Asianet Suvarna News Asianet Suvarna News

2 ವರ್ಷ ವಾರೆಂಟಿ, 50MP ಕ್ಯಾಮೆರಾ:ಸ್ಯಾಮ್‌ಸಂಗ್ ಗೆಲಾಕ್ಸಿ XCover7 ಫೋನ್ ಲಾಂಚ್!

50MP ಕ್ಯಾಮೆರಾ, 2 ವರ್ಷದ ವಾರೆಂಟಿ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಹೊಚ್ಚ ಹೊಸ ಸ್ಯಾಮ್‌ಸಂಗ್ ಗೆಲಾಕ್ಸಿ XCover7  ಬಿಡುಗಡೆಯಾಗಿದೆ. ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದ್ದು, ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಫೋನ್ ಖರೀದಿಸಲು ಸಾಧ್ಯವಿದೆ.

Samsung India launch Galaxy XCover7 smartphone with maximum feature ckm
Author
First Published Feb 7, 2024, 8:18 PM IST

ಬೆಂಗಳೂರು(ಫೆ.07) ಸ್ಯಾಮ್‌ಸಂಗ್ ಭಾರತದಲ್ಲಿ  ಸೀರಿಸ್ ಫೋನ್ ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ಸ್ಯಾಮ್‌ಸಂಗ್ ಅತೀ ದೊಡ್ಡ ಸ್ಮಾರ್ಟ್‌ಪೋನ್ ಮಾರುಕಟ್ಟೆ ಪಾಲು ಆಕ್ರಮಿಸಿಕೊಳ್ಳುತ್ತಿದೆ. ಇದೀಗ ಸ್ಯಾಮ್‌ಸಂಗ್ ಗೆಲಾಕ್ಸಿ XCover7 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.  ಗೆಲಾಕ್ಸಿ XCover7, 5G  ಕೆನಕ್ಟ್  ಸಾಮರ್ಥ್ಯವಿರುವ, ಆಧುನೀಕೃತ ಮೊಬೈಲ್ ಪ್ರಾಸೆಸರ್ ಕಾರ್ಯಕ್ಷಮತೆ ಈ ಫೋನ್‌ನಲ್ಲಿದೆ. ಜೊತೆಗೆ ಹೆಚ್ಚುವರಿ ಮೆಮೋರಿ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.  ಎರಡು ವೇರಿಯೆಂಟ್‌ನಲ್ಲಿ ಈ ಫೋನ್ ಲಭ್ಯವಿದೆ – Standard ಮತ್ತು Enterprise. ಕ್ರಮವಾಗಿ ಇವು, 27,208 ರೂಪಾಯಿ ಹಾಗೂ 27350 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. 

ವಿಸ್ತರಿತ ಡಿಸ್‌ಪ್ಲೇ ಗಾತ್ರ ಮತ್ತು ರೆಸೊಲ್ಯೂಶನ್ ಇರುವ ಹೊಸ ಶಕ್ತಿಶಾಲಿ ರೇರ್ (ಹಿಂಬದಿ)ಕ್ಯಾಮರಾ ಫೀಚರ್ಸ್ ಹೊಂದಿದೆ. ಬಳಕೆದಾರರು ವಿವಿಧ ರೀತಿಯ ಸೆಟಿಂಗ್‌ಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಯಾವುದೇ ಸೆಟ್ಟಿಂಗ್‌ನಲ್ಲೂ ಸುಲಭವಾದ ಚಾರ್ಜಿಂಗ್‌ಗೆ ಅನುವು ಮಾಡಿಕೊಡುವ ಸರಳವಾದ POGO ಚಾರ್ಜಿಂಗ್ ಪಿನ್, ಮತ್ತು ಹೆಚ್ಚಿನ ಸ್ಪರ್ಶ ಸಂವೇದನಾಶೀಲತೆಯು, ಕೈಗಳಿಗೆ ಗ್ಲವ್ಸ್‌ಗಳನ್ನು ಹಾಕಿಕೊಂಡಿದ್ದಾಗಲೂ ಗೆಲಾಕ್ಸಿ XCover7 ಬಳಕೆಯನ್ನು ಸಾಧ್ಯಗೊಳಿಸುವುದರಿಂದ ಇದೊಂದು ವಿಶ್ವಸನೀಯವಾದ ಹಾಗೂ ಅನುಕೂಲತೆ-ಕೇಂದ್ರಿತ ಉತ್ಪನ್ನವಾಗಿದೆ. 

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್‌ 24 ಸೀರಿಸ್‌ ಫೋನ್‌ ತಗೊಳ್ಭೇಕಾ? 10 ನಿಮಿಷದೊಳಗೆ ನಿಮ್ಮ ಮನೆಗೇ ಬರುತ್ತೆ ನೋಡಿ..!

ಉತ್ತಮ ಬಾಳಿಕೆ
ಕಠಿಣವಾದ ಕೇಸ್ ಮತ್ತು ಪೋರ್ಟಿಫೈಡ್ ಗ್ಲಾಸ್ ಡಿಸ್ಪ್ಲೇಯೊಂದಿಗೆ ಗೆಲಾಕ್ಸಿ XCover7, ಮಿಲಿಟರಿ-ದರ್ಜೆಯ ಬಾಳಿಕೆ (MIL-STD-810H2) ಮಾನದಂಡಗಳನ್ನು ಅನುಸರಿಸಿದೆ ಮತ್ತು ವಿಪರೀತ ತಾಪಮಾನ ಹಾಗೂ ಮಳೆ ಒಳಗೊಂಡಂತೆ ತೀವ್ರತರವಾದ ಹವಾಮಾನ ಪರಿಸ್ಥಿತಿಗಳನ್ನು ಅದು ತಾಳಿಕೊಳ್ಳುತ್ತದೆ ಎಂಬುದನ್ನು ಖಾತರಿಪಡಿಸಲು ಅದನ್ನು ಅತ್ಯಂತ ಕಠಿಣವಾಗಿ ಪರೀಕ್ಷಿಸಲಾಗಿದೆ. IP68-ರೇಟ್ ಹೊಂದಿರುವ1 ಸ್ಮಾರ್ಟ್‌ಫೋನ್, ಕೇವಲ ನೀರು ಮತ್ತು ಧೂಳು-ನಿರೋಧಕತೆ ಹೊಂದಿರುವುದು ಮಾತ್ರವಲ್ಲದೆ, 1.5 metres3 ನಿಂದ ಕೆಳಗೆ ಬೀಳಿಸಿದಾಗಲೂ ತಾಳಿಕೊಳ್ಳುವುದಕ್ಕಾಗಿ ನಿರ್ಮಾಣಗೊಳಿಸಲಾಗಿದ್ದು, ಒರಟು ಹ್ಯಾಂಡ್ಲಿಂಗ್ ಅಥವಾ ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರದಿರುವುದನ್ನು ಖಾತರಿಪಡಿಸುತ್ತದೆ. 

ಉತ್ಪಾದಕತೆ ಹಾಗೂ ಭದ್ರತೆಯನ್ನು ಹೆಚ್ಚಿಸುವುದಕ್ಕಾಗಿ ಇಂಜಿನಿಯರ್ ಮಾಡಲಾಗಿದೆ 
ಪರಿವರ್ತನೀಯ ಶಾರ್ಟ್‌ಕಟ್‌ಗಳಿಗಾಗಿ ಪ್ರೊಗ್ರಾಮ್ ಮಾಡಬಹುದಾದ ಕೀ  ಹಾಗೂ ಶೀಘ್ರವಾದ ಕಾರ್ಯಕ್ಷಮತೆಗಾಗಿ ಶಕ್ತಿಶಾಲಿ ಪ್ರಾಸೆಸರ್‌ ಹೊಂದಿರುವ ಗೆಲಾಕ್ಸಿ XCover7, ಬಳಕೆದಾರರು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಒದಗಿಸುವುದರ ಜೊತೆಜೊತೆಗೇ ಅದರ ಸ್ಯಾಂಸಂಗ್ Knox Vault, ಪ್ರತ್ಯೇಕವಾದ, ಟ್ಯಾಂಪರ್-ನಿರೋಧಕ ಹಾರ್ಡ್‌ವೇರ್‌ನಲ್ಲಿ ಅತಿಮುಖ್ಯವಾದ ಡೇಟಾ ಮತ್ತು ಮಾಹಿತಿಯನ್ನು ಒದಗಿಸಿ ಸುರಕ್ಷತೆ ಖಾತರಿಪಡಿಸುತ್ತದೆ. 

ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಟೆಕ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸಿರೀಸ್ ಫೋನ್ ಲಾಂಚ್!

50MP ಹಿಂಬದಿ ಕ್ಯಾಮರಾ ಹಾಗೂ 5MP ಮುಂಬದಿ ಕ್ಯಾಮರಾ ಹೊಂದಿರುವ ಈ ಸಾಧನವು, 128GB ಇಂಟರ್‌ನಲ್ ಮೆಮೊರಿ ಇರುವ 6GB of RAM ಹೊಂದಿದ್ದು ಇದನ್ನು   microSDಕಾರ್ಡ್ ಮೂಲಕ 1TBವರೆಗೆ ವಿಸ್ತರಿಸಬಹುದಾಗಿದೆ. 

Knox Suite ಚಂದಾದಾರಿಕೆ
ಗೆಲಾಕ್ಸಿ XCover7 Enterprise ಆವೃತ್ತಿಯ ಮೇಲೆ Knox Suiteನ 12 ತಿಂಗಳ ಚಂದಾವನ್ನು ಸ್ಯಾಂಸಂಗ್ ಒದಗಿಸಿ, ಬಳಕೆದಾರರು ಸಾಧನಗಳ ಜೀವಿತಾವಧಿಯುದ್ದಕ್ಕೂ ತಮ್ಮ ಸಾಧನಗಳನ್ನು ಭದ್ರಪಡಿಸಿಕೊಂಡು, ಬಳಸಿಕೊಂಡು ನಿರ್ವಹಣೆ ಮಾಡುವ ಅವಕಾಶ ಒದಗಿಸುತ್ತಿದೆ. 

ವಾರಂಟಿ  
standard edition ಮೇಲೆ 1-ವರ್ಷ ವಾರಂಟಿ ಹಾಗೂ enterprise edition ಮೇಲೆ 2-ವರ್ಷ ವಾರಂಟಿಯನ್ನು ಗ್ರಾಹಕರಿಗೆ ಒದಗಿಸಲಾಗುತ್ತದೆ.

Follow Us:
Download App:
  • android
  • ios