ಮಂದ ಬೆಳಕಿನಲ್ಲಿ ಚಂದದ ಫೋಟೋಗ್ರಫಿಗೆ ವಿವೋ ಫೋನ್!

ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್‌; 8 ಜಿಬಿ ರಾರ‍ಯಮ್‌ ಹಾಗೂ 128 ಜಿಬಿ ಸ್ಟೋರೇಜ್‌; ವಿವೋ ವಿ 17ನಲ್ಲಿ ಸೂಪರ್‌ ನೈಟ್‌ ಕ್ಯಾಮೆರಾ

Vivo V17 Smartphone  Launched In India Price Features

ಬೆಂಗಳೂರು (ಡಿ.12): ಸೂಪರ್‌ ನೈಟ್‌ ಮೋಡ್‌ ಕ್ಯಾಮೆರಾ ಹೊಂದಿರುವ ಹೊಸ ಮೊಬೈಲ್‌ ವಿವೋ ವಿ 17 ಮಾರುಕಟ್ಟೆಗೆ ಬಂದಿದೆ. ಫ್ರಂಟ್‌ ಕ್ಯಾಮರಾ ಹಾಗೂ ರಿಯರ್‌ ಕ್ಯಾಮರಾಗಳೆರಡರಲ್ಲೂ ಸೂಪರ್‌ ನೈಟ್‌ ಮೋಡ್‌ ಇರುವುದು ಇದರ ವಿಶೇಷ. 

ಇದರಲ್ಲಿ ರಾತ್ರಿ ಮಂದ ಬೆಳಕಿನಲ್ಲಿ ಚಂದದ ಫೋಟೋಗ್ರಫಿ ಮಾಡಬಹುದು. ಫ್ರಂಟ್‌ ಕ್ಯಾಮೆರಾ 32 ಎಂಪಿ ಸಾಮರ್ಥ್ಯದ್ದು. ಹಿಂಭಾಗ 48 ಎಂಪಿ ಎಐ ಕ್ವಾರ್ಡ್‌ ಕ್ಯಾಮರಾವಿದೆ. 

ಇದನ್ನೂ ಓದಿ | ಡಿಸೆಂಬರ್ ಅಂತ್ಯದಿಂದಲೇ ಈ ಫೋನ್‌ಗಳಲ್ಲಿ ವಾಟ್ಸಪ್‌ ಬಂದ್!...

ಇದರಲ್ಲಿ ಅಲ್ಟ್ರಾ ಸ್ಟೇಬಲ್‌ ವೀಡಿಯೋ ಮೋಡ್‌ ಸಹ ಇದೆ. ಇದರ ಜೊತೆಗೆ ಸೂಪರ್‌ ವೈಡ್‌ ಆ್ಯಂಗಲ್‌ ಕ್ಯಾಮರಾವೂ ಇದೆ. ಹೀಗಾಗಿ ಫೋಟೋಗ್ರಫಿಗೆ ಹೇಳಿ ಮಾಡಿಸಿದ ಸ್ಮಾರ್ಟ್‌ಫೋನ್‌. 

ಹೆಚ್ಚು ಬ್ರೈಟ್‌ನೆಸ್‌ ಇರುವ ಲೇಟೆಸ್ಟ್‌ ಇ3 ಸೂಪರ್‌ ಅಮೋಲ್ಡ್‌ ಸ್ಕ್ರೀನ್‌ ಇದರಲ್ಲಿದೆ. 8 ಜಿಬಿ ರಾರ‍ಯಮ್‌ ಹಾಗೂ 128 ಜಿಬಿ ಸ್ಟೋರೇಜ್‌ ಹೊಂದಿದ್ದು, 4500 ಎಂಇಎಚ್‌ ಬ್ಯಾಟರಿ ಸಾಮರ್ಥ್ಯವಿದೆ.

ವಿವೋ ವಿ 17 ಬೆಲೆ  22,990 ರು. ಆಗಿದೆ.

Latest Videos
Follow Us:
Download App:
  • android
  • ios