ಜ.5ಕ್ಕೆ 108 ಮೆಗಾಪಿಕ್ಸೆಲ್ ಕ್ಯಾಮರಾವಿರುವ Mi 10i ಸ್ಮಾರ್ಟ್‌ಫೋನ್ ಬಿಡುಗಡೆ
ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಮತ್ತು ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿರುವ ಶಿಯೋಮಿ, ಇದೀಗ ಎಂಐ 10ಐ ಎಂಬ ಬ್ರ್ಯಾಂಡ್ ನ್ಯೂ ಸ್ಮಾರ್ಟ್‌ಫೋನ್ ಅನ್ನು ಜನವರಿ 5ರಂದು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ, ಇದೊಂದು ಹೈ ಎಂಡ್ ಫೋನ್ ಆಗಿದೆ.
ಇನ್ನಾವ ಗಾಳಿ ಸುದ್ದಿಗೆ ಅವಕಾಶವಿಲ್ಲ. ಇದು ಪಕ್ಕಾ. ಎಐ 10ಐ ಸ್ಮಾರ್ಟ್‌ಫೋನ್ ಜನವರಿ 5ರಂದು ಬಿಡುಗಡೆಯಾಗುವುದು ಗ್ಯಾರಂಟಿಯಾಗಿದೆ.
ಈ ಸ್ಮಾರ್ಟ್‌ಫೋನ್ ಬಿಡುಗಡೆ ಸಂಬಂಧ ಶಿಯೋಮಿ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಮನುಕುಮಾರ್ ಜೈನ್ ಅವರು ಟೀಸರ್ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಂಐ 10ಐ ಭಾರತದಲ್ಲಿ ಜನವರಿ 5ರಂದು ಬಿಡುಡೆಯಾಗುವ ಬಗ್ಗೆ ಅಧಿಕೃತವಾಗಿ ತಿಳಿಸಲಾಗಿದೆ.
Viನಿಂದ 1,499 ಪ್ರೀಪೇಡ್ ಪ್ಲ್ಯಾನ್ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?
108 ಮೆಗಾಪಿಕ್ಸೆಲ್ ಕ್ಯಾಮರಾ ಅನ್ನು ಈ ಎಂಐ 10ಐ ಸ್ಮಾರ್ಟ್‌ಫೋನ್ ಹೊಂದಿದೆ. ಮತ್ತು ಈ ಫೋನಿಗೆ ಈ ಕ್ಯಾಮರಾವೇ ಹೆಚ್ಚುಗಾರಿಕೆಯಾಗಿದೆ. ಕಳೆದ ತಿಂಗಳವಷ್ಟೇ ಚೀನಾದಲ್ಲಿ ರೆಡ್ಮಿ ನೋಟ್ 9 4ಜಿ, ರೆಡ್ಮಿ ನೋಟ್ 9 5ಜಿ ಜೊತೆಗೆ ರೆಡ್ಮಿ ನೋಟ್ 9 ಪ್ರೋ 5ಜಿ ಕೂಡ ಬಿಡುಗಡೆಯಾಗಿತ್ತು. ವಿಷಯ ಏನೆಂದರೆ, ಈ ರೆಡ್ಮಿ ನೋಟ್ 9 ಪ್ರೋ 5ಜಿ ಸ್ಮಾರ್ಟ್‌ಫೋನ್ ಅನ್ನೇ ಕಂಪನಿ ಭಾರತದಲ್ಲಿ ಎಂಐ 10ಐ ರಿಬ್ರಾಂಡ್ ಮಾಡಿ ಬಿಡುಗಡೆ ಮಾಡುತ್ತಿದೆ ಎಂಬ ಸುದ್ದಿಯೂ ಇದೆ.
ಇನ್ನು ಕೆಲವೇ ದಿನಗಳಲ್ಲಿ ನಾವು ನಮ್ಮ ಎಂಐ ಬ್ರ್ಯಾಂಡ್ ಅಡಿ ಬ್ರ್ಯಾಂಡ್ ನ್ಯೂ ಎಂಐ 10ಐ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ವರ್ಷ ಬಿಡುಗಡೆಯಾದ ಎಂಐ 10, ಎಂಐ 10ಟಿ, ಎಂಐ 10 ಟಿ ಪ್ರೋ ಸ್ಮಾರ್ಟಫೋನ್‌ಗಳ ಮುಂದುವರಿದ ಭಾಗವೇ ಈ ಫೋನ್ ಆಗಿದೆ. ಜೊತೆಗೆ, ಈ ಫೋನ್, ಜಾಗತಿಕವಾಗಿ ಬಿಡುಗಡೆಯಾಗಿರುವ ಎಂಐ 10 ಲೈಟ್‌ನ ವಿಸ್ತರಿತ ವರ್ಷನ್ ಆಗಿದೆ ಎಂದು ಟ್ವೀಟ್ ಮಾಡಲಾಗಿರುವ ಟೀಸರ್ ವಿಡಿಯೋದಲ್ಲಿ ತಿಳಿಸಲಾಗಿದೆ. ಜೊತೆಗೆ, ರೆಡ್ ಮೀ ನೋಟ್ 9 ಪ್ರೋ 5ಜಿ ಫೋನ್ ಅನ್ನೇ ಭಾರತದಲ್ಲಿ ರಿಬ್ರ್ಯಾಂಡ್ ಮಾಡಿ ಎಂಐ 10ಐ ಹೆಸರಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂಬ ಸುದ್ದಿಯ ಬಗ್ಗೆ, ಭಾರತೀಯ ಮಾರುಕಟ್ಟೆಗೋಸ್ಕರವೇ ಈ ಫೋನ್ ಅನ್ನು ವಿಶೇಷವಾಗಿ ಕಸ್ಟಮೈಸ್ ಮಾಡಲಾಗಿದೆ. ನಾವು ಬ್ರ್ಯಾಂಡ್ ನ್ಯೂ ಕ್ಯಾಮರಾ ಸೆನ್ಸರ್ ಮತ್ತು ಭಾರತೀಯ ಎಂಐ ಫ್ಯಾನ್‌ಗಳಿಗೋಸ್ಕರವೇ ಇತರ ಕಸ್ಟಮ್ಸೈಷನ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
WhatsApp Stckers: ಹೊಸ ವರ್ಷಕ್ಕೆ ವಾಟ್ಸಾಪ್ ಸ್ಟಿಕರ್ಸ್ ಕಳುಹಿಸುವುದು ಹೇಗೆ?
ವಿಶೇಷತೆಗಳೇನಿರಬಹುದು?
ಇತ್ತೀಚೆಗಷ್ಟೇ ಎಂಐ 10ಐ ಮಾಡೆಲ್ ನಂಬರ್ ಅನ್ನು ಗೀಕ್‌ಬೆಂಚ್ ಲಿಸ್ಟಿಂಗ್ ಮಾಡಿತ್ತು ಮತ್ತು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಎಂಐ 10 ಲೈಟ್ ಸ್ಮಾರ್ಟ್ ಫೋನ್ ಎಂದು ನಂಬಲಾಗಿತ್ತು. ಹಾಗಾಗಿ, ಈ ಫೋನ್‌ನಲ್ಲಿ 8ಜಿ ರ್ಯಾಮ್, ಅಕ್ಟಾಕೋರ್ ಎಸ್ಒಸಿ 1.8 ಗೀಗಾ ಹರ್ಡ್ಸ್ ಪ್ರೊಸೆಸರ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಶಿಯೋಮಿ ಈಗಾಗಲೇ ಎಂಐ 10ಐ ಸ್ಮಾರ್ಟ್‌ಫೋನ್‌ನಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮರಾ ಇರಲಿದೆ ಎಂದು ಅಧಿಕೃತವಾಗಿಯೇ ಹೇಳಿದೆ. ಜೊತೆಗೆ, ಟೀಸರ್ ವಿಡಿಯೋದಲ್ಲಿ ಫೋನ್‌ನ ಹಿಂಬದಿಯ ಕ್ಯಾಮರಾ ಸೆಟ್ ಅಪ್‌ನಲ್ಲಿ ನಾಲ್ಕು ಕ್ಯಾಮರಾಗಳಿರುವುದನ್ನು ಕೂಡ ಗಮನಿಸಬಹುದು. ಎಂಐ 10 ಎರಡು ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೊದಲನೆಯದು 6 ಜಿಬಿ ರ್ಯಾಮ್ ಮತ್ತು ಎರಡನೆಯದು 8 ಜಿ ರ್ಯಾಮ್. ಈ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಮೆಮೋರಿ ಅಥವಾ ಸ್ಟೋರೇಜ್ ಸಾಮರ್ಥ್ಯ 128 ಜಿಬಿ ಇರಬಹುದು ಎಂದು ಊಹಿಸಲಾಗುತ್ತಿದೆ.
ಈ ಸ್ಮಾರ್ಟ್‌ಫೋನ್ ನೀಲಿ, ಕಪ್ಪು ಮತ್ತು ಗ್ರೇಡಿಯೆಂಟ್ ಆರೇಜ್, ಗ್ರೇಡಿಯೆಂಟ್ ಬ್ಲೂ ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ. ಕ್ಯಾಮರಾವೊಂದನ್ನು ಹೊರತುಪಡಿಸಿ ಕಂಪನಿ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಇನ್ನಾವುದೇ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿಲ್ಲ. ಹಾಗಾಗಿ, ನಾಲ್ಕೈದು ದಿನಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದರಿಂದ ಅದರ ಸಂಪೂರ್ಣ ವಿಶೇಷತೆಗಳು ಗೊತ್ತಾಗಲಿವೆ. ಜೊತೆಗೆ ಈ ಫೋನ್ ಬೆಲೆ ಎಷ್ಟಿರಲಿದೆ ಎಂಬುದು ಕೂಡ ತಿಳಿಯಲಿದೆ.
ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!