Asianet Suvarna News Asianet Suvarna News

ಹೊಸ ವರ್ಷದಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ ರೆಡ್‌ಮಿ ನೋಟ್ 12 ಸಿರೀಸ್ ಫೋನ್!

*ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿವೆ ರೆಡ್‌ಮಿ ಹೊಸ ಸ್ಮಾರ್ಟ್‌ಫೋನ್ಸ್
*ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ರೆಡ್‌ಮಿ ನೋಟ್ 12 ಸಿರೀಸ್
*ರೆಡ್‌ಮಿ ನೋಟ್ 12 ಪ್ರೋ ಪ್ಲಸ್‌ ಸ್ಮಾರ್ಟ್‌ಫೋನ್‌ನಲ್ಲಿ ಇರಲಿದೆ 200 ಎಂಪಿ ಕ್ಯಾಮೆರಾ!

Redmi 12 series phone launch in India in January 2023 check details
Author
First Published Dec 11, 2022, 4:25 PM IST

ಶಿಯೋಮಿ ಕಂಪನಿಯ ರೆಡ್‌ಮಿ ಬ್ರ್ಯಾಂಡ್ ತನ್ನ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಮುಂದಾಗಿದೆ. ಅಂದರೆ, ರೆಡ್‌ಮಿ ನೋಟ್ 12 ಪ್ರೋ ಪ್ಲಸ್ (Redmi 12 Pro Plus) ಸ್ಮಾರ್ಟ್‌ಫೋನ್ ಶೀಘ್ರವೇ ಭಾರತದ ಗ್ರಾಹಕರಿಗೆ ದೊರೆಯಲಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಫೋನುಗಳನ್ನು ಕಂಪನಿಯು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 12 5ಜಿ ಸರಣಿ ಹೆಸರಿನಲ್ಲಿ ನೀಡುತ್ತಿದೆ. ರೆಡ್ಮಿ ನೋಟ್ 12 (Redmi Note 12), ರೆಡ್ಮಿ ನೋಟ್ 12 ಪ್ರೋ (Redmi Note 12 Pro) ಮತ್ತು ರೆಡ್ಮಿ ನೋಟ್ ಪ್ರೋ ಪ್ಲಸ್ (Redmi Note 12 Pro Plus) ಭಾರತದಲ್ಲಿ ಲಾಂಚ್ ಆಗಲಿರುವ ರೆಡ್ಮಿ ಸರಣಿ ಫೋನ್ಗಳಾಗಿವೆ. ಆದರೆ, ಈ ಫೋನುಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.

ಭಾರತದಲ್ಲಿ ಜನವರಿ 10ಕ್ಕೆ iQOO 11 ಸ್ಮಾರ್ಟ್‌ಫೋನ್ ಲಾಂಚ್, ಫೀಚರ್ಸ್‌ ಏನಿರುತ್ತೆ?

ಖ್ಯಾತ ಟಿಪ್ಪರ್ ಮುಕುಲ್ ಶರ್ಮಾ ಪ್ರಕಾರ, ಹೊಸ ನೋಟ್ 12 ಸರಣಿಯು ಜನವರಿಯಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಫೋನುಗಳನ್ನು ಇತ್ತೀಚೆಗಷ್ಟೇ ಕಂಪನಿಯು ಚೀನಾ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದೀಗ ಭಾರತೀಯ ಮಾರುಕಟ್ಟೆಗೂ ಕಾಲಿಡಲಿವೆ. ಕಳೆದ ವರ್ಷ ಭಾರತದಲ್ಲಿ ಕಂಪನಿಯು ನೋಟ್ 11 ಸರಣಿ ಫೋನುಗಳನ್ನು ಬಿಡುಗಡೆ ಮಾಡಿತ್ತು. ಈಗ ರೆಡ್‌ಮಿ ಅವುಗಳ ಜಾಗಕ್ಕೆ ಹೊಸ ಆವೃತ್ತಿಯ ನೋಟ್ 12 ಸರಣಿ ಫೋನುಗಳನ್ನು ಪರಿಚಯಿಸಲು ಮುಂದಾಗಿದೆ. 

ಮುಕುಲ್ ಶರ್ಮಾ ಅವರ ಟ್ವೀಟ್ ಪ್ರಕಾರ, ಹೊಸ ರೆಡ್ ಮಿ ನೋಟ್ ಸರಣಿ ಫೋನುಗಳ 2023ರ  ಜನವರಿ 5 ರಂದು ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರಲಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಸೂಪರ್ ನೋಟ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸುವ ಸಮಯವು ಈಗ ಬಂದಿದೆ. ರೆಡ್ಮಿ ನೋಟ್ 12 ಸರಣಿಯು ಭಾರತದಲ್ಲಿ ಜನವರಿ 5 ರಂದು ಬಿಡುಗಡೆಯಾಗಲಿದೆ ಎಂದು ಖಚಿತಪಡಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಈ Redmi Note 12, Note 12 Pro, Pro+ ಎಲ್ಲ ಫೋನುಗಳು 5ಜಿ ತಂತ್ರಜ್ಞಾನವನಕ್ಕೂ ಅನುಗುಣವಾಗಿದೆ.  ರೆಡ್ಮಿ ನೋಟ್ 12 ಪ್ರೊ+ ಸ್ಮಾರ್ಟ್ಫೋನ್ 200MP ಮುಖ್ಯ ಕ್ಯಾಮೆರಾ ಹೊಂದಿರುವ ಸಾಧ್ಯತೆಯ ಬಗ್ಗೆಯೂ ಅವರು ತಿಳಿಸಿದ್ದಾರೆ.

 

 

Note 12 Pro Plus ಭಾರತದಲ್ಲಿ 200 ಮೆಗಾಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಮುಖ್ಯ ಕ್ಯಾಮೆರಾವನ್ನು ಹೊಂದಿರುವ ಎರಡನೇ ಫೋನ್ ಆಗಿದೆ. ಮೊಟೊರೊಲಾ ಈ ಹಿಂದೆ ಎಡ್ಜ್ 30 ಅಲ್ಟ್ರಾವನ್ನು ಪರಿಚಯಿಸಿತ್ತು, ಇದು 200-ಮೆಗಾಪಿಕ್ಸೆಲ್ ಸರಣಿ ಕ್ಯಾಮೆರಾವನ್ನು ಒಳಗೊಂಡಿತ್ತು. ಹಾಗಾಗಗಿ, ರೆಡ್‌ಮಿ Note 12 Pro+ ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ನೋಡೋಣ. Redmi Note 12 Pro+ ನಲ್ಲಿ 6.67-ಇಂಚಿನ ಪೂರ್ಣ-HD OLED ಡಿಸ್‌ಪ್ಲೇ ಇದ್ದು, ಅದು 120 Hz ನ ರಿಫ್ರೆಶ್ ದರ ಮತ್ತು 240 Hz ಟಚ್ ಮಾದರಿ ದರವನ್ನು ಹೊಂದಿದೆ. 8 GB RAM ಮತ್ತು MediaTek ಡೈಮೆನ್ಸಿಟಿ 1080 SoC ಸುಧಾರಿತ ಕಾರ್ಯಕ್ಷಮತೆಗಾಗಿ Note 12 Pro+ ಸ್ಮಾರ್ಟ್‌ಫೋನ್‌ಗೆ ಪವರ್ ನೀಡುತ್ತದೆ. 

2026ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಕಾರ್, ಬೆಲೆ ಎಷ್ಟು ಗೊತ್ತಾ?

200- ಮೆಗಾ ಪಿಕ್ಸೆಲ್ OIS ಕ್ಯಾಮೆರಾ, 8 - ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ , ಮತ್ತು 2-ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳನ್ನು ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿರುವ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ನೀಡಲಾಗಿದೆ. ಕ್ಯಾಮೆರಾಗೆ ಸಂಬಂಧಿಸಿದಂತೆ Note 12 Pro+ ಸ್ಮಾರ್ಟ್‌ ಫೋನ್ ವಿಶಿಷ್ಟವಾಗಿ ನಿಲ್ಲುತ್ತದೆ. ಕ್ಯಾಮೆರಾ ದೃಷ್ಟಿಯಿಂದ ಈ ಫೋನ್ ಅದ್ಭುತವಾಗಿದೆ ಎಂದು ಹೇಳಬಹುದು. ಈ ಫೋನ್ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 120W ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ.

Follow Us:
Download App:
  • android
  • ios