ಬೆಂಗಳೂರು(ಫೆ.21): ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ F62 ಗೆ ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳು ಆಫ್‌ಲೈನ್‌ ಪಾಲುದಾರರಾಗಿರಲಿದೆ. 2021 ಫೆಬ್ರವರಿ 22 ರಿಂದ ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

ರಿಲಯನ್ಸ್‌ ಜಿಯೋಗೆ ಗ್ರಾಹಕರೇ ಗಮನಿಸಿ : ಇಲ್ಲಿದೆ ಒಂದು ಸಿಹಿ ಸುದ್ದಿ

ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಸ್ಯಾಮ್‌ಸಂಗ್‌ 7ಎನ್‌ಎಂ ಎಕ್ಸಿನೋಸ್‌ 9825 ಪ್ರೋಸೆಸರ್‌ ಭರಿತ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 128 ಜಿಬಿ ವಿಸ್ತರಿಸಬಹುದಾದ ಸ್ಟೊರೇಜ್‌ ಮತ್ತು ಕಲರ್ ಸೂಪರ್ ಅಮೊಲೆಡ್‌ ಸ್ಕ್ರೀನ್ ಹೊಂದಿದೆ. ಇದರ ಜೊತೆಗೆ 7000 ಎಂಎಎಚ್‌ ಬ್ಯಾಟರಿಯಿಂದಾಗಿ ಇದು ಗೇಮಿಂಗ್‌ಗೆ ಅತ್ಯಂತ ಉತ್ತಮವಾದದ್ದಾಗಿದೆ. ಅತ್ಯುತ್ತಮ ಗುಣಮಟ್ಟದ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳು ಮತ್ತು ಫೇಸ್ ಅನ್‌ಲಾಕ್‌ ಆಯ್ಕೆಗಳನ್ನು ಈ ಫೋನ್ ಹೊಂದಿದೆ. 64 ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್‌ ಹಾಗೂ ಮ್ಯಾಕ್ರ ಶೂಟಿಂಗ್‌ ಕೂಡಾ ಇದ್ದು, 6ಜಿಬಿ ರ್‍ಯಾಮ್‌ ಮಾದರಿಗೆ ರೂ. 21,499/-* ಹಾಗೂ 8ಜಿಬಿ ರ್‍ಯಾಮ್‌ ಮಾದರಿಗೆ ರೂ. 23,499/-* ದರದಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ. 2,500/- ಅಥವಾ ರೂ.2,500/- ವರೆಗೆ ಸಿಟಿ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಕ್ರೆಡಿಟ್ ಕಾರ್ಡ್‌ ಇಎಂಐ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಅನ್ನು ರಿಲಾಯನ್ಸ್ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಖರೀದಿ ಮಾಡುವ ಗ್ರಾಹಕರು, ರೂ. 10,000/- ಮೌಲ್ಯದ ಇತರ ಪ್ರಯೋಜನಗಳೂ ಇರಲಿವೆ. ಈ ಪ್ರಯೋಜನಗಳೆಂದರೆ, ರೂ. 349/- ಪ್ರೀಪೇಯ್ಡ್ ರಿಚಾರ್ಜ್‌ ಮೇಲೆ ರೂ. 3,000/- ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್‌ ಹಾಗೂ ಪಾರ್ಟ್ನರ್ ಬ್ರ್ಯಾಂಡ್‌ಗಳಿಂದ ರೂ. 7,000/- ಮೌಲ್ಯದ ವೋಚರುಗಳು ಲಭ್ಯವಿವೆ. ಈ ಕೊಡುಗೆಯು ಹೊಸ ಮತ್ತು ಪ್ರಸ್ತುತ ಜಿಯೋ ಚಂದಾದಾರರಿಗೆ ಲಭ್ಯವಿದೆ.

ಭಾರತದಾದ್ಯಂತ ಗ್ರಾಹಕರಿಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಗಾಗಿ ನಾವು ಏಕೈಕ ಆಫ್‌ಲೈನ್‌ ಪಾರ್ಟ್ನರ್ ಆಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳ ನಮ್ಮ ದೊಡ್ಡ ನೆಟ್‌ವರ್ಕ್‌ನಿಂದಾಗಿ ದೇಶಾದ್ಯಂತ ಗ್ರಾಹಕರು ಮೊದಲಿಗೆ ಆಗಮಿಸಿ, ಫೋನ್‌ ಖರೀದಿ ಮಾಡಲು ಅನುವು ಮಾಡಲಿದೆ. ಈ ಫೋನ್‌ನ ಕಾರ್ಯಕ್ಷಮತೆಗೆ ನಮ್ಮ ಗ್ರಾಹಕರು ಮನಸೂರೆಗೊಳ್ಳುತ್ತಾರೆ ಎಂಬುದು ನಮಗೆ ಖಚಿತವಿದೆ. ಅದರಲ್ಲೂ ವಿಶೇಷವಾಗಿ ಈ ಬೆಲೆಯು ಹಲವರಿಗೆ ಕೈಗೆಟಕುವಂತಿದೆ ಎಂದು ರಿಲಾಯನ್ಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಯಾನ್‌ ಬೇಡ್‌  ಹೇಳಿದ್ದಾರೆ.

*ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ