ಮಹಾಭಾರತ ದರ್ಶನ ಮಾಡಿಸಿದ ‘ಕುರುಕ್ಷೇತ್ರ’; ಇಲ್ಲಿದೆ Review
ದರ್ಶನ್ 50 ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ | ಮಹಾಭಾರತ ಕಥೆಯನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದೆ ಕುರುಕ್ಷೇತ್ರ ಟೀಂ | ಬಹುತಾರಾಗಣವಿರುವ ಚಿತ್ರ ಇದಾಗಿದೆ | ಕನ್ನಡ, ತೆಲುಗಿನಲ್ಲಿ ರಿಲೀಸ್
ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಯನದ ಬಹುನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ' ಬಿಡುಗಡೆಯಾಗಿದೆ. ಡಿ ಬಾಸ್ ಅಭಿಮಾನಿಗಳು ಚಿತ್ರ ವೀಕ್ಷಣೆ ಮಾಡಿ ಸಂಭ್ರಮಿಸಿದ್ದಾರೆ. ಥಿಯೇಟರ್ ಗಳ ಮುಂದೆಲ್ಲಾ ಕುರುಕ್ಷೇತ್ರ, ದರ್ಶನ್ ಕಟೌಟ್ ಗೆ ಹಾಲಿನ ಅಭಿಷೇಕ, ಹೂವಿನ ಹಾರಗಳು ರಾರಾಜಿಸುತ್ತಿವೆ. ಡಿ ಬಾಸ್ 50 ನೇ ಚಿತ್ರ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. 3 ಡಿಯಲ್ಲಿ ಮೂಡಿಬಂದ ಮೊದಲ ಪೌರಾಣಿಕ ಚಿತ್ರ ಇದಾಗಿದೆ.
ದುರ್ಯೋಧನನ ಮೈಮೇಲಿತ್ತು ಕೆಜಿ ಭಾರದ ಕಾಸ್ಟ್ಯೂಮ್; ಇಲ್ಲಿದೆ ಫೋಟೋಗಳು
2012 ರಲ್ಲಿ ತೆರೆಕಂಡ ಸಂಗೊಳ್ಳಿ ರಾಯಣ್ಣ ಯಶಸ್ಸಿನ ನಂತರ ನಿರ್ದೇಶಕ ನಾಗಣ್ಣ ಕುರುಕ್ಷೇತ್ರ ಸಾಹಸಕ್ಕೆ ಕೈ ಹಾಕಿದ್ದಾರೆ. ದುರ್ಯೋಧನನಾಗಿ ದರ್ಶನ್ ಅದ್ಭುತವಾಗಿ ನಟಿಸಿದ್ದಾರೆ. ಸುಯೋಧನ ಎಂದರೆ ದರ್ಶನ್, ದರ್ಶನ್ ಎಂದರೆ ಸುಯೋಧನ ಎನ್ನುವಷ್ಟು ಪರ್ಫೆಕ್ಟ್ ಆಗಿ ನಟಿಸಿದ್ದಾರೆ. ಮಾಸ್ ಇಮೇಜ್‌ನಿಂದ ಹೊರ ಬಂದಿದ್ದಾರೆ. ಕರ್ಣನ ಪಾತ್ರಕ್ಕೆ ಅರ್ಜುನ್ ಸರ್ಜಾ ನ್ಯಾಯ ಒದಗಿಸಿದ್ದಾರೆ. ದುರ್ಯೋಧನನ ಜೊತೆ ನಡೆಸುವ ಸಂಭಾಷಣೆ, ಸ್ನೇಹ ಎಲ್ಲವೂ ಮನಮುಟ್ಟುವಂತಿದೆ. ಭೀಷ್ಮನಾಗಿ ಅಂಬರೀಶ್ ಗಾಂಭೀರ್ಯ ಇಷ್ಟವಾಗುವಂತಿದೆ. ಡೈಲಾಗ್ ಗಳು ಇಷ್ಟವಾಗುವಂತಿದೆ. ಇನ್ನು ರವಿಚಂದ್ರನ್ ರನ್ನು ಪೌರಾಣಿಕ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಎಂದಿಗಿಂತ ಅವರ ಮ್ಯಾನರಿಸಂ ಬದಲಾಗಿದೆ. ಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ.
ಮುನಿರತ್ನ ಕುರುಕ್ಷೇತ್ರ ನೋಡಲು 10 ಕಾರಣಗಳು!
ದುರ್ಯೋಧನನ ಪತ್ನಿ ಬಾನುಮತಿಯಾಗಿ ಮೇಘನಾ ರಾಜ್ ಅದ್ಭುತವಾಗಿ ನಟಿಸಿದ್ದಾರೆ. ಅವರ ಗತ್ತು-ಗೈರತ್ತು ಗಮನ ಸೆಳೆಯುವಂತಿದೆ. ಅರ್ಜುನನಾಗಿ ನಿಖಿಲ್ ಕುಮಾರಸ್ವಾಮಿ ಚೆನ್ನಾಗಿ ನಟಿಸಿದ್ದಾರೆ. ನಿಖಿಲ್ ಡೈಲಾಗ್ ಡಿಲೆವರಿಯಲ್ಲಿ ಪ್ರಬುದ್ಧತೆಯನ್ನು ಕಾಣಬಹುದಾಗಿದೆ. ಸ್ಪಷ್ಟವಾದ ಉಚ್ಚಾರಣೆ ಕೇಳುವುದಕ್ಕೆ ಮುದ ನೀಡುತ್ತದೆ.
ರನ್ನನ ಗದಾಯುದ್ಧವನ್ನು ಆಧಾರವಾಗಿಟ್ಟುಕೊಂಡು ಕುರುಕ್ಷೇತ್ರ ಮಾಡಲಾಗಿದೆ. ಪಾಂಡವರು, ಕೌರವರ ದಾಯಾದಿ ಕಲಹ, ಅಲ್ಲಲ್ಲಿ ಬೇರೆ ಬೇರೆ ಉಪಕಥೆಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. 18 ದಿನ ನಡೆಯುವ ಕೌರವ -ಪಾಂಡವ ಕಲಹವನ್ನು ಹೈಲೈಟ್ ಮಾಡಲಾಗಿದೆ. ಮಹಾಭಾರತ ಮಹಾ ಕಾವ್ಯವನ್ನು ತೆರೆಗೆ ತರುವಲ್ಲಿ ಕುರುಕ್ಷೇತ್ರ ಟೀಂ ಯಶಸ್ವಿಯಾಗಿದೆ.
ಕುರುಕ್ಷೇತ್ರದ ಬಗ್ಗೆ ಟ್ವಿಟರ್ ನಲ್ಲಿ ಈ ರೀತಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.