Asianet Suvarna News Asianet Suvarna News

ಭಾರತಕ್ಕಿಂತ ಇಲ್ಲಿ ಕಡಿಮೆ ಬೆಲೆಗೆ ಸಿಗ್ತಿದೆ ಐಫೋನ್ 16 : ಖರೀದಿಗೂ ಮುನ್ನ ಇದೆಲ್ಲ ಚೆಕ್ ಮಾಡಿ

ಬಹುನಿರೀಕ್ಷಿತ ಐಫೋನ್ 16 ಸಿರೀಸ್ ರಿಲೀಸ್ ಆಗಿದೆ. ಇನ್ನೇನು ಗ್ರಾಹಕರ ಕೈ ಸೇರೋದೊಂದೇ ಬಾಕಿ. ಹೀಗಿರುವಾಗ, ಯಾವ್ ದೇಶದಲ್ಲಿ ಇದ್ರ ಬೆಲೆ ಕಡಿಮೆ ಇದೆ ಅನ್ನೋದನ್ನು ತಿಳ್ಕೊಳ್ಳೋದ್ ಬೇಡ್ವಾ? 
 

which country  iPhone 16 series  available at lowest price roo
Author
First Published Sep 11, 2024, 4:52 PM IST | Last Updated Sep 11, 2024, 5:08 PM IST

ಐಫೋನ್ (iPhone) ಪ್ರೇಮಿಗಳಿಗೆ ಆಪಲ್ (Apple) ಈಗಾಗಲೇ ಗುಡ್ ನ್ಯೂಸ್ ನೀಡಾಗಿದೆ.  ಇಟ್ಸ್ ಗ್ಲೋಟೈಮ್ (Its Glow Time) ಈವೆಂಟ್‌ನಲ್ಲಿ ಇತ್ತೀಚಿಗಷ್ಟೆ ಆಪಲ್,  ಐಫೋನ್ 16 ಸಿರೀಸ್ ಬಿಡುಗಡೆ ಮಾಡಿದೆ. ಐಫೋನ್ 16 (iPhone 16), ಐಫೋನ್ 16 ಪ್ಲಸ್ (iPhone 16 Plus), ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಅನ್ನು ಕಂಪನಿ ಗ್ರಾಹಕರಿಗೆ ಸದ್ಯದಲ್ಲೇ ನೀಡಲಿದೆ.

ಆಪಲ್ ಐಫೋನ್ 16 ಮತ್ತು 16 ಪ್ಲಸ್ ಬೆಲೆ ಹಳೆ ಮಾಡೆಲ್ ಬೆಲೆಯಂತೆ ಇರಲಿದೆ. ಆದ್ರೆ  ಹೊಸ ಸಿರೀಸ್ ನ iPhone 16 Pro ಮತ್ತು iPhone 16 Pro Max ಬೆಲೆಗಳನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಸೆಪ್ಟೆಂಬರ್ 20ರಿಂದ ಗ್ರಾಹಕರ ಕೈಗೆ ಫೋನ್ ಸಿಗಲಿದೆ. 

ಜಿಯೋ ಫೋನ್ vs ಜಿಯೋ ಭಾರತ್: ಇವರೆಡರಲ್ಲಿ ಕಡಿಮೆ ಬೆಲೆ ಪ್ಲಾನ್ ಯಾವುದರಲ್ಲಿ ಸಿಗುತ್ತೆ?

ಯಾವ ದೇಶದಲ್ಲಿ ಎಷ್ಟು ಬೆಲೆ? : ಭಾರತದಲ್ಲಿ ಐಫೋನ್ 16 ಪ್ರೊ ಬೆಲೆ 1,19,900 ರೂಪಾಯಿಯಿಂದ ಶುರುವಾಗ್ತಿದೆ. ಆದ್ರೆ ಅಮೆರಿಕಾದಲ್ಲಿ ಐಫೋನ್ 16 ಪ್ರೊ ಇದಕ್ಕಿಂತ ಕಡಿಮೆ ಬೆಲೆಗೆ ಸಿಗ್ತಿದೆ. ಐಫೋನ್ 16 ಪ್ರೊನ ಬೆಲೆ ಅಮೆರಿಕಾದಲ್ಲಿ  90,000 ರೂಪಾಯಿಗೆ ಲಭ್ಯವಿದೆ. ಇನ್ನು ನೆರೆ ದೇಶ ಚೀನಾ ಮತ್ತು ದುಬೈನಲ್ಲಿ ಕೂಡ ಇದ್ರ ಬೆಲೆ ಭಾರತಕ್ಕಿಂತ ಕಡಿಮೆ ಇದೆ. ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ನೀವು ಈ ದೇಶದಲ್ಲಿ ಐಫೋನ್ 16 ಪ್ರೊ ಖರೀದಿ ಮಾಡ್ಬಹುದು. ಅಂದ್ರೆ ಭಾರತಕ್ಕಿಂತ 15 ರಿಂದ 19 ಸಾವಿರ ರೂಪಾಯಿ ಕಡಿಮೆ ಆಗಲಿದೆ. 

ಇನ್ನು, ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಆಪಲ್, ಭಾರತದಲ್ಲಿ ಅತ್ಯಂತ ಆಕರ್ಷಕ ಬೆಲೆಗೆ ನೀಡ್ತಿದೆ. ಆಪಲ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 5000 ರೂಪಾಯಿಗಳ ರಿಯಾಯಿತಿಯನ್ನು ಸಹ ಕಂಪನಿ ಘೋಷಿಸಿದೆ. ಅಂದರೆ 128 ಜಿಬಿ ಹೊಂದಿರುವ ಐಫೋನ್ 16  ಅನ್ನು 74,900 ರೂಪಾಯಿಗೆ ಖರೀದಿಸಬಹುದು. ಅಮೆರಿಕಾದಲ್ಲಿ ಈ ಫೋನ್ 67,000 ರೂಪಾಯಿಗೆ ಸಿಗ್ತಿದೆ. ಕೆನಡಾದಲ್ಲಿ ಇದು ಸುಮಾರು 70,000 ರೂಪಾಯಿಗೆ ಲಭ್ಯವಿದೆ. 

ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಯುಎಸ್‌ನಲ್ಲಿ ಇನ್ನೂ ಅಗ್ಗದ ಬೆಲೆಗೆ ಲಭ್ಯವಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ನ 256 GB ಸ್ಟೋರೇಜ್ ಬೆಲೆ ಅಮೆರಿಕಾದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ. ಅಂದರೆ ಈ ಫೋನ್ ಭಾರತಕ್ಕಿಂತ 40,000 ರೂಪಾಯಿ ಕಡಿಮೆಗೆ ಅಲ್ಲಿ ಸಿಗ್ತಿದೆ.  

ನಿಮ್ಮ ಮೊಬೈಲ್‌ನಲ್ಲಿ ಈ ಸೆಟ್ಟಿಂಗ್ ಆನ್ ಆಗದಿದ್ದರೆ ತುಂಬಾ ಡೇಂಜರ್!

ವಿದೇಶದಲ್ಲಿ ಫೋನ್ ಖರೀದಿ ಮುನ್ನ ಇದು ನೆನಪಿರಲಿ : ಐಫೋನ್, ವಿದೇಶದಲ್ಲಿ ಕಡಿಮೆ ಬೆಲೆಗೆ ಸಿಗ್ತಿದೆ ಎಂದಾಗ ಜನರು ಆಕರ್ಷಿತರಾಗೋದು ಸಹಜ. ವಿದೇಶಕ್ಕೆ ಹೋದಾಗ ಒಂದ್ ಫೋನ್ ಖರೀದಿಗೆ ಆಸಕ್ತಿ ತೋರಿಸ್ತಾರೆ. ಆದ್ರೆ ಕೆಲವೊಂದು ವಿಷ್ಯಗಳನ್ನು ಖರೀದಿಗೆ ಮುನ್ನ ತಿಳಿದಿರಬೇಕಾಗುತ್ತದೆ. ನೀವು ಅಮೇರಿಕಾದಲ್ಲಿ ಐಫೋನ್ ಖರೀದಿ ಮಾಡಿದ್ರೆ ನಿಮಗೆ ಸಿಮ್ ಕಾರ್ಡ್ ಸ್ಲಾಟ್ ಸಿಗೋದಿಲ್ಲ. ಯಾಕೆಂದ್ರೆ ಅಲ್ಲಿ ಇ ಸಿಮ್ ಬಳಕೆ ಮಾಡಲಾಗ್ತಿದೆ. ಭಾರತದಲ್ಲಿ ನ್ಯಾನೊ ಸಿಮ್ ಕಾರ್ಡ್ ಸ್ಲಾಟ್ ಜೊತೆ ಇ ಸಿಮ್ ಸಪೋರ್ಟ್ ಫೋನ್ ಸಿಗುತ್ತದೆ. ಕೆಲ ಕಡೆ ನೆಟ್ವರ್ಕ್ ಲಾಕ್ ಮಾಡಲಾದ ಫೋನ್ ಮಾರಾಟ ಮಾಡಲಾಗುತ್ತದೆ. ಭಾರತದ ಸಿಮ್ ಅದಕ್ಕೆ ವರ್ಕ್ ಆಗೋದಿಲ್ಲ. ಐಫೋನ್ ಖರೀದಿ ವೇಳೆ ಅನ್ಲಾಕ್ ವೇರಿಯಂಟ್ ಮಾತ್ರ ಖರೀದಿ ಮಾಡಿ. 
 

Latest Videos
Follow Us:
Download App:
  • android
  • ios