Asianet Suvarna News Asianet Suvarna News

ಮಾರ್ಚ್ 17 ರಂದು Samsung Galaxy Awesome Unlock Event: A ಸರಣಿಯ 4 ಸ್ಮಾರ್ಟ್‌ಫೋನ್‌ ಲಾಂಚ್?

Samsung Galaxy Awesome Unlock Event ಮಾರ್ಚ್ 17 ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ. 

Samsung Galaxy Awesome Unpacked Launch Event date march 7 A series 4 smartphones mnj
Author
Bengaluru, First Published Mar 14, 2022, 10:41 AM IST | Last Updated Mar 14, 2022, 10:41 AM IST

Tech Desk: Samsung Galaxy Awesome Unlock Event ದಿನಾಂಕ ಬಹಿರಂಗಗೊಂಡಿದ್ದು  ಕಾರ್ಯಕ್ರಮವು  ಮಾರ್ಚ್ 17 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಟಿಪ್‌ಸ್ಟರ್ ಇವಾನ್ ಬ್ಲಾಸ್ (@evleaks) ಪ್ರಕಾರ, ಬಿಡುಗಡೆಯನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ದಕ್ಷಿಣ ಕೊರಿಯಾದ ಟೆಕ್ ಕಂಪನಿ ಮುಂದಿನ ವಾರ ನಡೆಯಲಿರುವ ಈವೆಂಟ್‌ನಲ್ಲಿ Samsung Galaxy A53 5G ಮತ್ತು Samsung Galaxy A73 5G  ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು, Samsung Galaxy S22 ಸರಣಿ ಮತ್ತು Samsung Galaxy Tab S8 ಸರಣಿಯನ್ನು 2022 ರ ಮೊದಲ Galaxy Unpacked ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಬ್ಲಾಸ್ ಪ್ರಕಾರ, ಸ್ಯಾಮಸಂಗ್ ತನ್ನ Galaxy Awesome Unpacked Event ಮಾರ್ಚ್ 17 ರಂದು ಆಯೋಜಿಸುತ್ತದೆ. ಬ್ಲಾಸ್ ಹಂಚಿಕೊಂಡ ಚಿತ್ರದ ಪ್ರಕಾರ,  ಸ್ಯಾಮಸಂಗ್ Galaxy A- ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಈವೆಂಟ್‌ನಲ್ಲಿ ಬಿಡುಗಡೆ ಮಾಡುತ್ತದೆ. ಆದರೆ ಸ್ಯಾಮಸಂಗ್ ಇನ್ನೂ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಮಾರ್ಚ್ 17, 2021 ರಂದು Samsung Galaxy Awesome Unlock Eventನಲ್ಲಿ Galaxy A52 ಮತ್ತು Galaxy A72  ಬಿಡುಗಡೆ ಮಾಡಲಾಗಿತ್ತು.

Galaxy A73 5G, Galaxy A53 5G, Galaxy A33 5G, ಮತ್ತು Galaxy A23 5G - ಸ್ಯಾಮ್‌ಸಂಗ್ Galaxy A ಸರಣಿಯ ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಊಹಿಸಲಾಗಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಯಾವ ಹ್ಯಾಂಡ್‌ಸೆಟ್‌ಗಳು ಬಿಡುಗಡೆಯಾಗಲಿವೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Samsung Galaxy S22 Ultra: S ಸರಣಿಯ ಪ್ರೀಮಿಯಂ ಮಾದರಿ ಕ್ವಾಡ್ ಕ್ಯಾಮೆರಾದೊಂದಿಗೆ ಭಾರತದಲ್ಲಿ ಲಾಂಚ್!

Samsung Galaxy A73 5G, Galaxy A53 5G ಫಿಚರ್ಸ್ (ನಿರೀಕ್ಷಿತ): ಹಿಂದಿನ ವರದಿಗಳ ಪ್ರಕಾರ, Galaxy A73 5G ಮತ್ತು Galaxy A53 5G ಆಂಡ್ರಾಯ್ಡ್ 12-ಆಧಾರಿತ One UI 4 ಔಟ್-ಆಫ್-ಬಾಕ್ಸ್ ರನ್ ಮಾಡುತ್ತದೆ ಎಂದು ಹೇಳಲಾಗಿದೆ. Samsung Galaxy A73 5G 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದು Galaxy A53 5G 6.52-ಇಂಚಿನ AMOLED ಡಿಸ್ಪ್ಲೇಯನ್ನು ಪಡೆಯುತ್ತದೆ ಎಂದು ವರದಿಗಳು ತಿಳಿಸಿವೆ. 

ಎರಡೂ 120Hz ರಿಫ್ರೆಶ್ ರೇಟ್ ಡಿಸ್ಪ್ಲೇಗಳನ್ನು ಪಡೆಯುತ್ತವೆ ಎಂದು ಊಹಿಸಲಾಗಿದೆ. Galaxy A73 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ನಿಂದ ಚಾಲಿತವಾಗಿದೆ ಎಂದು ಹೇಳಲಾಗಿದ್ದರೂ, Galaxy A53 5G ಎಕ್ಸಿನೋಸ್ 1200 SoC ಪಡೆಯುತ್ತದೆ ಎಂದು ವರದಿಯಾಗಿದೆ.

ಕ್ಯಾಮೆರಾ:  Galaxy A73 5G ಮತ್ತು Galaxy A53 5G ಎರಡೂ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಒಳಗೊಂಡಿವೆ ಎಂದು ಹೇಳಲಾಗುತ್ತದೆ. Galaxy A73 5G 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 12-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ, ಜೊತೆಗೆ 8-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. 

Samsung Galaxy A53 5G 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 12-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು ಎರಡು 5-ಮೆಗಾಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಿರುತ್ತದೆ. ಎರಡೂ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಗಳನ್ನು ಪ್ಯಾಕ್ ಮಾಡುತ್ತವೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿSamsung India Guinness Record: ಗಿನ್ನೆಸ್ ರೆಕಾರ್ಡ್ ಸೇರಿದ ಸ್ಯಾಮ್ಸಂಗ್, ಏನದು ದಾಖಲೆ?

Samsung Galaxy A33 5G, Galaxy A23 5G ಫಿಚರ್ಸ್ (ನಿರೀಕ್ಷಿತ):  ಇತರ ಎರಡು ನಿರೀಕ್ಷಿತ Galaxy A- ಸರಣಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ, Galaxy A33 5G ಮತ್ತು Galaxy A23 5G ಆಂಡ್ರಾಯ್ಡ್ 11 ಔಟ್-ಆಫ್-ದಿ-ಬಾಕ್ಸ್  ರನ್ ಮಾಡುತ್ತದೆ ಎಂದು ಹಲವು ವರದಿಗಳು ತಿಳಿಸಿವೆ.

Galaxy A33 5G 6.4-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು, Galaxy A23 5G 6.6-ಇಂಚಿನ IPS ಡಿಸ್ಪ್ಲೇಯನ್ನು ಪಡೆಯುತ್ತದೆ ಎಂದು ವರದಿಯಾಗಿದೆ. ಎರಡೂ 90Hz ರಿಫ್ರೆಶ್ ರೇಟ್ ಡಿಸ್ಪ್ಲೇಗಳನ್ನು ಪಡೆಯುತ್ತವೆ ಎಂದು ಹೇಳಲಾಗುತ್ತದೆ. Galaxy A33 5G ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ನಿಂದ ಚಾಲಿತವಾಗಿದ್ದು Galaxy A23 5G ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕ್ಯಾಮೆರಾ: Galaxy A33 5G ಮತ್ತು Galaxy A23 5G ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಪಡೆಯಲಿದೆ ಎಂದು ವರದಿಯಾಗಿದೆ. Galaxy A33 5G 48-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ, ಜೊತೆಗೆ 5-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಸಂವೇದಕಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ. 

Galaxy A23 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು ಎರಡು 2-ಮೆಗಾಪಿಕ್ಸೆಲ್ ಸಂವೇದಕಗಳೊಂದಿಗೆ ಬರಲಿದೆ. ಎರಡೂ 15W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಗಳನ್ನು ಪ್ಯಾಕ್ ಮಾಡುತ್ತವೆ ಎಂದು ವರದಿಗಳು ತಿಳಿಸಿವೆ

 

 

Latest Videos
Follow Us:
Download App:
  • android
  • ios