ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್!
ಆಡಿಯೋ ಸಾಧನಗಳನ್ನು ಮಾರಾಟ ಮಾಡುತ್ತಿದ್ದ ಭಾರತೀಯ ಮೂಲದ ಬೋಟ್ ಇದೇ ಮೊದಲ ಬಾರಿಗೆ ಸ್ಟಾರ್ಮ್ ಹೆಸರಿನ ಸ್ಮಾರ್ಟ್ ವಾಚ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಆಡಿಯೋ ಎಲೆಕ್ಟ್ರಾನಿಕ್ಸ್ ಸಾಧನಗಳ ತಯಾರಿಕಾ ಬೋಟ್(boAt) ಸ್ಮಾರ್ಟ್ ವಿಯರೇಬಲ್ ಸಾಧನಗಳ ತಯಾರಿಕೆಗೂ ಇಳಿದಿದೆ. ಅಗ್ಗದ ದರಲ್ಲಿ ಅಧಿಕ ಫೀಚರ್‌ಗಳುಳ್ಳ ಸ್ಮಾರ್ಟ್ ವಾಚ್ ಇದಾಗಿದ್ದು, ಬಳಕೆದಾರರ ಗಮನ ಸೆಳೆಯಲು ಯಶಸ್ವಿಯಾಗಿದೆ. ಆರಂಭದಲ್ಲಿ ಮಾತ್ರವೇ ಸ್ಟಾರ್ಮ್ ಸ್ಮಾರ್ಟ್ ವಾಚ್ ಕೇವಲ 1,999 ರೂಪಾಯಿಗೆ ದೊರೆಯಲಿದ್ದು, ನಂತರದಲ್ಲಿ ಕಂಪನಿ ಬೆಲೆಯನ್ನು ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಬ್ಲೂಟೂಥ್ ಮೂಲಕ ಈ ಸ್ಮಾರ್ಟ್ ವಾಚ್ ಅನ್ನು ನೀವು ಸ್ಮಾರ್ಟ್ ಫೋನ್‌ಗೆ ಕನೆಕ್ಟ್ ಮಾಡಬಹುದು.
ಬಜೆಟ್ ಓರಿಯೆಂಟೆಡ್ ಆಡಿಯೋ ಸಾಧನಗಳನ್ನು ಮಾತ್ರವೇ ತಯಾರಿಸುತ್ತಿದ್ದ ಭಾರತೀಯ ಮೂಲದ ಕಂಪನಿಯಾಗಿದ್ದು 2015ರಲ್ಲಿ ಆರಂಭವಾಗಿದೆ. ಇಯರ್‌ಫೋನ್, ಹೆಡ್‌ಫೋನ್, ಸ್ಟಿರಿಯೋ, ಟ್ರಾವೆಲ್ ಚಾರ್ಜರ್‌ಗಳು ಮತ್ತು ಪ್ರೀಮಿಯಂ ಕೇಬಲ್‌ಗಳನ್ನು ಮಾರಾಟ ಮಾಡುತ್ತದೆ.
ವಾಟ್ಸ್ಆ್ಯಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?
ಇದೀಗ ಹೊಸ ಗ್ಯಾಜೆಟ್‌ನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಬೋಟ್, ತನ್ನ ವಿಯರೇಬಲ್ ಸ್ಮಾರ್ಟ್ ವಾಚ್ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಇದರ ಮಾರಾಟ ಶುರುವಾಗಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿದೆ ಎನ್ನಲಾಗುತ್ತಿದೆ.
ಕೇವಲ 1,999 ರೂಪಾಯಿ ಮಾತ್ರ
ಬೋಟ್ ಬಿಡುಗಡೆ ಮಾಡಿರುವ ಸ್ಮಾರ್ಟ್ ವಾಚ್ ಮೌಲ್ಯ ಕೇವಲ 1,999 ರೂಪಾಯಿ ಮಾತ್ರ. ಇದು ಆರಂಭಿಕ ಬೆಲೆಯಾಗಿದ್ದು, ಶೀಘ್ರದಲ್ಲೇ ಈ ವಾಚ್‌ಗಳ ಬೆಲೆಯನ್ನು ಕಂಪನಿ ಹೆಚ್ಚಿಸಬಹುದು. ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತ್ಯಂತ ಅಗ್ಗದ ಸ್ಮಾರ್ಟ್ ವಾಚ್ ಇದಾಗಿದೆ ಎನ್ನಲಾಗುತ್ತಿದೆ.
ವಿವೋ ವಿ20 ಆಯಿತು, ವಿ20ಪ್ರೋ, ವಿ20 ಎಸ್‌ಇ ಬಿಡುಗಡೆಗೆ ಸಿದ್ಧತೆ
ಏನೇನು ವಿಶೇಷತೆಗಳು?
ಬೋಟ್‌ನ ಈ ಸ್ಮಾರ್ಟ್ ವಾಚ್ 1.3 ಇಂಚ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ವಾಚ್‌ನ ಡಯಲ್ ಅನ್ನು ನೀವು ಕಸ್ಟ್‌ಮೈಸ್ ಮಾಡಿಕೊಳ್ಳಬಹುದು. ಗಮನಾರ್ಹ ಸಂಗತಿ ಎಂದರೆ, ಒಮ್ಮೆ ನೀವು ವಾಚ್ ಅನ್ನು ಚಾರ್ಜಿಂಗ್ ಮಾಡಿದರೆ ಅದು 10 ದಿನಗಳವರೆಗೆ ಇರುತ್ತದೆ ಮತ್ತು 30 ದಿನಗಳವರೆಗೆ ಸ್ಟ್ಯಾಂಡ್‌ಬೈ ಟೈಮ್ ಸಾಮರ್ಥ್ಯವನ್ನು ಎನ್ನುತ್ತದೆ ಬೋಟ್ ಕಂಪನಿ ಬೋಟ್ ಸ್ಟಾರ್ಮ್ 24x7 ಹಾರ್ಟ್ ರೇಟ್ ಮಾನಿಟರ್ ಮತ್ತು ಇನ್‌ಬಿಲ್ಟ್ ಆಗಿ ಎಸ್ಪಿಒ2(ಅಂದರೆ ರಿಯಲ್ ಟೈಮ್ ಬ್ಲಡ್ ಆಕ್ಸಿಜನ್ ಲೆವಲ್) ಮಾನಿಟರಿಂಗ್ ಸೌಲಭ್ಯವನ್ನು ಹೊಂದಿದೆ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಉಸಿರಾಟದ ಅರಿವಿನ ಬಗ್ಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಿ ಧ್ಯಾನಸ್ಥ ಉಸಿರಾಟದ ಮೋಡ್ ಸೌಲಭ್ಯ ಕೂಡ ಇದರಲ್ಲಿದೆ. ಇದು ನಿಮ್ಮ ಹೃದಯದ ಬಡಿತವನ್ನು ಕಡಿಮೆ ಮಾಡಲು ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸ್ಮಾರ್ಟ್ ವಾಚ್‌ನಲ್ಲಿ ಇನ್‌ಬಿಲ್ಟ್ ಆಗಿ ಮುಟ್ಟಿನ ಚಕ್ರ ಟ್ರ್ಯಾಕರ್ ಇದ್ದು, ಮುಟ್ಟಿನ ಮತ್ತು ಅಂಡೋತ್ಪತ್ತಿ ಚಕ್ರಗಳ ಅವಧಿಯನ್ನು ತಿಳಿದುಕೊಳ್ಳಲು ಇದು ನೆರವು ನೀಡುತ್ತದೆ.
9 ಸಕ್ರಿಯ ಸ್ಪೋರ್ಟ್ಸ್ ಮೋಡ್
ಬೋಟ್‌ನ ಈ ಸ್ಟಾರ್ಮ್ ಸ್ಮಾರ್ಟ್ ವಾಚ್‌ನಲ್ಲಿ 9 ಸಕ್ರಿಯ ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ. ರನ್ನಿಂಗ್, ವಾಕಿಂಗ್, ಸೈಕ್ಲಿಂಗ್, ಹೈಕಿಂಗ್, ಕ್ಲೈಬಿಂಗ್, ಫಿಟ್ನೆಸ್, ಟ್ರೆಡ್‌ಮಿಲ್, ಯೋಗ ಮತ್ತು ಡೈನಾಮಿಕ್ ಸ್ಕೈಲಿಂಗ್... ಇವೇ ಆ 9 ಮೋಡ್‌ಗಳು. ಬೋಟ್ ಸ್ಟಾರ್ಮ್ 5ಎಟಿಎಂ ಜಲನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, 50 ಮೀಟರ್ ಆಳದ ನೀರಿನಲ್ಲಿ ಬಿದ್ದರೂ ಸ್ಮಾರ್ಟ್ ವಾಚ್ ಹಾಳಾಗುವುದಿಲ್ಲ.
ಸಿಲಿಕೋನ್ ಸ್ಟ್ರ್ಯಾಪ್
ಬೋಟ್ ಸ್ಟಾರ್ಮ್ ವಾಚ್‌ನಲ್ಲಿ ನಿಮ್ಮ ಆಯ್ಕೆಯಂತೆ, ಅಗತ್ಯಕ್ಕೆ ತಕ್ಕಂತೆ ಸಿಲಿಕೋನ್ ಸ್ಟ್ರ್ಯಾಪ್‌ಗಳನ್ನು ಬದಲಿಸಬಹುದು. ಈ ಸ್ಟ್ರ್ಯಾಪ್‌ಗಳು ನಿಮ್ಮ ಚರ್ಮ ಹಾಗೂ ಬೆವರು ಸ್ನೇಹಿಯಾಗಿವೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಆರಾಮದಾಯಕವಾದ ಅನುಭವವನ್ನು ಅವು ನೀಡುತ್ತದೆ ಎಂಬುದು ಕಂಪನಿ ಅಂಬೋಣ. ಇದು ನಿಮ್ಮ ಸಂಗೀತ, ಪರಿಮಾಣ, ಟ್ರ್ಯಾಕ್‌ಗಳು ಮತ್ತು ಕರೆಗಳನ್ನು ನಿಯಂತ್ರಿಸಲು ಗಡಿಯಾರವನ್ನು ಬಳಸಲು ಅನುಮತಿಸುವ ಕ್ಯುರೇಟೆಡ್ ನಿಯಂತ್ರಣಗಳನ್ನು ಸಹ ಹೊಂದಿದೆ. ಆನ್-ಬೋರ್ಡ್ ಫೈಂಡ್ ಮೈ ಫೋನ್ ಫೀಚರ್ ಮತ್ತು ನೋಟಿಫಿಕೇಷನ್‌ಗಳನ್ನು ಸ್ಮಾರ್ಟ್ ವಾಚ್‌ನಲ್ಲಿ ನೇರವಾಗಿ ಸ್ವೀಕರಿಸಬಹುದು. ವಾಚ್ ಅನ್ನು ನಿಯಂತ್ರಿಸಲು ಮತ್ತು ಕಸ್ಟಮೈಸ್ ಮಾಡಲು ನೀವು ಬೋಟ್ ಪ್ರೊ ಗಿಯರ್ ಅಪ್ಲಿಕೇಶನ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು.
13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ