ನವದೆಹಲಿ(ಸೆ.26): ನೆದರ್‌ಲೆಂಡ್‌ ಮೂಲದ ಹಚಿಸನ್‌ ಮೊಬೈಲ್‌ ಕಂಪನಿ ಖರೀದಿ ವ್ಯವಹಾರದಲ್ಲಿ ಬ್ರಿಟನ್‌ ಮೂಲದ ವೊಡಾಫೋನ್‌ಗೆ 22100 ಕೋಟಿ ರು. ತೆರಿಗೆ, ದಂಡ ಪಾವತಿಗೆ ಸೂಚಿಸಿದ್ದ ಪ್ರಕರಣದಲ್ಲಿ ಭಾರತ ಸರ್ಕಾರಕ್ಕೆ ಸೋಲಾಗಿದೆ.

ತೆರಿಗೆ ನೋಟಿಸ್‌ ಪ್ರಶ್ನಿಸಿ ವೊಡಾಪೋನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕುರಿತು ವಿಚಾರಣೆ ನಡೆಸಿದ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿದೆ. ನಮಗೆ ಕೇವಲ 75 ಕೋಟಿ ರು. ಪಾವತಿಗೆ ಸೂಚಿಸಲಾಗಿದೆ ಎಂದು ವೊಡಾಫೋನ್‌ ಹೇಳಿಕೆ ನೀಡಿದೆ.

2007ರಲ್ಲಿ ಹಚಿಸನ್‌ ಕಂಪನಿಯ ಭಾರತೀಯ ವ್ಯವಹಾರವನ್ನು ವೊಡಾಫೋನ್‌ ಖರೀದಿಸಿತ್ತು. ಆದರೆ 2012ರಲ್ಲಿ ಭಾರತ ಸರ್ಕಾರ ಜಾರಿಗೆ ತಂದಿದ್ದ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಅನ್ನು ಪೂರ್ವಾನ್ವಯವಾಗುವಂತೆ ಮಾಡಿತ್ತು. ಅದರನ್ವಯ ಖರೀದಿ ಸಂಬಂಧ ವೊಡಾಫೋನ್‌ 7990 ಕೋಟಿ ರು.ತೆರಿಗೆ, ಅದಕ್ಕೆ ದಂಡ ಮತ್ತು ಬಡ್ಡಿ ಸೇರಿ 22100 ಕೋಟಿ ಕಟ್ಟಬೇಕೆಂದು ಸೂಚಿಸಿತ್ತು.