ಮುಂಬೈ(ಜು.15)  ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಣೆ ಮಾಡಿರುವುದು ಸದ್ಯದ ದೊಡ್ಡ ಸುದ್ದಿ.

ಇದೀಗ ಮುಕೇಶ್ ಅಂಬಾನಿ ಭಾರತವನ್ನು 2 ಜಿ ಮುಕ್ತ ಮಾಡುವ ಪಣ ತೊಟ್ಟಿದ್ದಾರೆ.  ಹೊಸ ಆಪರೇಟಿಂಗ್ ವ್ಯವಸ್ಥೆಯೊಂದನ್ನು ಸಿದ್ಧ ಮಾಡಲಾಗುತ್ತಿದೆ ಎಂದು ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಜಿಯೋದಲ್ಲಿ ಗೂಗಲ್ 30 ಸಾವಿರ ಕೋಟಿ ಹೂಡಲು ಕಾರಣವೇನು?

ಜಿಯೋ ಮತ್ತು ಗೂಗಲ್ ಜತೆಯಾಗಿ ಹೊಸ ಸ್ಮಾರ್ಟ್ ಫೋನ್ ಮತ್ತು ಅಂಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್ ಸಿದ್ಧಮಾಡಲಿದೆ. ಭಾರತದ ಪ್ರತಿಯೊಬ್ಬರು ಸ್ಮಾರ್ಟ್ ಪೋನ್ ಒಡೆಯರಾಗಬೇಕು ಎಂದು ಅಂಬಾನಿ ಹೇಳಿದ್ದಾರೆ.

ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುತ್ತಿರುವ ಗೂಗಲ್ ನ್ನು ಸ್ವಾಗತಿಸಲು ಕಾಯುತ್ತಿದ್ದೇವೆ ಎಂದು ಅಂಬಾನಿ ತಿಳಿಸಿದ್ದಾರೆ. ಜಿಯೋ ಆರಂಭವಾದಾಗ ವರ್ಷಗಳ ಕಾಲ ಡೇಟಾವನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಿತ್ತು. ಈಗ ಹೊಸ ಆಂಡ್ರಾಯಿಡ್ ಸಿಸ್ಟಮ್  ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.