Asianet Suvarna News Asianet Suvarna News

ಅಪರಿಚಿತ ಅಂತಾರಾಷ್ಟ್ರೀಯ ಕರೆ ಹಾವಳಿ: ನಂಬರ್‌ ಬ್ಲಾಕ್‌ಗೆ ವಾಟ್ಸಾಪ್‌ ಸೂಚನೆ

ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಅಪರಿಚಿತ ನಂಬರ್‌ಗಳಿಂದ ಅಂತಾರಾಷ್ಟ್ರೀಯ ವೀಡಿಯೋ ಮತ್ತು ಆಡಿಯೋ ಕಾಲ್‌ಗಳ ಹಾವಳಿ ತೀವ್ರವಾಗತೊಡಗಿದೆ. ಈ ಬಗ್ಗೆ ದೂರಿರುವ ಭಾರತೀಯ ಗ್ರಾಹಕರಿಗೆ ‘ಅಂತಹ ನಂಬರ್‌ಗಳನ್ನು ಬ್ಲಾಕ್‌ ಮಾಡಿ ರಿಪೋರ್ಟ್ ಮಾಡಿ’ ಎಂದು ವಾಟ್ಸಾಪ್‌ ತಿಳಿಸಿದೆ.

Unknown international call menace WhatsApp alerts customer to number block akb
Author
First Published May 10, 2023, 9:51 AM IST

ನವದೆಹಲಿ: ಪ್ರಸಿದ್ಧ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಅಪರಿಚಿತ ನಂಬರ್‌ಗಳಿಂದ ಅಂತಾರಾಷ್ಟ್ರೀಯ ವೀಡಿಯೋ ಮತ್ತು ಆಡಿಯೋ ಕಾಲ್‌ಗಳ ಹಾವಳಿ ತೀವ್ರವಾಗತೊಡಗಿದೆ. ಈ ಬಗ್ಗೆ ದೂರಿರುವ ಭಾರತೀಯ ಗ್ರಾಹಕರಿಗೆ ‘ಅಂತಹ ನಂಬರ್‌ಗಳನ್ನು ಬ್ಲಾಕ್‌ ಮಾಡಿ ರಿಪೋರ್ಟ್ ಮಾಡಿ’ ಎಂದು ವಾಟ್ಸಾಪ್‌ ತಿಳಿಸಿದೆ.

‘ಮಾಸಿಕ 200 ಕೋಟಿ ಸಕ್ರಿಯ ಬಳಕೆದಾರರ ಹೊಂದಿರುವ ವಾಟ್ಸಾಪ್‌, ವಂಚನೆ ಎಸಗುವ ಜನರ ಬಳಕೆಗೆ ಸುಲಭವಾಗಿದೆ. ಹೀಗಾಗಿ ಅಪರಿಚಿತ ಅಂತಾರಾಷ್ಟ್ರೀಯ ನಂಬರ್‌ಗಳಿಂದ ವೀಡಿಯೋ, ಆಡಿಯೋ ಮಿಸ್ಡ್‌ ಕಾಲ್ಸ್‌ ಬರುತ್ತಿವೆ. ಇವು ಮಲೇಷಿಯಾ ಕೀನ್ಯಾ(Kenya), ವಿಯೆಟ್ನಾಂ (Vietnam) ಹಾಗೂ ಇಥಿಯೋಪಿಯಾ ಮೂಲದ ಐಎಸ್‌ಡಿ ಕೋಡ್‌ (ISD Code) ಹೊಂದಿರುವ ನಂಬರ್‌ಗಳಾಗಿವೆ. ಕರೆ ಮಾಡುವವರು ಯಾರು ಹಾಗೂ ಅವರ ಉದ್ದೇಶ ಏನೆಂಬುದು ಎಂದು ಗೊತ್ತಿಲ್ಲ’ ಎಂದು ಭಾರತೀಯ ವಾಟ್ಸಾಪ್‌ ಬಳಕೆದಾರರು ಟ್ವಿಟರ್‌ನಲ್ಲಿ ಕರೆಗಳ ಸ್ಕ್ರೀನ್‌ಶಾಟ್‌ (screenshot) ಅಪ್ಲೋಡ್‌ ಮಾಡಿ ದೂರುತ್ತಿದ್ದಾರೆ.

ಚಾಟ್ ಲಾಕ್ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್, ಸಂದೇಶ ಕಾಣದಂತೆ ಪ್ರೈವೇಟ್ ಮಾಡಲು ಅವಕಾಶ!

ಇದಕ್ಕೆ ಪ್ರತಿಕ್ರಯಿಸಿರುವ ವಾಟ್ಸಾಪ್‌, ‘ಅಂತಹ ನಂಬರ್‌ಗಳನ್ನು ಕೂಡಲೇ ಬ್ಲಾಕ್‌ (ನಿರ್ಬಂಧಿಸಿ) ರಿಪೋರ್ಟ್‌ ಮಾಡಿ. ಇದರಿಂದ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕಂಪನಿಗೆ ನೆರವಾಗಲಿದೆ’ ಎಂದಿದೆ. ಅಲ್ಲದೇ ಗ್ರಾಹಕರ ಸುರಕ್ಷತೆ ಕುರಿತು ಹಲವಾರು ಕ್ರಮ ಕೈಗೊಳ್ಳಲಾಗಿದ್ದು ವಂಚನೆಯಿಂದ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದೆ.


ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಮತ್ತೊಂದು ಫೀಚರ್, ಮೆಸೇಜ್ ಎಡಿಟ್‌ಗೆ ಅವಕಾಶ!

ವ್ಯಾಟ್ಸ್ಆ್ಯಪ್ ಬಳಕೆದಾರರ ಬಹುಬೇಡಿಕೆ ಇದೀಗ ಈಡೇರಿದೆ. ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ. ವ್ಯಾಟ್ಸ್ಆ್ಯಪ್ ಮೆಸೇಜ್ ಇದೀಗ ಎಡಿಟ್ ಮಾಡಲು ಸಾಧ್ಯ. ಹೊಸ ಫೀಚರ್‌ನಲ್ಲಿ ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವ ಅವಕಾಶವನ್ನು ನೀಡಿದೆ. WABetaInfo ಪ್ರಕಾರ ನೂತನ ಫೀಚರ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ. ಸದ್ಯ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ನೂತನ ಫೀಚರ್ ಲಭ್ಯವಾಗಲಿದೆ. ಮೆನು ಆಪ್ಶನ್ ಕ್ಲಿಕ್ ಮಾಡಿ ಎಡಿಟ್ ಮೆಸೇಜ್ ಕ್ಲಿಕ್ ಅಡಿಯಲ್ಲಿ ನೂತನ ಫೀಚರ್ ಲಭ್ಯವಿದೆ.

ಟೆಕ್ಸ್ಟ್ ಸಂದೇಶಗಳನ್ನು ಎಡಿಟ್ ಮಾಡುವ ಅವಕಾಶವನ್ನು ವ್ಯಾಟ್ಸ್ಆ್ಯಪ್ ನೀಡಿದೆ. ಬಳಕೆದಾರರು ತಾವು ಕಳುಹಿಸಿದ ಸಂದೇಶವನ್ನು 15 ನಿಮಿಷದೊಳಗೆ ಎಡಿಟ್ ಮಾಡಲು ಅವಕಾಶ ನೀಡಿದೆ. ಒಂದೇ ಮೆಸೇಜನ್ನು ಎಷ್ಟು ಬಾರಿ ಬೇಕಾದರು ಎಡಿಟ್ ಮಾಡಬಹುದು. ಆದರೆ ಸಂದೇಶಗಳ ಮೂಲ ಹಾಗೂ ಭದ್ರತಾ ದೃಷ್ಟಿಯಿಂದ ತಪ್ಪಾಗಿರುವ ಪದಗಳನ್ನು ಎಡಿಟ್ ಮಾಡಬಹುದು. ಸಂಪೂರ್ಣ ಸಂದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ.

Bengaluru - ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟ್‌ಗೆ ಭಾರಿ ಬೆಂಬಲ: ದಿನಕ್ಕೆ 22 ಸಾವಿರ ಸ್ಕ್ಯಾನ್‌

ಬಳಕೆದಾರರು ಕಳುಹಿಸಿದ ಟೆಕ್ಸ್ಟ್ ಸಂದೇಶಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಎಡಿಟ್ ಆಯ್ಕೆ ನೀಡಲಾಗಿದೆ. ಎಡಿಟ್ ಮೂಲಕ ಪದಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿದೆ. ಆದರೆ ಒಂದು ಬಾರಿ ಕಳುಹಿಸಿದ ಸಂದೇಶದ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಬೀಟಾ ವರ್ಶನ್‌ನಲ್ಲಿ ಹೊಸ ಫೀಚರ್ ಲಭ್ಯವಿದೆ. ವ್ಯಾಟ್ಸ್ಆ್ಯಪ್ ಇದೀಗ ತಂದಿರುವ ಎಡಿಟ್ ಫೀಚರ್ ಹಲವು ವರ್ಷಗಳ ಬೇಡಿಕೆಯಾಗಿತ್ತು. ಬಳಕೆದಾರರು ಸಂದೇಶಗಳನ್ನು ಎಡಿಟ್ ಮಾಡುವ ಫೀಚರ್ಸ್ ಬೇಕು ಎಂದು ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಇತ್ತೀಚೆಗೆ ಟ್ವಿಟರ್ ಕೂಡ ಎಡಿಟ್ ಆಯ್ಕೆ ನೀಡಿದೆ. ಇದೀಗ ವ್ಯಾಟ್ಸ್ಆ್ಯಪ್ ಸಂದೇಶಗಳಿಗೆ ಎಡಿಟ್ ಆಪ್ಶನ್ ನೀಡಿದೆ. 

ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಇದೀಗ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ. ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಚಾಟ್ ಲಾಕ್ ಫೀಚರ್ ಪರಿಚಯಿಸಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಚಾಟ್ ಮೆಸೇಜ್‌ಗಳನ್ನು ಲಾಕ್ ಮಾಡುವ ಅವಕಾಶವಿದೆ. ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿರುವ ಮೆನುವಿನಲ್ಲಿ ಚಾಟ್ ಲಾಕ್ ಫೀಚರ್ ನೀಡಲಾಗಿದೆ. ಯಾವ ಚಾಟ್ ಲಾಕ್ ಆಗಬೇಕು ಅನ್ನೋದನ್ನು ಆಯ್ಕೆ ಮಾಡಿಕೊಂಡು ಲಾಕ್ ಚಾಟ್ ಫೀಚರ್ ಕ್ಲಿಕ್ ಮಾಡಿದರೆ ಸಂಪೂರ್ಣ ಚಾಟ್ ಲಾಕ್ ಆಗಿದೆ. ಇದು ಇತರರಿಗೆ ಕಾಣದಂತೆ ಪ್ರೈವೇಟ್ ಆಗಲಿದೆ. ಹೀಗೆ ಲಾಕ್ ಮಾಡಿದ ಚಾಟ್‌ಗಳು ಪ್ರತ್ಯೇಕ ಚಾಟ್ ಲಾಕ್ ಫೋಲ್ಡರ್‌ನಲ್ಲಿ ಲಭ್ಯವಾಗಲಿದೆ. ಫೋನ್ ಯಾರೇ ಬಳಕೆ ಮಾಡಿದರೂ ಲಾಕ್ ಮಾಡಿದ ಚಾಟ್‌ಗಳು ಇತರರಿಗೆ ಕಾಣಿಸುವುದಿಲ್ಲ. ಈ  ಚಾಟ್ ಲಾಕ್ ಫೋಲ್ಡರ್‌ನ್ನು ಫಿಂಗರ್ ಪ್ರಿಂಟ್ ಲಾಕ್ ಮೂಲಕ ತೆರೆದು ನೋಡಬಹುದು. 

Follow Us:
Download App:
  • android
  • ios