Asianet Suvarna News Asianet Suvarna News

ಚೀನಾ ಫೋನ್‌ಗಳಿಗೆ ಹೊಡೆತ; ಮೊಬೈಲ್ ಪ್ಲಾಂಟ್‌ಗೆ ಟಾಟಾ ಸನ್ 7,000 ಕೋಟಿ ಹೂಡಿಕೆ

ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ಇದೀಗ ಟಾಟಾ ಸನ್ ಅತೀ ದೊಡ್ಡ ಯೋಜನೆ ಕೈಗೆತ್ತಿಕೊಂಡಿದೆ. ಬರೋಬ್ಬರಿ 7,000 ಕೋಟಿ ರೂಪಾಯಿ ಹೂಡಿಕೆ ಮೂಲಕ ತಮಿಳುನಾಡಿನಲ್ಲಿ ಮೊಬೈಲ್ ಫ್ಯಾಕ್ಟರಿ ಆರಂಭಿಸುತ್ತಿದೆ. ಈ ಕುರಿತು ವಿವರ ಇಲ್ಲಿದೆ.

Tata Sons seeking 1 billion loans to set up mobile manufacturing plant Tamil Nadu ckm
Author
Bengaluru, First Published Dec 4, 2020, 6:13 PM IST

ದೆಹಲಿ(ಡಿ.04): ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಿದ್ದರು, ಫೋನ್ ಮಾರುಕಟ್ಟೆಯಲ್ಲಿ ಚೀನಾ ಫೋನ್‌ಗಳೇ ಸದ್ದು ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ ಚೀನಾ ಫೋನ್‌ಗೆ ಸೆಡ್ಡು ಹೊಡೆಯಬಲ್ಲ ಫೋನ್‌ಗಳ ಸಂಖ್ಯೆ ಕಡಿಮೆ ಇದೆ. ಇದೀಗ ಟಾಟಾ ಸನ್ ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ತಮಿಳುನಾಡಿನಲ್ಲಿ ಮೊಬೈಲ್ ಉತ್ಪಾದನಾ ಘಟಕ ಆರಂಭಿಸಲು ಮುಂದಾಗಿದೆ.

ಹಬ್ಬದ ವೇಳೆ ಆನ್‌ಲೈನ್ ಶಾಪಿಂಗ್ ಮಾಡುತ್ತೀರಾ? ಎಚ್ಚರ ವಹಿಸುವುದು ಅಗತ್ಯ!..

ಆ್ಯಪಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಟಾಟಾ ಸನ್, ಬರೋಬ್ಬರಿ 7,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಇದೀಗ ವಿದೇಶದಿಂದ 1 ಬಿಲಿಯನ್ ಅಮೆರಿಕನ್ ಡಾಲರ್ ಹಣ ಸಾಲವಾಗಿ ಪಡೆಯಲು ಟಾಟ ಸನ್ ಮುುಂದಾಗಿದೆ. 

ಸದ್ಯ ಆ್ಯಪಲ್ ಫೋನ್ ಬಿಡಿ ಭಾಗಗಳು ಚೀನಾದಿಂದ ಉತ್ಪಾದನೆಯಾಗಿ ಭಾರತ ಸೇರಿದಂತೆ ಇತರ ದೇಶಗಳಿಗೆ ರಫ್ತಾಗುತ್ತಿದೆ. ಟಾಟಾ ಸನ್ ಮೊಬೈಲ್ ಫ್ಯಾಕ್ಟರಿ ಮೂಲಕ ಚೀನಾ ವಸ್ತುಗಳ ಆಮದು ನಿಲ್ಲಲಿದೆ. ಕಾರಣ ಆ್ಯಪಲ್ ಬಿಡಿ ಭಾಗಗಳು ಟಾಟಾ ಸನ್ ಮೊಬೈಲ್ ಘಟಕದಲ್ಲಿ ಉತ್ಪಾದನೆಯಾಗಲಿದೆ. 

ತಪ್ಪು ಮಾಹಿತಿ ನೀಡಿದ 167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ!

ಕಳೆದ ತಿಂಗಳು ಟಾಟಾ ಎಲೆಕ್ಟ್ರಾನಿಕ್ ಸಮೂಹಕ್ಕೆ ತಮಿಳುನಾಡು ಕೈಗಾರಿಗಾ ಅಭಿವೃದ್ಧಿ ನಿಗಮ 500 ಏಕರೆ ಭೂಮಿ ಮಂಜೂರು ಮಾಡಿದೆ. ಇದೀಗ ಈ ಜಾಗದಲ್ಲಿ ಟಾಟಾ ಸನ್ ಮೊಬೈಲ್ ಉತ್ಪಾದನಾ ಘಟಕ ನಿರ್ಮಿಸಲಿದೆ. ಈ ಮೂಲಕ ಮೋದಿ ಆಶಯದಂತೆ ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆಗಳ ಪವರ್ ಹೌಸ್ ಮಾಡಲು ಟಾಟಾ ಸನ್ ಮುಂದಾಗಿದೆ.
 

Follow Us:
Download App:
  • android
  • ios