ್ಸ್ ನೋಟ್ ಹಾಕಿ ಯುವಕ ನಾಪತ್ತೆಯಾಗಿದೆ. ಈಗ ಬೆಟ್ಟದ ತುಂಗಾ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೆಟ್ಟದ ತುಂಗಾ ಗ್ರಾಮದ ನಾಲೆ ಬಳಿ ಬೈಕ್, ಚಪ್ಪಲಿ, ಮೊಬೈಲ್, ಜರ್ಕಿನ್ ಬಿಟ್ಟು ನಾಲೆಗೆ ಹಾರಿ ಆ*ಹತ್ಯೆ ಮಾಡಿಕೊಂಡಿದ್ದಾನೆ. ಡಿಎನ್ಎ ಟೆಸ್ಟ್ ಮೂಲಕ ತಪ್ಪಿತಸ್ಥರ ಪತ್ತೆಗೆ ಒತ್ತಾಯ ಮಾಡಲಾಗಿದ್ದು, ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.