ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಲಾಂಚ್
ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ರಿಯಲ್‌ಮಿ ಸಿ25ವೈ ಹೆಸರಿನ ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ನೀಡಲಾಗಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಫೋನ್ ಬೆಲೆ ತುಂಬಾ ತುಟ್ಟಿಯೇನಲ್ಲ. ಕಡಿಮೆ ಬಜೆಟ್‌ನ ಅತ್ಯುತ್ತಮ ಫೋನ್ ಇದಾಗಿದೆ.
ಸ್ಮಾರ್ಟ್‌ಫೋನ್ ಉತ್ಪಾದಕ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಚೀನಾ ಮೂಲದ ರಿಯಲ್‌ಮಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ರಿಯಲ್‌ಮಿ ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನುಗಳಿಂದಾಗಿಯೇ ಹೆಚ್ಚು ಜನಪ್ರಿಯವಾಗಿದ್ದು, ಈಗ ಬಿಡಗಡೆಯಾಗಿರುವ ಫೋನು ಕೂಡ ಬಜೆಟ್ ಫೋನ್ ಆಗಿದೆ.
ಕೈಗೆಟುಕುವ ದರದ ರಿಯಲ್‌ಮಿ ಸಿ25ವೈ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ವಿಶೇಷ ಏನೆಂದರೆ, ಸಿ ಸೀರೀಸ್ ಫೋನುಗಳಲ್ಲಿ 50 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡ ಮೊದಲ ಫೋನ್ ಇದಾಗಿದೆ. ಈಗ ಬಿಡುಗಡೆಯಾಗರುವ ರಿಯಲ್‌ಮಿ ಸಿ 25 ವೈ ಫೋನ್, ರಿಯಲ್ ಮಿ ಸಿ25 ಫೋನಿನ ಮುಂದುವರಿದ ಆವೃತ್ತಿಯಾಗಿದ್ದು, ವಾಟರ್‌ಡ್ರಾಪ್ ಸ್ಟೈಲ್ ನಾಚ್ ಒಳಗೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‌ನಲ್ಲಿ ಕಂಪನಿಯು ಅಕ್ಟಾ ಕೋರ್ ಯುನಿಸಾಕ್ ಪ್ರೊಸೆಸರ್ ಅಳವಡಿಸಿದೆ.
ಐಫೋನ್ 13 ಸೀರೀಸ್, ಐಪ್ಯಾಡ್ ಮಿನಿ, ಆಪಲ್ ವಾಚ್ ಲಾಂಚ್!
ಕೈಗೆಟುಕುವ ದರವನ್ನು ಹೊಂದಿರುವ ರಿಯಲ್‌ಮಿ ಸಿ25ವೈ ಸ್ಮಾರ್ಟ್‌ಫೋನ್ ಸಾಕಷ್ಟು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ. ಈ ಫೋನು ಡ್ಯುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತದೆ ಮತ್ತು ರಿಯಲ್‌ಮಿ ಆರ್ ಎಡಿಷನ್ ಇಂಟರ್ಫೇಸ್‌ನೊಂದಿಗೆ ಆಂಡ್ರಾಯ್ಡ್ 11 ಒಎಸ್ ಆಧರಿತವಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, 4ಜಿಬಿ LPDDR4x ರ್ಯಾಮ್‌ನೊಂದಿಗೆ ಸಂಯೋಜಿತವಾಗಿರುವ ಅಕ್ಟಾಕೋರ್ ಯುನಿಸಾಕ್ ಟಿ610 ಪ್ರೊಸೆಸರ್ ಒಳಗೊಂಡಿದೆ.
ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ಇದೆ. ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಎರಡು ಮತ್ತು ಮೂರನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಎಐ ಬ್ಯೂಟಿ, ಎಚ್‌ಡಿಆರ್ ಮೋಡ್, ಪನೋರಾಮಿಕ್ ವ್ಯೂ, ಪೋರ್ಟ್ರೆಯೆಟ್, ಟೈಮ್‌ಲ್ಯಾಪ್ಸ್, ಎಕ್ಸ್‌ಪರ್ಟ್ ಸೇರಿದಂತೆ ಇನ್ನಿ ಫೀಚರ್‌ಗಳನ್ನು ಈ ಕ್ಯಾಮೆರಾ ಒಳಗೊಂಡಿದೆ.
ರಿಯಲ್‌ಮಿ ಸಿ25 ವೈ ಸ್ಮಾರ್ಟ್ ಫೋನ್ ಫ್ರಂಟ್‌ನಲ್ಲಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಈ ಫ್ರಂಟ್ ಫೇಸಿಂಗ್ ಕ್ಯಾಮೆರಾದಲ್ಲೂ ನೀವು ಎಐ ಬ್ಯೂಟಿ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಕಾಣಬಹುದು. ರಿಯಲ್ ಮಿ ಹೊಸ ಫೋನ್‌ನಲ್ಲಿ ಕಂಪನಿಯು ಡಿಫಾಲ್ಟ್ ಆಗಿಯೇ ನಿಮಗೆ 128 ಜಿಬಿ ಸ್ಟೋರೇಜ್ ಅನ್ನು ನೀಡುತ್ತದೆ. ಬಳಕೆದಾರರಿಗೆ ಇನ್ನೂ ಹೆಚ್ಚಿನ ಮೆಮೋರಿ ಬೇಕಾದರೆ ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ಸಾಮರ್ಥ್ಯವನ್ನು 256 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.
ವಾಟ್ಸಾಪ್‌ನಲ್ಲಿ ಟೈಪಿಸಬೇಕಿಲ್ಲ, ಮಾತಾಡಿದ್ರೆ ಸಾಕು!
ಫೋನ್ ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 4ಜಿ ಎಲ್‌ಟಿಇ ತಂತ್ರಜ್ಞಾನಕ್ಕೆ ಬೆಂಬಲ ನೀಡುತ್ತದೆ. ಅಷ್ಟು ಮಾತ್ರವಲ್ಲದೇ, ವೈಫೈ 802.11, ಬ್ಲೂಟೂಥ್ ವಿ5, ಜಿಪಿಎಸ್/ಎ-ಜಿಪಿಎಸ್, ಮೈಕ್ರೋ ಯುಎಸ್‌ಬಿ ಮತ್ತು 3.5 ಎಂಎಂ ಹೆಡ್‌ಫೋನ್ ಜಾಕ್‌ಗೆ ಸಪೋರ್ಟ್ ಮಾಡುತ್ತದೆ. ಫೋನ್ ಬ್ಯಾಕ್ ಸೈಡಿನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ನೀಡಲಾಗಿದೆ.
ಈಗಾಗಲೇ ಹೇಳಿದಂತ ಇದೊಂದು ಬಜೆಟ್ ಫೋನ್ ಆಗಿರುವುದರಿಂದ ಬೆಲೆ ತೀರಾ ತುಟ್ಟಿಯೇನೂ ಆಗಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 10,999 ರೂಪಾಯಿ. ಅದೇ ವೇಳೆ, ಈ ಫೋನ್ 4 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ವೆರಿಯೆಂಟ್‌ನಲ್ಲೂ ಲಭ್ಯವಿದೆ. ಈ ವೆರಿಯೆಂಟ್ ಬೆಲೆ 11,999 ರೂಪಾಯಿಯಾಗಿದೆ.
ಈ ಎರಡೂ ವೆರಿಯೆಂಟ್ ಫೋನುಗಳು ನಿಮಗೆ ಗ್ಲೇಷಿಯರ್ ಬ್ಲೂ ಮತ್ತು ಮೆಟಲ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ದೊರೆಯಲಿದೆ. ಗ್ರಾಹಕರು ಈ ಹೊಸ ಫೋನ್ ಅನ್ನು ಸೆಪ್ಟೆಂಬರ್ 27ರ ಬಳಿಕ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ವೆಬ್‌ಸೈಟ್ ಮೂಲಕ ಹಾಗೂ ರಿಟೇಲ್ ಮಳಿಗೆಗಳಲ್ಲೂ ಖರೀದಿಸಬಹುದು.
ಡೆಸ್ಕ್‌ಟಾಪ್‌ಗಳಿಗೆ ಡಾರ್ಕ್ ಥೀಮ್ ಪರಿಚಯಿಸಿದ ಗೂಗಲ್