ಜಿಯೋ ಹೊಸ ದರಗಳು ಜು.3 ರಿಂದ ಅನ್ವಯಿಸಲಿವೆ. ಇನ್ನು ವೊಡಾಫೋನ್ ಐಡಿಯಾ ಕೂಡಾ ಶೇ.11-ಶೇ.24ರಷ್ಟು ದರ ಹೆಚ್ಚಳ ಮಾಡಿದ್ದು, ಜು.4ರಿಂದ ಜಾರಿಗೆ ಬರಲಿದೆ.  

ನವದೆಹಲಿ(ಜೂ.29):  ಮೊಬೈಲ್ ಚಂದಾ ಶುಲ್ಕವನ್ನು ರಿಲಯನ್ ಜಿಯೋ ಏರಿಕೆ ಮಾಡಿದ ಮರು ದಿನವೇ ಏರ್‌ಟೆಲ್‌ ಹಾಗೂ ವೊಡಾಫೋನ್ ಕೂಡ ಅದೇ ನಿರ್ಧಾರ ಕೈಗೊಂಡಿವೆ. ಶೇ.10ರಿಂದ ಶೇ.24ರವರೆಗೆ ವಿವಿಧ ಪ್ಯಾಕ್ ಗಳ ದರ ಹೆಚ್ಚಳ ಮಾಡಿವೆ. 

ಜಿಯೋ ಹೊಸ ದರಗಳು ಜು.3 ರಿಂದ ಅನ್ವಯಿಸಲಿವೆ. ಇನ್ನು ವೊಡಾಫೋನ್ ಐಡಿಯಾ ಕೂಡಾ ಶೇ.11-ಶೇ.24ರಷ್ಟು ದರ ಹೆಚ್ಚಳ ಮಾಡಿದ್ದು, ಜು.4ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್‌ ಆಯ್ತು.. ಮೊಬೈಲ್‌ ರಿಚಾರ್ಜ್‌ ಕೂಡ ಈಗ ದುಬಾರಿ!

ಹೊಸ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.