Asianet Suvarna News Asianet Suvarna News

ಐಫೋನ್ 15 ಖರೀದಿಸುವವರಿಗೆ ಬಂಪರ್ ಆಫರ್, 2,394 ಮೌಲ್ಯದ 6 ತಿಂಗಳ ಜಿಯೋ ಪ್ಲಾನ್ ಉಚಿತ!

ರಿಲಯನ್ಸ್ ಜಿಯೋ ಬಂಪರ್ ಆಫರ್ ಘೋಷಿಸಿದೆ. ಆ್ಯಪಲ್ ಐಫೋನ್ 15 ಖರೀದಿಸುವ ಗ್ರಾಹಕರಿಗೆ 2,394 ರೂಪಾಯಿ ಮೌಲ್ಯದ 6 ತಿಂಗಳ ಉಚಿತ ಪ್ಲಾನ್ ಘೋಷಿಸಿದೆ. 

Reliance Jio announces 6 month free plan for New iPhone 15 buyers ckm
Author
First Published Sep 23, 2023, 6:57 PM IST

ನವದೆಹಲಿ(ಸೆ.23) ಮೇಡ್ ಇನ್ ಇಂಡಿಯಾ ಹೊಚ್ಚ ಹೊಸ ಐಫೋನ್ 15 ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹೊಸ ಫೋನ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಹೊಸ ಐಫೋನ್ 15 ಖರೀದಿಸುವ ಗ್ರಾಹಕರಿಗೆ ಹಲವು ಆಫರ್ ಲಭ್ಯವಿದೆ. ಇದೀಗ ರಿಲಯನ್ಸ್ ಜಿಯೋ ಹೊಸ ಬಂಪರ್ ಆಫರ್ ಘೋಷಿಸಿದೆ.  ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ  ಐಫೋನ್ 15 ಖರೀದಿ ಮಾಡಿದರೆ ರೂ.2,394 ಮೌಲ್ಯದ ಆರು ತಿಂಗಳ ಜಿಯೋ ಪ್ಲಾನ್ ಉಚಿತವಾಗಿ ಬಳಕೆದಾರರಿಗೆ ನೀಡಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ರೂ. 399 ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ ರೂ.2,394 ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ಏರ್‌ಟೆಲ್‌ಗೆ ಸೆಡ್ಡು: ಬೆಂಗಳೂರು ಸೇರಿ ದೇಶದ 8 ನಗರಗಳಲ್ಲಿ ಜಿಯೋ ಏರ್‌ಫೈಬರ್‌ ಲಾಂಚ್‌; ಪ್ಲ್ಯಾನ್‌ ವಿವರ ಹೀಗಿದೆ..

ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ ರೂ. 399 ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ. ಆದರೆ ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಲಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

ಭಾರತದ ಲಕ್ಷುರಿ ಶಾಪಿಂಗ್ ಮಾಲ್ ತೆರೆದ ಅಂಬಾನಿ, ಅಂಗಡಿಯ ತಿಂಗಳ ಬಾಡಿಗೆ 40 ಲಕ್ಷ ರೂ!

Follow Us:
Download App:
  • android
  • ios