Asianet Suvarna News Asianet Suvarna News

Redmi Note 11 Pro+ 5G Review: ಉತ್ತಮ ಕ್ಯಾಮೆರಾ, ಕಾರ್ಯಕ್ಷಮತೆ, ಆದರೆ ಬೆಲೆ ಕೊಂಚ ಜಾಸ್ತಿ?

 ಅತ್ಯಂತ ಪ್ರೀಮಿಯಂ Redmi Note 20,999 ರೂಗಳ ಆರಂಭಿಕ ಬೆಲೆಯನ್ನು ಹೊಂದಿದ್ದು ಇದು ನೋಟ್‌ ಸರಣಿಯ ಇದುವರೆಗಿನ ಅತ್ಯಧಿಕ ಬೆಲೆಗಳಲ್ಲಿ ಒಂದಾಗಿದೆ.

Redmi Note 11 Pro Plus 5G Review starting price Rs20999 mnj
Author
Bengaluru, First Published Mar 29, 2022, 11:11 AM IST

Redmi Note 11 Pro+ 5G Review: ಪ್ರತಿ ವರ್ಷ ರೆಡಮಿ ನೋಟ್ ಸರಣಿಯು ರೂ 20,000 ಕ್ಕಿಂತ ಕಡಿಮೆ ಬೆಲೆ ವಿಭಾಗಕ್ಕೆ ಹೊಸ ಸ್ಮಾರ್ಟ್‌ ಫೋನ್‌ಗಳನ್ನು ಪರಿಚಯಿಸುತ್ತದೆ. ರೆಡ್‌ಮಿಯ ಪ್ರೊ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಶ್ರೇಣಿಯಲ್ಲಿ ಕೊಂಚ ದುಬಾರಿ ಅನಿಸಿದರೂ  ಕ್ಯಾಮರಾ, ಕಾರ್ಯಕ್ಷಮತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತವೆ. ಆದರೆ ಇತ್ತೀಚೆಗೆ  ರೆಡ್‌ ಮಿ ನೋಟ್ ಸರಣಿಯ ಸ್ಮಾರ್ಟ್‌ ಫೋನ್‌ಗಳು ಬಜೆಟ್ ಶ್ರೇಣಿಯಲ್ಲಿ‌ ವಿವಿಧ ಬೆಲೆಗಳಲ್ಲಿ ಹಂಚಿಹೋಗಿದ್ದು , ಈಗ ಹೊಸ ಫೋನ್ ಹೆಚ್ಚಿನ  ಬೆಲೆಯೊಂದಿಗೆ ಬಿಡುಗಡೆಯಾಗಿದೆ. 

ಈ ವರ್ಷದ Redmi Note 11 Pro+ 5G ಆರಂಭಿಕ ಬೆಲೆ ರೂ 20,999 ಆಗಿದೆ, ಇದು ಇದುವರೆಗಿನ ಅತ್ಯಧಿಕ ಬೆಲೆಯಾಗಿದೆ. ಇದರ 8GB RAM+256GB ಸ್ಟೋರೇಜ್‌ಗೆ 24,999 ರೂ ಬೆಲೆಯಲ್ಲಿ ಲಭ್ಯವಿದೆ. ಇದು ರೆಡ್‌ ಮಿ ನೋಟ್  ಸರಣಿಯು ಇಲ್ಲಿಯವರೆಗೆ ಅತಿ ಹೆಚ್ಚಿನ ಬೆಲೆಯಾಗಿದೆ. ಆದರೆ ಬೆಲೆ ಏರಿಕೆ ನಿರೀಕ್ಷೆಗಳಿಗೆ ಈ ಸ್ಮಾರ್ಟ್‌ಫೋನ್ ಹೊಂದಿಕೆಯಾಗುತ್ತದೆಯೇ? ವಿಮರ್ಶೆ ಇಲ್ಲಿದೆ

Redmi Note 11 Pro+ ಬೆಲೆ: 6GB ಆಯ್ಕೆಗೆ ರೂ 20,999, 8GB +128GB ಗೆ ರೂ 22,999 ಮತ್ತು 8GB+256GB ಗೆ ರೂ 24,999

Redmi Note 11 Pro+ ಫೀಚರ್ಸ್‌: 6.67-ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ | Qualcomm Snapdragon 695 ಪ್ರೊಸೆಸರ್ ಜೊತೆಗೆ 5G | 6GB ಅಥವಾ 8GB RAM| 128GB ಅಥವಾ 256GB ಸಂಗ್ರಹ | 108MP+8MP+2MP ಕ್ಯಾಮರಾ | 16MP ಮುಂಭಾಗದ ಕ್ಯಾಮರಾ | Android 11 ನಲ್ಲಿ MIUI 13 |

ಇದನ್ನೂ ಓದಿ: Redmi Note 11 Pro ಸರಣಿಯ ಎರಡು ಸ್ಮಾರ್ಟ್‌ಫೋನ್ ಲಾಂಚ್: ಏನೆಲ್ಲಾ ವಿಶೇಷತೆ? ಬೆಲೆ ಎಷ್ಟು?

Redmi Note 11 Pro+ Review: Redmi Note 11 Pro+, ನೋಟ್ ಸರಣಿಯ ಇತರ ಫೋನ್‌ಗಳಲ್ಲಿ ನಾವು ನೋಡಿದ 'Evol' ವಿನ್ಯಾಸದೊಂದಿಗೆ ಮುಂದುವರಿಯುತ್ತದೆ. ಆದರೆ ಈ ಬಾರಿ ಫೋನ್ ಹಿಂದಿನ Redmi Note 10 Pro Max ಗೆ ಹೋಲಿಸಿದರೆ ಚಪ್ಪಟೆಯಾದ ದೇಹವನ್ನು ಹೊಂದಿದೆ, ಇದು ಕಳೆದ ವರ್ಷದ ಅತ್ಯಂತ ದುಬಾರಿ ಮಾದರಿಯಾಗಿತ್ತು.

ಕ್ಯಾಮೆರಾ ಮಾಡ್ಯೂಲ್ ಸ್ವಲ್ಪ ವಿಭಿನ್ನವಾಗಿ ಕಾಣುತ್ತದೆ ಮತ್ತು Redmi Note 11 Pro+ ಟ್ರಿಪಲ್ ಕ್ಯಾಮೆರಾವನ್ನು ಹೊಂದಿರುವುದು  ಮತ್ತೊಂದು ಪ್ರಮುಖ ಬದಲಾವಣೆ. ರೆಡ್‌ಮಿಯ Pro Max ಕ್ವಾಡ್-ಕ್ಯಾಮೆರಾ ಸೆಟಪನ್ನು ಹೊಂದಿತ್ತು.

Redmi Note 11 Pro+ ಫ್ರಾಸ್ಟೆಡ್ ಗ್ಲಾಸ್ ಬ್ಯಾಕ್‌ನೊಂದಿಗೆ ಫ್ಯಾಂಟಮ್ ವೈಟ್, ಮಿರಾಜ್ ಬ್ಲೂ ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ, ಇದು ಪ್ರೀಮಿಯಂ ನೋಟವನ್ನು ನೀಡುತ್ತದೆ. ಬಿಳಿ ಬಣ್ಣದ ರೂಪಾಂತರ ಬೆಳಕನ್ನು ಅವಲಂಬಿಸಿ ಬಣ್ಣವನ್ನು ಬದಲಾಯಿಸುವ ಸಾಧ್ಯತೆಯಿದೆ. ಆದರೆ ಇದರ ಮೇಲೆ ಫಿಂಗರ್‌ಪ್ರಿಂಟ್ ಕಲೆಗಳು ಉಳಿಯುವ ಸಾಧ್ಯತೆ ಇದೆ.

Redmi Note 11 Pro+ ಡಿಸ್ಪ್ಲೇ:  ಹೊಸ ಫೋನ್ 6.67-ಇಂಚಿನ AMOLED Full HD+ ಡಿಸ್ಪ್ಲೇಯೊಂದಿಗೆ ಮುಂದುವರಿಯುತ್ತದೆ. ಗರಿಷ್ಠ ರಿಫ್ರೆಶ್ ದರವು 120 Hz ಆಗಿದೆ, ಆದರೆ ಕೆಲವು ಪ್ರತಿಸ್ಪರ್ಧಿ ಸಾಧನಗಳು ಕಡಿಮೆ ಬೆಲೆಯ ಬ್ರಾಕೆಟ್‌ನಲ್ಲಿ ಹೊಂದಿರುವ ಯಾವುದೇ ಸ್ಮಾರ್ಟ್ ರಿಫ್ರೆಶ್ ಸೆಟ್ಟಿಂಗ್ ಇಲ್ಲ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಸಹ ಹೊಂದಿದೆ.

ಇದು ಈ ವಿಭಾಗದಲ್ಲಿ ನೀವು ಪಡೆಯಬಹುದಾದ ಅತ್ಯುತ್ತಮ ಡಿಸ್ಪ್ಲೇಗಳಲ್ಲಿ ಒಂದಾಗಿದೆ. ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಡಿಸ್ಪ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಡಿಸ್ಪ್ಲೇ ಮೇಲಿನ ಟೆಕ್ಸ್ಟನ್ನು ಓದಲು ಉತ್ತಮ ಅನುಭವ ನೀಡುತ್ತದೆ.  ಚಲನಚಿತ್ರಗಳು ಅಥವಾ ಯುಟ್ಯೂಬ್ ಸ್ಟ್ರೀಮಿಂಗ್ ವೀಕ್ಷಿಸಲು ಹಾಗೂ ನಿಮ್ಮ ದೈನಂದಿನ ಮನರಂಜನೆಗಾಗಿ ನೀವು ಫೋನನ್ನು ಖರೀದಿಸುವ ಯೋಚನೆಯಲ್ಲಿದ್ದರೆ ನಿಮ್ಮ ಎಲ್ಲ ಅವಶ್ಯಕತೆಗಳನ್ನು ಇದು ಸುಲಭವಾಗಿ ಪೂರೈಸುತ್ತದೆ. 

ಇದನ್ನೂ ಓದಿ: 4,500mAh ಬ್ಯಾಟರಿಯೊಂದಿಗೆ Redmi K40S ಲಾಂಚ್: ಏನೆಲ್ಲಾ ವಿಶೇಷತೆಗಳಿವೆ?

ಆದರೆ ಇವೆಲ್ಲವೂ ರೆಡ್‌ಮಿ ನೋಟ್ ಫೋನ್‌ಗಳಲ್ಲಿನ ಪ್ರೊ ಸರಣಿಯಲ್ಲಿ ಸಹಜಾವಗಿ ನಿರೀಕ್ಷಿಸಬಹುದಾದ ವೈಶಿಷ್ಟ್ಯವಾಗಿದ್ದು ನೆಟ್‌ಫ್ಲಿಕ್ಸ್‌ನಲ್ಲಿ ಚಲನಚಿತ್ರ, ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಇದು ಉತ್ತಮ ಆಯ್ಕೆಯಾಗಿದೆ. 

Redmi Note 11 Pro Plus 5G Review starting price Rs20999 mnj

Redmi Note 11 Pro+ ಕೆಲವು ಇತರ ಬದಲಾವಣೆಗಳೊಂದಿಗೆ ಬರುತ್ತದೆ. ಇದು ಈಗ 5G ಬೆಂಬಲವನ್ನು ಒಳಗೊಂಡಿದೆ, ಆದರೂ ಶಾಓಮಿ ತನ್ನ ಪೋರ್ಟ್‌ಫೋಲಿಯೊದಲ್ಲಿ 4G ಮತ್ತು 5G ಸಾಧನಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಉತ್ಸುಕವಾಗಿದೆ. ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್  ರನ್ ಮಾಡುತ್ತದೆ, ಇದು ಈ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾಗಿ ಕಂಡುಬರುತ್ತದೆ, ಏಕೆಂದರೆ ರಿಯಲ್‌ಮಿ ಮತ್ತು ವಿವೋ ಸಹ ಅದೇ ಚಾಲಿತ ಆಯ್ಕೆಗಳನ್ನು ಹೊಂದಿದೆ.

Redmi Note 11 Pro+  ಕಾರ್ಯಕ್ಷಮತೆ:  8GB RAM+128GB ಆವೃತ್ತಿಯು  ರ‍್ಯಾಮನ್ನು 3GB ವರೆಗೆ ವಿಸ್ತರಿಸುವ ಆಯ್ಕೆಯೊಂದಿಗೆ ಬರುತ್ತದೆ. ವೈಶಿಷ್ಟ್ಯವನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ, ಆದರೂ ನೀವು ಆದ್ಯತೆಯ ಆಧಾರದ ಮೇಲೆ ಅದನ್ನು ಆಫ್ ಮಾಡಲು ಸೆಟ್ಟಿಂಗ್‌ಗಳಲ್ಲಿ ಮೆಮೊರಿ ವಿಸ್ತರಣೆ ಆಯ್ಕೆಗೆ ಹೋಗಬಹುದು.

ಫೋನ್‌ನ ಕಾರ್ಯನಿರ್ವಹಣೆಯು ಸುಗಮವಾಗಿದೆ ಮತ್ತು ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುವುದು ಅಥವಾ ಸಾಮಾನ್ಯ  ದೈನಂದಿನ ಕಾರ್ಯಗಳಿಗಾಗಿ, ಇದು ಯಾವುದೇ ತೊಂದರೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ. 

ಸ್ಮಾರ್ಟ್‌ಫೋನ್‌ ಗೇಮಿಂಗ್‌ ಉತ್ಸಾಹಿಗಳಿಗೂ ಉತ್ತಮ ಅನುಭವ ನೀಡಲಿದೆ.  ಯಾವುದೇ ತೊಂದರೆಗಳಿಲ್ಲದೆ ಗೇಮ್ಸ್‌ ಪ್ಲೇ ಮಾಡಬಹುದು. ಆದಾಗ್ಯೂ ಕೆಲ ಗೇಮ್‌ಗಳನ್ನು ಆಡುವಾಗ ಸಾಧನವು ಮೇಲ್ಭಾಗದಲ್ಲಿ ಗಮನಾರ್ಹವಾಗಿ ಬಿಸಿಯಾಗಬಹುದು. 

ಇದನ್ನೂ ಓದಿ: Redmi 10 ಫೋನ್ ಲಾಂಚ್, 50 ಎಂಪಿ ಕ್ಯಾಮೆರಾ, ಬೆಲೆ ಕೇವಲ 10,999 ರೂ.!

Redmi Note 11 Pro+ ಕ್ಯಾಮೆರಾ: ಹಿಂಬದಿಯ ಕ್ಯಾಮರಾ 108MP+ 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ. ರೆಡ್‌ಮಿ ಫೋನ್‌ನಲ್ಲಿ ಸುಧಾರಿತ ಕಡಿಮೆ-ಬೆಳಕಿನ ಕಾರ್ಯಕ್ಷಮತೆಯನ್ನು ಭರವಸೆ ನೀಡುತ್ತಿದೆ. ಹೆಚ್ಚಿನ ಸನ್ನಿವೇಶಗಳಿಗೆ ಸಮತೋಲಿತ ಬಣ್ಣಗಳೊಂದಿಗೆ ಮುಖ್ಯ ಕ್ಯಾಮರಾ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ.  ಕ್ಯಾಮೆರಾ ಸಾಕಷ್ಟು ವಿವರಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಅತ್ಯುತ್ತಮ ವಿವರಗಳನ್ನು ಸರೆಹಿಡಿಯಲು ಯಶಸ್ವಿಯಾಗಿದೆ. 

ರಾತ್ರಿಯ ಛಾಯಾಗೃಹಣಕ್ಕೂ ಕನಿಷ್ಠ ಬೆಳಕಿನ ಹೊರತಾಗಿಯೂ ತುಂಬಾ ಸ್ಮಾರ್ಟ್‌ಫೋನ್‌ ಉತ್ತಮವಾಗಿ ಕೆಲಸ ಮಾಡಿದೆ. ಮನೆಯೊಳಗೆ ಕಡಿಮೆ ಬೆಳಕಿನಲ್ಲಿ ತೆಗೆದ  ಶಾಟ್‌ಗಳು ಕೂಡ ತುಂಬಾ ಉತ್ತಮವಾಗಿ ಮೂಡಿಬಂದಿವೆ. 

Redmi Note 11 Pro Plus 5G Review starting price Rs20999 mnj

Follow Us:
Download App:
  • android
  • ios