ಒಂದು ರಾತ್ರಿಯಲ್ಲಿ ನಡೆಯುವ ಹಲವು ಸನ್ನಿವೇಶಗಳು ಕೊನೆಗೆ ಏನಾಗುತ್ತವೆ ಎಂಬುದನ್ನು ತಾಳ್ಮೆಯಿಂದ ನೋಡಿದರೆ ತಿಳಿಯುತ್ತದೆ. ಏಕಕಾಲದಲ್ಲಿ ಪೊಲೀಸ್ ಅಧಿಕಾರಿ ಮತ್ತು ಆತನ ಮನೆ ಮೇಲೆ ಯಾಕೆ ದಾಳಿ ಮಾಡುತ್ತಾರೆ ಎನ್ನುವ ಚಿತ್ರದ ಮೂಲ ಕೇಂದ್ರಬಿಂದು.
ಆರ್ ಕೆ
ಆ ಒಂದು ರಾತ್ರಿ ಏನೆಲ್ಲ ನಡೆಯುತ್ತವೆ ಗೊತ್ತಾ! ಪೊಲೀಸ್ ಅಧಿಕಾರಿ ಮನೆ ಮೇಲೆ ಆಟ್ಯಾಕ್, ಸಂಕಷ್ಟದಲ್ಲಿರುವ ಖಾಕಿ ಪತ್ನಿ, ಮನೆ ಬಿಟ್ಟು ಹೊರಟಿರುವ ಪ್ರೇಮಿಗಳು, ಪುಂಡರಿಂದ ಒದೆ ತಿನ್ನುವ ವ್ಯಕ್ತಿ, ಮಾದಕ ಪದಾರ್ಥಗಳನ್ನು ಹೊತ್ತು ಸಾಗುವ ರೌಡಿ... ಈ ಪ್ರಮುಖ ಘಟನೆ-ಸನ್ನಿವೇಶಗಳನ್ನು ಸಾಣೆ ಹಿಡಿದು, ಕಿವಿಗಳನ್ನು ತಟ್ಟಿ ತಟ್ಟಿ ಎಚ್ಚರಿಸುವ ಹಿನ್ನೆಲೆ ಸಂಗೀತ, ಗೊಂದಲ-ಭಯದಿಂದ ಓಡಾಡುವ ಪಾತ್ರಧಾರಿಗಳು, ಬಾರೊಂದರಲ್ಲಿ ನಡೆಯುವ ಚೇಷ್ಟೆಗಳು... ಇವಿಷ್ಟು ಆ ಒಂದು ರಾತ್ರಿ ನಡೆಯುತ್ತವೆ.
ಒಂದು ರಾತ್ರಿಯಲ್ಲಿ ನಡೆಯುವ ಹಲವು ಸನ್ನಿವೇಶಗಳು ಕೊನೆಗೆ ಏನಾಗುತ್ತವೆ ಎಂಬುದನ್ನು ತಾಳ್ಮೆಯಿಂದ ನೋಡಿದರೆ ತಿಳಿಯುತ್ತದೆ. ಏಕಕಾಲದಲ್ಲಿ ಪೊಲೀಸ್ ಅಧಿಕಾರಿ ಮತ್ತು ಆತನ ಮನೆ ಮೇಲೆ ಯಾಕೆ ದಾಳಿ ಮಾಡುತ್ತಾರೆ ಎನ್ನುವ ಚಿತ್ರದ ಮೂಲ ಕೇಂದ್ರಬಿಂದು. ಈ ಮೂಲದಿಂದ ಹುಟ್ಟಿಕೊಂಡು ಸನ್ನಿವೇಶಗಳ ಅಂತ್ಯ ಮತ್ತು ಆರಂಭವೇ ಸ್ಕ್ರೀನ್ ಪ್ಲೇ ಅಥವಾ ನಿರೂಪಣೆ.
ಚಿತ್ರ: ಎಫ್.ಐ.ಆರ್. 6 ಟು 6
ತಾರಾಗಣ: ವಿಜಯ್ ರಾಘವೇಂದ್ರ, ಸಿರಿರಾಜ್, ಸ್ವಾತಿ, ಯಶಾ ಶೆಟ್ಟಿ, ಬಾಲ ರಾಜವಾಡಿ, ನಾಗೇಂದ್ರ ಅರಸ್, ಯಶ್ ಶೆಟ್ಟಿ
ನಿರ್ದೇಶನ: ಕೆ ವಿ ರಮಣರಾಜ್
ಡ್ರಗ್ ಡೀಲ್ ಮಾಡುವ ಖಳನಾಯಕನ ತಮ್ಮನ ಸಾವು ಕತೆಯ ಮತ್ತೊಂದು ಪಿಲ್ಲರ್. ನಿರ್ದೇಶಕ ಕೆ ವಿ ರಮಣರಾಜ್ ಒಂದು ಥ್ರಿಲ್ಲರ್ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಏಕಕಾಲದಲ್ಲಿ ಎಲ್ಲಾ ಘಟನೆಗಳನ್ನು ಹೇಳುವ ಸಾಹಸದಲ್ಲಿ ಚಿತ್ರಕಥೆಯಲ್ಲೇ ಗೊಂದಲ ಸೃಷ್ಟಿಸಿದ್ದಾರೆ. ಲಾಜಿಕ್ ನೋಡಿದರೆ ತಾಳ್ಮೆಯಿಂದ ನೋಡಬೇಕಾದ ಸಿನಿಮಾ ಇದು.
