Asianet Suvarna News Asianet Suvarna News

ವೋಡಾಫೋನ್-ಐಡಿಯಾದಿಂದ ಬಂಪರ್ ಆಫರ್: 351ರೂಗೆ 100 GB ಡೇಟಾ!

ಭಾರತದಲ್ಲಿ ಜಿಯೋ ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಇತರ ಟಿಲಿಕಾಂ ಕಂಪನಿಗಳು ಇದೀಗ ಗ್ರಾಹಕರಿಗೆ ಹೊಸ ಹೊಸ ಆಫರ್ ನೀಡುತ್ತಿದೆ. ಇದೀಗ ವೋಡಾಫೋನ್ ಹಾಗೂ ಐಡಿಯಾ ಜೊತೆಯಾಗಿರುವ Vi ಟೆಲಿಕಾಂ ಪ್ರೇಪೇಯ್ಡ್ ಗ್ರಾಹಕರಿಗೆ ಜಿಯೋ ಮೀರಿಸುವ ಆಫರ್ ನೀಡಿದೆ. 
 

Vodafone Idea Vi introduced 100 GB 4G data in rs 351 in India ckm
Author
Bengaluru, First Published Oct 3, 2020, 6:26 PM IST
  • Facebook
  • Twitter
  • Whatsapp

ನವದೆಹಲಿ(ಅ.03):  ವೋಡಾಫೋನ್ ಹಾಗೂ ಜಿಯಾ ಒಂದಾಗಿ ಇದೀಗ Vi ಬ್ರ್ಯಾಂಡ್ ನೇಮ್‌ನಲ್ಲಿ ಸೇವೆ ನೀಡುತ್ತಿದೆ. ಇದೀಗ ಭಾರತದಲ್ಲಿ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದೆ. ಅಕ್ಟೋಬರ್ 2 ರಂದು ನೂತನ ಆಫರ್ ಲಾಂಚ್ ಮಾಡಲಾಗಿದೆ. ಪ್ರಿಪೇಯ್ಡ್ ಗ್ರಾಹಕರು 351 ರೂಪಾಯಿ ರೀಚಾರ್ಜ್ ಮಾಡಿದರೆ ಬರೋಬ್ಬರಿ 100  100 GB ಡೇಟಾ 4 GB ಡೇಟಾ ಆಫರ್ ನೀಡಲಾಗಿದೆ.

22100 ಕೋಟಿ ತೆರಿಗೆ ಕೇಸಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವೊಡಾಫೋನ್‌ಗೆ ಗೆಲುವು?

ವರ್ಕ್ ಫ್ರಮ್ ಹೋಮ್, ವಿದ್ಯಾರ್ಥಿಗಳ ಆನ್‌ಲೈನ್ ಕ್ಲಾಸ್ ಗಮನದಲ್ಲಿಟ್ಟುಕೊಂಡು ನೂತನ ಆಫರ್ ನೀಡಲಾಗಿದೆ. ಇದರ ವ್ಯಾಲಿಟಿಡಿ 54 ದಿನ ನೀಡಲಾಗಿದೆ. ವಿಶೇಷ ಅಂದರೆ ದಿನ ಬಳಕೆ ಡೇಟಾಗೆ ಯಾವುದಿ ಪರಿಮಿತಿ ಇಲ್ಲ. ಒಂದೇ ದಿನ ಬೇಕಾದರೂ ಸಂಪೂರ್ಣ ಡೇಟಾ ಬಳಸಬಹುದು. 

ಕೊರೋನಾ ವೈರಸ್ ಕಾರಣ ಜಗತ್ತು ಬದಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಡೇಟಾ ಪ್ರಮುಖವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು Vi ಗ್ರಾಹಕರಿಗೆ ಹೊಸ ಆಫರ್ ನೀಡುತ್ತಿದ್ದೇವೆ. ಐಪಿಎಲ್ ಟೂರ್ನಿ ನಡೆಯುತ್ತಿದೆ. ಹೀಗಾಗಿ ಗ್ರಾಹಕರು ಇಂದಿನ ಇಂಟರ್ನೆಟ್ ಕೋಟಾ ಮುಗಿಯಿತು ಎಂದು ಚಿಂತೆ ಪಡಬೇಕಿಲ್ಲ. ಸದ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ವೋಡಾಫೋನ್-ಐಡಿಯಾ 351 ರೂಪಾಯಿ ಪ್ಯಾಕೇಜ್ ಉತ್ತರ ನೀಡಲಿದೆ ಎಂದು VI ಹೇಳಿದೆ.

VI ಲಾಂಚ್ ಮಾಡಿರುವ ನೂತನ ಡೇಟಾ ಪ್ಯಾಕ್ ಜೊತೆಗೆ, ಭಾರತದ ಅತಿದೊಡ್ಡ 4 ಜಿ ನೆಟ್‌ವರ್ಕ್ ಅನ್ನು "5 ಜಿ ಆರ್ಕಿಟೆಕ್ಚರ್‌ನ  ತತ್ವಗಳ ಮೇಲೆ ಅಭಿವೃದ್ಧಿ ಪಡಿಸಲಾಗಿದೆ. ಇದು ಅತೀ ವೇಗದ ನೆಟ್‌ವರ್ಕ್ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ ಯುಟ್ಯೂಬ್, ನೆಟ್‌ಫ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್, ಇತ್ಯಾದಿಗಳಲ್ಲಿ ವೀಡಿಯೊ ನೋಡುವಾಗ ಅಥವಾ ಜೂಮ್, ಗೂಗಲ್ ಮೀಟ್ ಅಥವಾ ಇತರ ಅಪ್ಲಿಕೇಶನ್‌ಗಳಲ್ಲಿ ವೀಡಿಯೊ ಕರೆಗಳನ್ನು ಮಾಡುವಾಗ ಫೋನ್‌ನಲ್ಲಿ ಡೇಟಾ ಸ್ಪೀಡ್ ಸಮಸ್ಯೆ ಎದುರಾಗಬಾರದು ಅನ್ನೋ ಉದ್ದೇಶಿದಿಂದ ನಿರ್ಮಿಸಲಾಗಿದೆ ಎಂದು ವಿ ಹೇಳಿದೆ.

Follow Us:
Download App:
  • android
  • ios