Asianet Suvarna News Asianet Suvarna News

ನಾಲ್ಕು ರಿಯರ್ ಕ್ಯಾಮೆರಾಗಳೊಂದಿಗೆ ಫೆ. 9ಕ್ಕೆ Redmi Note 11S ಭಾರತಕ್ಕೆ ಎಂಟ್ರಿ!

Redmi Note 11S ಭಾರತದ ಬಿಡುಗಡೆ ದಿನಾಂಕವನ್ನು ಫೆಬ್ರವರಿ 9 ಕ್ಕೆ ನಿಗದಿಪಡಿಸಲಾಗಿದೆ ಎಂದು  ಶಾಓಮಿ ಉಪ ಬ್ರಾಂಡ್ ರೆಡ್‌ಮಿ ಸೋಮವಾರ ಪ್ರಕಟಿಸಿದೆ. ಹೊಸ ರೆಡ್‌ಮಿ ಫೋನ್ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

Redmi Note 11S India Launch February 9 Quad Rear Cameras Price Secifications Features mnj
Author
Bengaluru, First Published Jan 24, 2022, 4:16 PM IST

Tech Desk: Redmi Note 11S ಭಾರತದ ಬಿಡುಗಡೆ ದಿನಾಂಕವನ್ನು ಫೆಬ್ರವರಿ 9 ಕ್ಕೆ ನಿಗದಿಪಡಿಸಲಾಗಿದೆ ಎಂದು  ಶಾಓಮಿ ಉಪ ಬ್ರಾಂಡ್ ರೆಡ್‌ಮಿ ಸೋಮವಾರ ಪ್ರಕಟಿಸಿದೆ. ಹೊಸ ರೆಡ್‌ಮಿ ಫೋನ್ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.  Redmi Note 11S ಬಗ್ಗೆ ಕಳೆದ ಕೆಲವು ದಿನಗಳಿಂದ ಹಲವು ವದಂತಿಗಳ ಹರಿದಾಡುತ್ತಿದ್ದವು. ಫೋನ್ AMOLED ಡಿಸ್ಪ್ಲೇಯೊಂದಿಗೆ ಬರಬಹುದು. ಭಾರತದಲ್ಲಿ Redmi Note 11S ಜೊತೆಗೆ Xiaomi ಪ್ರಸ್ತುತ ತನ್ನ ಜಾಗತಿಕ Redmi Note 11 ಸರಣಿಯ ಬಿಡುಗಡೆಯ ತಯಾರಿಯಲ್ಲಿ ನಿರತವಾಗಿದೆ. Redmi Note 11 ಮಾದರಿಗಳನ್ನು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು.

ಅಧಿಕೃತ ರೆಡ್‌ಮಿ ಇಂಡಿಯಾ ಖಾತೆಯು  Redmi Note 11S ಟೀಸರ್ ಬಿಡುಗಡೆ ಮಾಡಿದೆ.   ಬಿಡುಗಡೆ ದಿನಾಂಕದ ಪ್ರಕಟಣೆಯ ಜೊತೆಗೆ ಶಾಓಮಿ Redmi Note 11S ಬ್ಯಾಕ್‌ ಪ್ಯಾನೆಲ್ ತೋರಿಸುವ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.  108-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಬಹಿರಂಗಪಡಿಸುತ್ತದೆ. ಹೊಸ Redmi ಫೋನ್ 4G ಸಂಪರ್ಕದೊಂದಿಗೆ ಬರಲಿದೆ ಮತ್ತು 5G ಬೆಂಬಲವನ್ನು ಹೊಂದಿಲ್ಲದಿರಬಹುದು ಎಂದು ಟೀಸರ್ ಸೂಚಿಸುತ್ತದೆ.‌  ಇದು 5G ಸಂಪರ್ಕದ ಬಗ್ಗೆ ಯಾವುದೇ ಉಲ್ಲೇಖಗಳನ್ನು ಹೊಂದಿಲ್ಲ ಜತೆಗೆ ಇದು 5G ಸಂಪರ್ಕವನ್ನು ಹೊಂದಿರುವ ಮಾರುಕಟ್ಟೆಯಲ್ಲಿನ ಇತರ ಬಜೆಟ್ ಫೋನ್‌ಗಳಿಗಿಂತ ಭಿನ್ನವಾಗಿದೆ.

ಇದನ್ನೂ ಓದಿ: Redmi K50 Gaming Edition: ಗೇಮಿಂಗ್ ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಏನೆಲ್ಲ ವಿಶೇಷತೆ?

ಹೋಲ್-ಪಂಚ್ ಕ್ಯಾಮೆರಾ:  ಶಾಓಮಿ ಈ ತಿಂಗಳ ಆರಂಭದಲ್ಲಿ ದೇಶದಲ್ಲಿ Redmi Note 11S ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿತ್ತು. ಅಧಿಕೃತ ಟೀಸರ್ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಅದರ ಕೆಲವು  ರೆಂಡರ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಫೋನ್ ಮುಂಭಾಗದಲ್ಲಿ ಕೇಂದ್ರೀಯವಾಗಿ ಜೋಡಿಸಲಾದ ಹೋಲ್-ಪಂಚ್ ಕ್ಯಾಮೆರಾದೊಂದಿಗೆ ಬರಬಹುದು ಎಂದು ರೆಂಡರ್‌ಗಳು ಸೂಚಿಸಿವೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸಹ ಸೂಚಿಸುತ್ತದೆ.

Redmi Note 11S 108-ಮೆಗಾಪಿಕ್ಸೆಲ್ Samsung ISOCELL HM2 ಪ್ರಾಥಮಿಕ ಕ್ಯಾಮೆರಾ ಹೊಂದಿದೆ, ಜೊತೆಗೆ 8-ಮೆಗಾಪಿಕ್ಸೆಲ್ Sony IMX355 ಸೆನ್ಸರ್ ಅಲ್ಟ್ರಾ-ವೈಡ್ ಲೆನ್ಸ್, 2-ಮೆಗಾಪಿಕ್ಸೆಲ್ OMnivision OV2A ಮ್ಯಾಕ್ರೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ ಎಂದು ಹೇಳಲಾಗುತ್ತದೆ. . ಮತ್ತೊಂದು ವರದಿಯು ಇತ್ತೀಚೆಗೆ Redmi Note 11S ನಲ್ಲಿ AMOLED ಡಿಸ್ಪ್ಲೇ ಇರುವಿಕೆಯನ್ನೂ ಸೂಚಿಸಿದೆ.

ಇದನ್ನೂ ಓದಿ: Xiaomi 11i HyperCharge 5G: ಕೇವಲ 15 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಕಂಪ್ಲೀಟ್‌ ಚಾರ್ಜ್‌: ಬೆಲೆ ಎಷ್ಟು?

ಕೆಲ ದಿನಗಳ ಹಿಂದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮತ್ತು ಥೈಲ್ಯಾಂಡ್‌ನ ರಾಷ್ಟ್ರೀಯ ಪ್ರಸಾರ ಮತ್ತು ದೂರಸಂಪರ್ಕ ಆಯೋಗ (NBTC) ಸೇರಿದಂತೆ ಕೆಲವು ಪ್ರಮಾಣೀಕರಣ ಪಟ್ಟಿಗಳಲ್ಲಿ Redmi Note 11S ಕಾಣಿಸಿಕೊಂಡಿದೆ. ಶಾಓಮಿ ಜನವರಿ 26 ರಂದು Redmi Note 11 ಸರಣಿಯ ಜಾಗತಿಕ ಬಿಡುಗಡೆಯನ್ನು ಆಯೋಜಿಸುತ್ತಿದೆ, ಅಲ್ಲಿ  Redmi Note 11 4G, Redmi Note 11 5G, Redmi Note 11 Pro ಮತ್ತು Redmi Note 11 Pro+ ನ ಹೊಸ ರೂಪಾಂತರಗಳನ್ನು ನೋಡಬಹುದು. ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಯಾದ Redmi Note 11 ಸರಣಿಯಲ್ಲಿ ಫೋನ್‌ಗಳು ಹಲವಾರು ವ್ಯತ್ಯಾಸಗಳನ್ನು ಹೊಂದಿವೆ ಎಂದು ವದಂತಿಗಳಿವೆ.

Follow Us:
Download App:
  • android
  • ios