ನಾರ್ಜೋ ಸಿರೀಸ್‌ನ ಎರಡು ಶಕ್ತಿಶಾಲಿ ಫೋನ್‌ ರಿಲೀಸ್‌ ಮಾಡಿದ ರಿಯಲ್‌ ಮಿ

1 ಟಿಬಿ ಸ್ಟೋರೇಜ್‌ ಹೊಂದಿರುವ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಅನ್ನು ರಿಯಲ್‌ ಮೀ ಕಂಪನಿ ಹೊರತಂದಿದೆ.  ತನ್ನ ನಾರ್ಜೋ ಸಿರೀಸ್‌ನ ಹೊಸ 5ಜಿ ಫೋನ್‌ಗಳಾದ ರಿಯಲ್‌ ಮೀ ನಾರ್ಜೋ 60 ಪ್ರೋ 5ಜಿ ಹಾಗೂ ನಾರ್ಜೋ 60 5ಜಿ ಫೋನ್‌ಗಳನ್ನು ಕಂಪನಿ ಅನಾವರಣ ಮಾಡಿದೆ.

Realme Narzo 60 Pro 5G launched with 1TB storage Narzo 60 5G with 64MP cam san

ಬೆಂಗಳೂರು (ಜು.10): ಭಾರತದ ಅತ್ಯಂತ ವಿಶ್ವಾಸಾರ್ಹ ಸ್ಮಾರ್ಟ್‌ಫೋನ್‌ ಪೂರೈಕೆದಾರ ರಿಯಲ್‌ ಮೀ ತನ್ನ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ರಿಯಲ್‌ ಮಿ ನಾರ್ಜೋ 60 ಸರಣಿಯ 5ಜಿ ಫೋನ್‌ಗಳನ್ನು ಕಂಪನಿ ಸೋಮವಾರ ಬೆಂಗಳೂರಿನಲ್ಲಿ ಅನಾವರಣ ಮಾಡಿತು. ಇದರಲ್ಲಿ ರಿಯಲ್‌ ಮಿ ನಾರ್ಜೋ 60 ಪ್ರೋ 5ಜಿ ಹಾಗೂ ರಿಯಲ್‌ ಮಿ ನಾರ್ಜೊ 50 ಜಿ ಫೋನ್‌ಗಳನ್ನು ಕಂಪನಿ ಹೊರತಂದಿದೆ. ಈ ಎರಡೂ ಫೋನ್‌ಗಳನ್ನು ರಿಯಲ್‌ ಮೀ ತನ್ನ 'ಮಾರ್ಟಿಯನ್‌ ಹಾರಿಜಾನ್‌' ವಿನ್ಯಾಸದಲ್ಲಿ ಹೊರತಂದಿದೆ. ಇದರಲ್ಲಿ ಒಂದು ಮಾಡೆಲ್‌ಅನ್ನು ಕಂಪನಿ ಮಾರ್ಸ್‌ ಆರೆಂಜ್‌ ಎನ್ನುವ ಹೆಸರನ್ನು ಹೆಸರನ್ನು ಹೊಂದಿದ್ದು, ಸಂಪೂರ್ಣವಾಗಿ ವೇಗನ್‌ ಲೆದರ್‌ ಟೆಕ್ಸ್ಚರ್‌ ಆಗಿರುವ ಬ್ಯಾಕ್‌ ಪ್ಯಾನೆಲ್‌ಅನಗ್ನು ಹೊಂದಿದೆ. ರಿಯಲ್‌ ಮಿ ನಾರ್ಜೋ 50 ಪ್ರೋ 61 ಡಿಗ್ರಿ ಆರ್ಚ್‌ ಅಥವಾ ಕರ್ವ್‌ ಆಗಿರುವ ಡಿಸ್‌ಪ್ಲೇ ಅನ್ನು ಹೊಂದಿದ್ದರೆ, ರಿಯಲ್‌ ಮಿ ನಾರ್ಜೊ 60 5ಜಿ ಸಂಪೂರ್ಣ ಪ್ಲ್ಯಾಟ್‌ ಆಗಿರುವ ಡಿಸ್‌ಪ್ಲೇ ಹೊಂದಿದೆ.

ರಿಯಲ್‌ ಮಿ ನಾರ್ಜೊ 60 ಪ್ರೋ 5ಜಿ, ರಿಯಲ್‌ ಮಿ ನಾರ್ಜೊ 60 5ಜಿ: ಬಗ್ಗೆ ಸಂಪೂರ್ಣ ಮಾಹಿತಿ

ಡಿಸ್‌ ಪ್ಲೇ: ನಾರ್ಜೋ 60 ಪ್ರೋ 5ಜಿ 6.7 ಇಂಚು ಅಮೋಲ್ಡ್ ಡಿಸ್‌ ಪ್ಲೇ ಹೊಂದಿದ್ದು 1080ಪಿ ರೆಸಲ್ಯೂಷನ್‌ ಮತ್ತು 120ಹೆರ್ಟ್ಜ್‌ ರಿಫ್ರೆಶ್‌ ರೇಟ್‌ ಹೊಂದಿದೆ. ಇನ್ನು ನಾರ್ಜೋ 60 5ಜಿ ಫೋನ್‌ 6.43 ಇಂಚು ಅಮೋಲ್ಡ್ ಡಿಸ್‌ ಪ್ಲೇ ಹೊಂದಿದ್ದು, 1080ಪಿ ರೆಸಲ್ಯೂಷನ್‌ ಮತ್ತು 90ಹೆರ್ಟ್ಜ್‌ ರಿಫ್ರೆಶ್‌ ರೇಟ್‌ ಹೊಂದಿದೆ. ಅದರೊಂದಿಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಸ್ಕ್ರೀನ್‌ ಪ್ರೊಟೆಕ್ಷನ್‌ (ಪ್ರೊ ಮಾಡೆಲ್‌ನಲ್ಲಿ ಇದು ಇಲ್ಲ) ಕೂಡ ನಿಮಗೆ ಸಿಗಲಿದೆ.

ಪ್ರೊಸೆಸರ್‌: ನಾರ್ಜೋ 60 ಪ್ರೋ 5ಜಿ ಫೋನ್‌, ಮೀಡಿಯಾ ಟೆಕ್‌ ಡಿಮೆನ್ಸಿಟಿ 7050 ಪ್ರೊಸೆಸರ್‌ ಹೊಂದಿದ್ದರೆ, ನಾರ್ಜೋ 60 5ಜಿ ಡಿಮೆನ್ಸಿಟಿ 6020 ಪ್ರೊಸೆಸರ್‌ಅನ್ನು ಹೊಂದಿದೆ.

ರಾಮ್‌/ಸ್ಟೋರೇಜ್‌:  ನಾರ್ಜೋ 60 ಪ್ರೋ 5ಜಿಯಲ್ಲಿ ಮೆಮೋರಿ ಆಧಾರದಲ್ಲಿ ಮೂರು ಆವೃತ್ತಿಯ ಫೋನ್‌ಗಳಿವೆ. 8 ಜಿಬಿ ರಾಮ್‌/128 ಜಿಬಿ ಸ್ಟೋರೇಜ್‌ನ ಒಂದು ಫೋನ್‌ ಇದ್ದರೆ, ಉಳಿದ ಎರಡು ಆವೃತ್ತಿಗಳು ಕ್ರಮವಾಗಿ 12ಜಿಬಿ/256 ಜಿಬಿ ಮತ್ತು 12ಜಿಬಿ/1ಟಿಬಿ ಸ್ಟೋರೇಜ್‌ನ ಫೋನ್‌ ಆಗಿದೆ. ಇನ್ನು ನಾರ್ಜೋ 60 5ಜಿ ಎರಡು ಮೆಮೊರಿ ಆಧಾರದ ಆವೃತ್ತಿಗಳನ್ನು ಒಂದಿದೆ. 8ಜಿಬಿ/128ಜಿಬಿ ಮತ್ತು 8 ಜಿಬಿ/256 ಜಿಬಿ ಫೋನ್‌ಗಳನ್ನು ಹೊಂದಿದೆ.

ಸಾಫ್ಟ್‌ವೇರ್‌: ರಿಯಲ್‌ಮೀ ನಾರ್ಜೋ 60 ಪ್ರೋ 5ಜಿ ಮತ್ತು ನಾರ್ಜೋ 60 5ಜಿ ರಿಯಲ್‌ ಮಿ ಬೆಂಬಲಿತ ಆಂಡಾಯ್ಡ್‌ 13 ಸಾಫ್ಟ್‌ವೇರ್‌ಅನ್ನು ಹೊಂದಿದೆ.

ಕ್ಯಾಮೆರಾ: ನಾರ್ಜೋ 60 ಪ್ರೋ 5G ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ, ಇದು 50MP ಮುಖ್ಯ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ) ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾದ ಸಂಯೋಜನೆಯಾಗಿದೆ. ನಾರ್ಜೋ 60 5G ಒಂದೇ ಬ್ಯಾಕ್‌ ಕ್ಯಾಮೆರಾವನ್ನು ಹೊಂದಿದೆ ಅದು 64MP ಆಗಿದೆ.

ಫ್ರಂಟ್‌ ಕ್ಯಾಮೆರಾ: ನಾರ್ಜೋ 60 ಪ್ರೊ 5ಜಿ 16 ಎಂಪಿ ಫ್ರಂಟ್‌ ಕ್ಯಾಮೆರಾ ಹೊಂದಿದ್ದು, ನಾರ್ಜೋ 60 5ಜಿ 13 ಎಂಪಿ ಫ್ರಂಟ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ, ಚಾರ್ಜಿಂಗ್‌: ಎರಡೂ ಫೋನ್‌ಗಳಿಗೆ 5000 ಎಂಎಚ್‌ ಬ್ಯಾಟರಿ ಹೊಂದಿದೆ. ನಾರ್ಜೋ 60 ಪ್ರೊ 5ಜಿ 67 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ಅನ್ನು ಬೆಂಬಲಿಸುತ್ತದೆ. 0ಯಿಂದ 50 ಚಾರ್ಜಿಂಗ್‌ಗೆ ಕೇವಲ 18 ನಿಮಿಷ ಇದು ತೆಗೆದುಕೊಳ್ಳಯತ್ತದೆ. ನಾರ್ಜೋ 60 5ಜಿ 33 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಹೊಂದಿದೆ. 0ಯಿಂದ 50 ಪರ್ಸಂಟೇಜ್‌ ಚಾರ್ಜಿಂಗ್‌ಗೆ ಇದು 25 ನಿಮಿಷ ತೆಗೆದುಕೊಳ್ಳುತ್ತದೆ.

ಹಣವೆಷ್ಟು: 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ Narzo 60 Pro ಬೆಲೆ 23,999 ರೂ. 12GB RAM ಮತ್ತು 256GB ಸಂಗ್ರಹದ ಆವೃತ್ತಿಯ ಬೆಲೆ 26,999 ರೂ. Realme Narzo 60 Pro 5G 12GB RAM ಮತ್ತು 1TB ಸಂಗ್ರಹಣೆಯೊಂದಿಗೆ ಖರೀದಿದಾರರಿಗೆ 29,999 ರೂಪಾಯಿಗೆ ಸಿಗಲಿದೆ. 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ Narzo 60 5G ಬೆಲೆ 17,999 ರೂಪಾಯಿ ಆಗೊದ್ದು,  8GB RAM ಮತ್ತು 256GB ಸಂಗ್ರಹದ ಆವೃತ್ತಿಯ ಬೆಲೆ 19,999 ರೂಪಾಯಿ ಆಗಿದೆ.

Latest Videos
Follow Us:
Download App:
  • android
  • ios