Realme Narzo 50A Prime AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು,  50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೈಲೈಟ್ ಮಾಡಲಾಗಿದೆ 

Tech Desk: Realme Narzo 50A Prime ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಸ್ಮಾರ್ಟ್‌ಫೋನ್ 6.6-ಇಂಚಿನ Full-HD+ ಡಿಸ್‌ಪ್ಲೇಯನ್ನು ಹೊಂದಿದೆ. Realme Narzo 50A Prime ಯುನಿಸೊಕ್ T612 SoC ನಿಂದ ಚಾಲಿತವಾಗಿದ್ದು, 4GB RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್ಫೋನ್ AI ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದ್ದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೈಲೈಟ್ ಮಾಡಲಾಗಿದೆ. Realme Narzo 50A Prime ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

Realme Narzo 50A Prime ಬೆಲೆ: Realme Narzo 50A ಪ್ರೈಮ್‌ನ ಬೆಲೆ ಬೇಸ್ 4GB + 64GB ಸ್ಟೋರೇಜ್ ರೂಪಾಂತರಕ್ಕಾಗಿ IDR 1,999,000 (ಸುಮಾರು ರೂ. 10,600) ನಿಂದ ಪ್ರಾರಂಭವಾಗುತ್ತದೆ. 4GB + 128GB ಸ್ಟೋರೇಜ್ ರೂಪಾಂತರಕ್ಕೆ IDR 2,199,000 (ಸುಮಾರು ರೂ. 11,700) ಬೆಲೆ ನಿಗಪಡಿಸಲಾಗಿದೆ. ರಿಯಲ್‌ಮಿ ಸ್ಮಾರ್ಟ್‌ಫೋನನ್ನು ಫ್ಲ್ಯಾಶ್ ಬ್ಲಾಕ್ ಮತ್ತು ಫ್ಲ್ಯಾಶ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ನೀಡುತ್ತಿದೆ.

ಇದನ್ನೂ ಓದಿ: 5,000mAh ಬ್ಯಾಟರಿಯೊಂದಿಗೆ Realme 9 5G ಸರಣಿಯ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?

Realme Narzo 50A Prime ಫೀಚರ್ಸ್:‌ ಡ್ಯುಯಲ್-ಸಿಮ್ (ನ್ಯಾನೋ) Realme Narzo 50A Prime ಆಂಡ್ರಾಯ್ಡ್ 11-ಆಧಾರಿತ Realme UI R ಆವೃತ್ತಿಯಲ್ಲಿ ರನ್‌ ಆಗುತ್ತದೆ. ಇದು 6.6-ಇಂಚಿನ Full-HD+ (2,408x1,080 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದ್ದು ಆಕ್ಟಾ-ಕೋರ್ ಯುನಿಸೊಕ್ T612 SoC ನಿಂದ ಚಾಲಿತವಾಗಿದೆ ಹಾಗೂ 4GB RAM ನೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ Realme Narzo 50A Prime AI ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, f/1.8 ಅಪೆರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. f/2.8 ಅಪೆರ್ಚರ್‌ನೊಂದಿಗೆ ಮೊನೋಕ್ರೋಮ್‌ ಪೋರ್ಟ್ರೆಟ್ ಕ್ಯಾಮೆರಾ ಮತ್ತು f/2.4 ಅಪೆರ್ಚರ್‌ನೊಂದಿಗೆ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಸ್ಮಾರ್ಟ್‌ಫೋನ್ 8-ಮೆಗಾಪಿಕ್ಸೆಲ್ AI ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿRealme TechLife Watch S100 ಲಾಂಚ್, ಫೀಚರ್‌ಗಳೇನು, ಬೆಲೆ ಎಷ್ಟು?

Realme Narzo 50A ಪ್ರೈಮ್ ಮೈಕ್ರೊ SD ಕಾರ್ಡ್ ಮೂಲಕ (1TB ವರೆಗೆ) ವಿಸ್ತರಿಸಬಹುದಾದ 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ ಮತ್ತು 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಹ್ಯಾಂಡ್ಸೆಟ್ 8.1 ಮಿಮೀ ದಪ್ಪವಾಗಿದೆ.