ಬೆಂಗಳೂರು [ಅ.12]:  ಕೆಲಪಟ್ಟಭದ್ರ ಹಿತಾಸಕ್ತಿಗಳು ಬಿಎಸ್‌ಎನ್‌ಎಲ್‌ ಮುಚ್ಚುವ ಬಗ್ಗೆ ಹರಡುತ್ತಿರುವ ವದಂತಿಗಳು ಸತ್ಯಕ್ಕೆ ದೂರ ಎಂದು ಬಿಎಸ್‌ಎನ್‌ಎಲ್‌ ಕರ್ನಾಟಕದ ಮುಖ್ಯ ಮಹಾವ್ಯವಸ್ಥಾಪಕ ಸುಶೀಲ್‌ ಕುಮಾರ್‌ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಕೆಲ ಮಾಧ್ಯಮಗಳು ಬಿಎಸ್‌ಎನ್‌ಎಲ್‌ ಮುಚ್ಚಲಿವೆ ಎಂಬ ಬಗ್ಗೆ ಸುದ್ದಿ ಪ್ರಕಟಿಸಿವೆ. ಆದರೆ, ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ ಪುನರುಜ್ಜೀವನಗೊಳಿಸಲು ಪರಿಗಣಿಸುತ್ತಿದೆ. ಹಾಗಾಗಿ ಸಂಸ್ಥೆಯ ಪ್ರತಿಯೊಂದು ಸೇವೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶಾದ್ಯಂತ ಜಾಲ ಹೊಂದಿರುವ ಬಿಎಸ್‌ಎನ್‌ಎಲ್‌, ಇತ್ತೀಚೆಗೆ ಕರ್ನಾಟಕದ 18 ಜಿಲ್ಲೆಗಳ ಉಂಟಾದ ಪ್ರವಾಹದ ಸಂದರ್ಭದಲ್ಲಿ ಅನಿಯಮಿತ ಉಚಿತ ಕರೆಗಳು, ಉಚಿತ ಡೇಟಾ ಸೇವಾ ನೀಡಿತ್ತು. ನೈಸರ್ಗಿಕ ವಿಪತ್ತು ಸೇರಿದಂತೆ ಕಷ್ಟದ ಸಮಯದಲ್ಲಿ ರಾಷ್ಟ್ರ ಸೇವೆ ಸಲ್ಲಿಸುವ ಈ ಸಂಸ್ಥೆ, ದೂರದ ಸ್ಥಳಗಳಿಗೂ ಕೈಗೆಟಕುವ ಸೇವೆ ನೀಡುತ್ತಿದೆ. ಭವಿಷ್ಯದಲ್ಲೂ ಈ ಸೇವೆಯನ್ನು ಮುಂದುವರಿಸಲಿದೆ ಎಂದು ಅವರು ಗ್ರಾಹಕರಿಗೆ ಭರವಸೆ ನೀಡಿದ್ದಾರೆ.

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;