20 ಸಾವಿರಕ್ಕಿಂತ ಕಡಿಮೆ ಬೆಲೆಯ Vivo T1 ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಲಾಂಚ್?
Vivo T1 ಭಾರತದಲ್ಲಿ Qualcomm Snapdragon 695 SoC ಯೊಂದಿಗೆ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆ ರೂ.20,00ಕ್ಕಿಂತ ಕಡಿಮೆ ಇರಲಿದೆ ಎಂದು ವರದಿಗಳು ತಿಳಿಸಿವೆ
Tech Desk: ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಹೊಸ 'T' ಸರಣಿಯನ್ನು ಫೋನ್ ಪರಿಚಯಿಸಲು ಸಿದ್ಥತೆ ನಡೆಸಿದೆ. ಈ ಸ್ಮಾರ್ಟ್‌ಫೋನ್ ಲೈನ್-ಅಪ್ ಈಗಾಗಲೇ ಚೀನಾದಲ್ಲಿ ಅನಾವರಣಗೊಂಡಿದೆ. ಸರಣಿಯ ಮೊದಲ ಎರಡು ಸಾಧನಗಳು Vivo T1 ಮತ್ತು Vivo T1X ಬಿಡುಗಡೆಯಾಗಿವೆ. ಈಗ Vivo T1 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ . Vivo T1 ಅನ್ನು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 695 SoC ಹಾಗೂ ಫೋನ್ 5G ಸಂಪರ್ಕವನ್ನು ಬೆಂಬಲದೊಂದಿಗೆ ಭಾರತದಲ್ಲಿ ಪರಿಚಯಿಸಲಾಗುವುದು ಮತ್ತು ಇದರ ಬೆಲೆ ರೂ 20,000 ಕ್ಕಿಂತ ಕಡಿಮೆ ಇರುತ್ತದೆ ಎಂದು ಇಂಡಿಯಾ ಟುಡೇ ಟೆಕ್ ವರದಿ ಮಾಡಿದೆ.
Vivo T1 ಅನ್ನು ಚೀನಾದಲ್ಲಿ Qualcomm Snapdragon 778G ಪ್ರೊಸೆಸರ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿ Snapdragon 695 SoC ಅನ್ನು ಪ್ಯಾಕ್ ಮಾಡುತ್ತದೆ. Vivo ಫೋನ್‌ನ ಇತರ ವಿಶೇಷಣಗಳನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. Vivo T1 ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದು ಅಥವಾ ಸರಣಿಯು ಎಷ್ಟು ಫೋನ್‌ಗಳನ್ನು ಹೊಂದಬಹುದು ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ಇದನ್ನೂ ಓದಿ: Vivo Y75 5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಭಾರತದಲ್ಲಿ ಗಣರಾಜ್ಯೋತ್ಸವದಂದು ಬಿಡುಗಡೆ?
64-ಮೆಗಾಪಿಕ್ಸೆಲ್ ಕ್ಯಾಮೆರಾ?: ಚೀನಾದಲ್ಲಿ, Vivo T1 20:9 ಅಸ್ಪೇಕ್ಟ್ ರೇಶ್ಯೋದೊಂದಿಗೆ 6.67-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇ, 120Hz ವರೆಗೆ ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. 64-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಫೋನ್ ಒಳಗೊಂಡಿದೆ. ಮುಂಭಾಗದಲ್ಲಿ ಇದು 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಫೋನ್ 44W ವೇಗದ ಚಾರ್ಜಿಂಗ್ 5,000mAh ಬ್ಯಾಟರಿಯನ್ನು ಬೆಂಬಲದೊಂದಿಗೆ ಬಿಡುಗಡೆಯಾಗಬಹುದು. ಫೋನ್‌ನಲ್ಲಿ 8GB RAM ಜೊತೆಗೆ 128GB ಸ್ಟೋರೇಜ್ ಮತ್ತು 8GB RAM ಜೊತೆಗೆ 256GB ಸ್ಟೋರೇಜ್ ಎರಡು ಕಾನ್ಫಿಗರೇಶನ್‌ಗಳಿರಬಹುದು. ಸರಣಿಯು ಆನ್‌ಲೈನ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾದ ಕಾರ್ಯಕ್ಷಮತೆ-ಚಾಲಿತ (Performance Driven) ಸ್ಮಾರ್ಟ್‌ಫೋನ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. Vivo ಆಫ್‌ಲೈನ್ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿದೆ. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಶಾಓಮಿ, ರಿಯಲ್‌ಮಿ ಮತ್ತು ಇತರ ಬ್ರ್ಯಾಂಡ್‌ಗಳು ಪ್ರಾಬಲ್ಯ ಹೊಂದಿವೆ.
ಇದನ್ನೂ ಓದಿ: Vivo Y21e: 5000mAh ಬ್ಯಾಟರಿಯೊಂದಿಗೆ ವಿವೋದ ಬಜೆಟ್ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ: ಬೆಲೆ ಎಷ್ಟು?
ಭಾರತದಲ್ಲಿ ಅಸ್ತಿತ್ವದಲ್ಲಿರುವ Y ಲೈನ್-ಅಪ್ ಅನ್ನು T ಸರಣಿಯು ಬದಲಿಸುವ ಸಾಧ್ಯಗಳಿವೆ. Vivo ಸಾಮಾನ್ಯವಾಗಿ Y ಸರಣಿಯ ಭಾಗವಾಗಿ ತನ್ನ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. V ಸರಣಿಯು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಸ್ಥಾನ ಪಡೆದಿದ್ದರೆ X ಸರಣಿಯು ಪ್ರಮುಖ ಫೋನ್‌ಗಳನ್ನು ನೀಡುತ್ತದೆ. ವಿವೋ ಭಾರತದ ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಇದು Vivo Z1 Pro ಮತ್ತು Z1X ಅನ್ನು ಒಳಗೊಂಡಿರುವ Z ಸರಣಿಯನ್ನು ಪರಿಚಯಿಸಿತ್ತು. ಇವೆರಡೂ ಬಜೆಟ್‌ನಲ್ಲಿ ಉತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ಒದಗಿಸುತ್ತವೆ ಎಂದು ಹೇಳಿಕೊಂಡಿತ್ತು. ಆದರೆ ನಂತರ ಈ ಸರಣಿಯನ್ನು ನಿಲ್ಲಿಸಲಾಯಿತು.