ಭಾರತದಲ್ಲಿಂದು Redmi 10A ಬಿಡುಗಡೆ: ನಿರೀಕ್ಷಿತ ಬೆಲೆ, ಫೀಚರ್‌ಗಳೇನು?
Redmi 10A, Redmi 10ನ ವಾಟರ್ಡ್ ಡೌನ್ ಆವೃತ್ತಿಯಾಗಿದೆ. ಆದರೆ MediaTek Helio G25 ಪ್ರೊಸೆಸರ್, 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಸಕ್ತಿದಾಯಕ ವಿಶೇಷಣಗಳೊಂದಿಗೆ ಬರುತ್ತದೆ.
Redmi 10A Launch: ಶಾಓಮಿಯ ಉಪ-ಬ್ರಾಂಡ್ ರೆಡ್‌ಮಿ ಮಾರುಕಟ್ಟೆಯಲ್ಲಿ ಮತ್ತೊಂದು ಬಜೆಟ್ ಫೋನನ್ನು ಪ್ರಾರಂಭಿಸಲು ಸಿದ್ಧವಾಗಿದೆ. ತನ್ನ ಕೈಗೆಟಕುವ ಬೆಲೆಯ ಶ್ರೇಣಿಯನ್ನು ವಿಸ್ತರಿಸುತ್ತಾ, ಶಾಓಮಿ ಇಂದು ಭಾರತದಲ್ಲಿ Redmi 10A ಬಿಡುಗಡೆ ಮಾಡಲಿದೆ. ಒಂದು ತಿಂಗಳ ಹಿಂದೆ ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿತ್ತು. Redmi 10A ಈಗಾಗಲೇ ಅಮೆಝಾನ್ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದನ್ನು ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು.
Redmi 10A, Redmi 10ನ ವಾಟರ್ಡ್ ಡೌನ್ ಆವೃತ್ತಿಯಾಗಿದೆ. ಆದರೆ MediaTek Helio G25 ಪ್ರೊಸೆಸರ್, 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಸಕ್ತಿದಾಯಕ ವಿಶೇಷಣಗಳೊಂದಿಗೆ ಬರುತ್ತದೆ. Redmi 10Aನ ನಿರೀಕ್ಷಿತ ಬೆಲೆ ಮತ್ತು ಸಂಪೂರ್ಣ ವಿಶೇಷಣಗಳ ಡಿಟೇಲ್ಸ್ ಇಲ್ಲಿದೆ
Redmi 10A ನಿರೀಕ್ಷಿತ ಬೆಲೆ: Redmi 10 ಭಾರತದ ಬೆಲೆಯ ಬಗ್ಗೆ ಇಲ್ಲಿಯವರೆಗೆ ಏನನ್ನೂ ಬಹಿರಂಗಪಡಿಸಲಾಗಿಲ್ಲ ಆದರೆ ಸ್ಮಾರ್ಟ್‌ಫೋನ್ ಈಗಾಗಲೇ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. Redmi 10A ಚೀನಾದಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಇದರಲ್ಲಿ 4GB RAM + 64GB, 4GB RAM + 128GB ಮತ್ತು ಇನ್ನೊಂದು 6GB RAM + 128GB ರೂಪಾಂತರಗಳು ಸೇರಿವೆ. ಸಾಧನವು ಮೂಲ ರೂಪಾಂತರಕ್ಕಾಗಿ ಚೀನಾದಲ್ಲಿ ರೂ 649 ಯುವಾನ್ (ಸುಮಾರು ರೂ 7,700) ನಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: OnePlus 10R, Xiaomi 12 Pro: ಏಪ್ರಿಲ್ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಸ್ಮಾರ್ಟ್‌ಫೋನ್ಸ್
ಸೋರಿಕೆಗಳು ಮತ್ತು ವದಂತಿಗಳ ಪ್ರಕಾರ, Redmi 10A 4GB ಮತ್ತು 64GB ಸ್ಟೋರೇಜ್ ರೂಪಾಂತರಕ್ಕಾಗಿ ರೂ 9999 ರ ಆರಂಭಿಕ ಬೆಲೆಯಲ್ಲಿ ಪ್ರಾರಂಭಿಸಲಾಗುವುದು. ಆದರೆ 3GB RAM + 32GB ಸಂಗ್ರಹಣೆಯೊಂದಿಗೆ ಫೋನ್‌ನ ಮೂಲ ರೂಪಾಂತರವು ಸುಮಾರು 8,999 ರೂ ಬೆಲೆಯಲ್ಲಿ ಬಿಡುಗಡೆಯಾಗಹುದು. ಆದರೆ ಇದು ಕೇವಲ ಸೋರಿಕೆಗಳಿಂದ ತಿಳಿದುಬಂದ ಬೆಲೆ, ಹೀಗಾಗಿ ಭಾರತದಲ್ಲಿ ಫೋನನ್ನು ಬಿಡುಗಡೆ ಮಾಡಿದ ನಂತರವೇ ಅಂತಿಮ ಬೆಲೆಯನ್ನು ದೃಢೀಕರಿಸಬಹುದು.
Redmi 10A ಫೀಚರ್ಸ್: Redmi 10A 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.53-ಇಂಚಿನ HD+ LCD ಡಿಸ್ಪ್ಲೇಯೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ 4GB RAM ಮತ್ತು 64GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ MediaTek Helio G25 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಫೋನ್ ಸಂಗ್ರಹಣೆ ವಿಸ್ತರಿಸಲು ಹೆಚ್ಚುವರಿ ಸ್ಲಾಟನ್ನು ಪಡೆಯದಿರಬಹುದು. Redmi 10A Android 11 ಆಧಾರಿತ MIUI 12.5 ಕಸ್ಟಮ್ ಸ್ಕಿನ್ ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, Redmi 10A 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು LED ಫ್ಲ್ಯಾಷ್‌ನೊಂದಿಗೆ ಸಂಯೋಜಿಸುತ್ತದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್ ಬಾಕ್ಸ್‌ನಲ್ಲಿ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸೆನ್ಸಾರ್, 3.5mm ಆಡಿಯೊ ಜ್ಯಾಕ್, 4G LTE, Wi-Fi, ಬ್ಲೂಟೂತ್ 5.0, ಮೈಕ್ರೋ USB ಪೋರ್ಟ್ ಮತ್ತು GPS ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.