ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ, 2 ಗಂಟೆಯಿಂದ ಪ್ರಯಾಣಿಕರ ಪರದಾಟ, ಮೈಸೂರಿನಿಂದ ಹೊರಟ ರೈಲು ಚನ್ನಪಟ್ಟಣ ಬಳಿ ಕೆಟ್ಟು ನಿಂತಿದೆ. ರೈಲ್ವೆ ಪೊಲೀಸರು ಭೇಟಿ ನೀಡಿದ್ದಾರೆ.

ಬೆಂಗಳೂರು (ನ.22) ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಟ್ಟು ನಿಂತಿರುವ ಘಟನೆ ರಾಮನಗರ ಚನ್ನಪಟ್ಟಣ ನಡುವೆ ನಡೆದಿದೆ. ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ವೈಫಲ್ಯ ಎದುರಾಗಿದೆ. ಇದರ ಪರಿಣಾಮ ಸುಮಾರು ಎರಡು ಗಂಟೆಯಿಂದ ರೈಲು ಕೆಟ್ಟು ನಿಂತಿತ್ತು. ಬರೋಬ್ಬರಿ 2 ಗಂಟೆಯಿಂದ ಪ್ರಯಾಣಿಕರು ಪರದಾಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ರೈಲ್ವೇ ಪೊಲೀಸರು ಭೇಟಿ ನೀಡಿದ್ದಾರೆ, ಇತ್ತ ತಾಂತ್ರಿಕ ಸಿಬ್ಬಂದಿಗಳ ಪ್ರಯತ್ನದಿಂದ ಬೇರೆ ಎಂಜಿನ್ ಸಹಾಯದಲ್ಲಿ ಬೆಂಗಳೂರಿನತ್ತ ರೈಲು ಹೊರಟಿದೆ.

ರೈಲಿನ ಪೆಟ್ರೋಲ್ ಲೀಕ್

ಮೈಸೂರಿನಿಂದ ವೇಗವಾಗಿ ಬೆಂಗಳೂರಿನತ್ತ ಹೊರಟ ರೈಲಿನ ಪೆಟ್ರೋಲ್ ಟ್ಯಾಂಕ್‌ಗೆ ಕಬ್ಬಿಣದ ರಾಡ್ ಬಡಿದಿದೆ. ಇದರ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿದೆ. ಇದರ ಪರಿಣಾಮ ರೈಲು ಸ್ಥಗಿತಗೊಂಡಿದೆ. ರಾಮನಗರ ಚನ್ನಪಟ್ಟಣ ಮಧ್ಯೆ ವಂದರಗೊಪ್ಪೆ ಗ್ರಾಮದ ಬಳಿ ರೈಲು ಸಂಪೂರ್ಣವಾಗಿ ಕೆಟ್ಟು ನಿಂತಿದೆ. ರೈಲು ಸಿಬ್ಬಂದಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಬೀದರ್‌ನಲ್ಲಿ ತಪ್ಪಿದ ಬಾರಿ ದುರಂತ

ಇತ್ತೀಚೆಗೆ ಬೀದರ್‌ನಲ್ಲಿ ಭಾರಿ ರೈಲು ದುರಂತವೊಂದು ತಪ್ಪಿದೆ. ಬೀದರ್ ನಗರದ ನೌಬಾದ್ ಬಳಿ ವ್ಯಕ್ತಿಯೊಬ್ಬರು ಬೈಕ್ ಮೂಲಕ ಸಾಗುತ್ತಿದ್ದರು. ರೈಲ್ವೇ ಕ್ರಾಸಿಂಗ್ ಬಳಿ ಬೈಕ್ ಮೂಲಕ ಸಾಗುತ್ತಿದ್ದಂತೆ ವೇಗವಾಗಿ ಕಲಬುರಗಿಯಿಂದ ಬೀದರ್ ಮದ್ಯೆ ಸಂಚರಿಸುವ ರೈಲು ಆಗಮಿಸಿದೆ. ರೈಲು ಆಗಮಿಸಿದ ಕಾರಣ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ರೈಲು ಬಿಟ್ಟು ಓಡಿದ್ದಾರೆ. ರೈಲು ಹಳಿಯಲ್ಲಿ ಬೈಕ್ ಬಿಟ್ಟು ಪರಾರಿಯಾದ ಕಾರಣ ವ್ಯಕ್ತಿಯ ಪ್ರಾಣ ಉಳಿದಿದೆ. ಆದರೆ ಹಳಿಯ ಮೇಲಿದ್ದ ಬೈಕ್ ಕಂಡ ರೈಲ್ವೇ ಚಾಲಕ ರೈಲು ನಿಲ್ಲಿಸಿದ ಘಟನೆ ನಡೆದಿತ್ತು. ಪರಿಣಾಮ ಭಾರಿ ದುರಂತವೊಂದು ತಪ್ಪಿದೆ.

ಮಳೆಗ ಕೊಚ್ಚಿ ಹೋಗಿದ್ದ ಹಳಿ

ಚಿಕ್ಕಮಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಹಳಿಗಳು ಕೊಚ್ಚಿ ಹೋಗಿತ್ತು. ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲು ಕಣಿವೆ ಗ್ರಾಮದ ಬಳಿ ಬರುತ್ತಿದ್ದಂತೆ ರೈಲ್ವೇ ಸಿಬ್ಬಂದಿಗಳು ಹಳಿ ಕೊಚ್ಚಿ ಹೋಗಿರುವುದು ಗಮನಿಸಿದ್ದಾರೆ. ರೈಲ್ವೆ ಹಳಿಯ ಜಲ್ಲಿ ಕಲ್ಲುಗಳು ಕೊಚ್ಚಿ ಹೋಗಿ ಬೇಸ್ ಲಯ ತಪ್ಪಿತ್ತು. ಕಣಿವೆ ರೈಲ್ವೆ ಸ್ಟೇಷನ್ ಸಿಬ್ಬಂದಿಗಳಿಂದ ರೈಲು ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಇದರ ಪರಿಣಾಮ ಚಲಿಸುತ್ತಿದ್ದ ರೈಲನ್ನ ತಕ್ಷಣವೇ ಚಾಲಕ ನಿಲ್ಲಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಕಾರಣ ದುರಂತವೊಂದು ತಪ್ಪಿತ್ತು. ಸುಮಾರು 30 ನಿಮಿಷಗಳ ಕಾಲ ರೈಲು ನಿಲ್ಲಿಸಲಾಗಿತ್ತು. ಹಳಿಗಳ ದುರಸ್ತಿ ಮಾಡಿದ ಬಳಿಕ ರೈಲು ಸಂಚಾರ ಮಂದುವರಿಸಿದ ಘಟನೆ ಕಳೆದ ತಿಂಗಳು ನಡೆದಿತ್ತು.