ಕ್ಯಾಮೆರಾ ಪ್ರಿಯರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯ Realme 9 4G ಭಾರತ ಬಿಡುಗಡೆ ದಿನಾಂಕ ಫಿಕ್ಸ್!
Realme 9 ಸರಣಿ ಹೊಸ ಹ್ಯಾಂಡ್‌ಸೆಟ್ 108-ಮೆಗಾಪಿಕ್ಸೆಲ್ 'ಪ್ರೊಲೈಟ್' ಕ್ಯಾಮೆರಾವನ್ನು ಹೊಂದಿದೆ ಎಂದು ರಿಯಲ್‌ಮೆ ಇತ್ತೀಚೆಗೆ ಬಹಿರಂಗಪಡಿಸಿದೆ
Realme 9 4G Launch: Realme 9 4G ಏಪ್ರಿಲ್ 7 ಕ್ಕೆ ಭಾರತದ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಶನಿವಾರ ಬಹಿರಂಗಪಡಿಸಿದೆ. Realme 9i, Realme 9 5G, Realme 9 5G ಸ್ಪೀಡ್ ಆವೃತ್ತಿ, Realme 9 Pro 5G, ಮತ್ತು Realme 9 Pro+ 5G ಒಳಗೊಂಡಿರುವ Realme 9 ಸ್ಮಾರ್ಟ್‌ಫೋನ್ ಸರಣಿಗೆ ಕಂಪನಿಯ ಇತ್ತೀಚಿನ ಸೇರ್ಪಡೆಯಾಗಿ ಈ ಹೊಸ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತಿದೆ.
Realme 9 ಸರಣಿ ಹೊಸ ಹ್ಯಾಂಡ್‌ಸೆಟ್ 108-ಮೆಗಾಪಿಕ್ಸೆಲ್ 'ಪ್ರೊಲೈಟ್' ಕ್ಯಾಮೆರಾವನ್ನು ಹೊಂದಿದೆ ಎಂದು ರಿಯಲ್‌ಮೆ ಇತ್ತೀಚೆಗೆ ಬಹಿರಂಗಪಡಿಸಿದೆ. ಅಲ್ಲದೇ ಮುಂಬರುವ Realme 9 4G ಇತ್ತೀಚೆಗೆ ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಮೊದಲು ವಿವಿಧ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ ಗುರುತಿಸಲ್ಪಟ್ಟಿದೆ
Realme 9 4G ಭಾರತ ಬಿಡುಗಡೆ ವಿವರಗಳು: ಕಂಪನಿಯು ಶನಿವಾರದಂದು ಟ್ವಿಟರ್‌ನಲ್ಲಿ Realme 9 4G ಬಿಡುಗಡೆಯ ದಿನಾಂಕವನ್ನು ಘೋಷಿಸಿತು, ಏಪ್ರಿಲ್ 7 ರಂದು ಮಧ್ಯಾಹ್ನ 12:30 ಕ್ಕೆ ನಡೆಯುವ ವರ್ಚುವಲ್ ಈವೆಂಟ್‌ನಲ್ಲಿ ಹ್ಯಾಂಡ್‌ಸೆಟ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಲಾಂಚ್ ಈವೆಂಟನ್ನು ಕಂಪನಿಯ ಯೂಟ್ಯೂಬ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಲೈವ್‌ಸ್ಟ್ರೀಮ್ ಮಾಡಲಾಗುತ್ತದೆ. ಇದೇ ಸಮಾರಂಭದಲ್ಲಿ ರಿಯಲ್‌ಮಿ ಭಾರತದಲ್ಲಿ Realme GT 2 Pro ಬಿಡುಗಡೆ ಮಾಡಲು ನಿರ್ಧರಿಸಿದೆ.
ಭಾರತದಲ್ಲಿ Realme 9 4G ನಿರೀಕ್ಷಿತ ಬೆಲೆ: ಭಾರತದಲ್ಲಿ ಮುಂಬರುವ Realme 9 4G ಬೆಲೆಯನ್ನು ರೂ.15,000 ಮಾರ್ಕ್‌ಗಿಂತ ಕಡಿಮೆ ನಿಗದಿಪಡಿಸಬಹುದು ಎಂದು ಈ ಹಿಂದಿನ ವರದಿಗಳು ತಿಳಿಸಿವೆ. ಸ್ಮಾರ್ಟ್‌ಫೋನ್ ಮಿಟಿರಿಯೋರ್ ಬ್ಲ್ಯಾಕ್, ಸನ್‌ಬರ್ಸ್ಟ್ ಗೋಲ್ಡ್ ಮತ್ತು ಸ್ಟಾರ್‌ಗೇಜ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಪ್ರಾರಂಭಿಬಹುದು ಎಂದು ವರದಿಗಳು ಬಹಿರಂಪಡಿಸಿವೆ. ಆದಾಗ್ಯೂ, ಮುಂಬರುವ Realme 9 4G ಹ್ಯಾಂಡ್‌ಸೆಟ್‌ನ ಯಾವುದೇ ಬೆಲೆ ವಿವರಗಳನ್ನು ರಿಯಲ್‌ಮಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?
Realme 9 4G ನಿರೀಕ್ಷಿತ ಫೀಚರ್ಸ್: ರಿಯಲ್‌ಮಿ ತನ್ನ Realme 9 4G ಸ್ಮಾರ್ಟ್‌ಫೋನ್‌ಗೆ 108-ಮೆಗಾಪಿಕ್ಸೆಲ್ 'ಪ್ರೊಲೈಟ್' ಕ್ಯಾಮೆರಾವನ್ನು ಸೇರಿಸುವುದನ್ನು ಪತ್ರಿಕಾ ಪ್ರಕಟಣೆಯ ಮೂಲಕ ಖಚಿತಪಡಿಸಿದೆ. ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ISOCELL HM6 ಇಮೇಜ್ ಸೆನ್ಸರ್ ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.
ಹಿಂದಿನ ವರದಿಗಳು ಸ್ಮಾರ್ಟ್‌ಫೋನ್ 6.6-ಇಂಚಿನ IPS LCD ಡಿಸ್‌ಪ್ಲೇಯನ್ನು 144Hz ರಿಫ್ರೆಶ್ ರೇಟ್‌ನೊಂದಿಗೆ ಒಳಗೊಂಡಿವೆ ಎಂದು ಸೂಚಿಸಿದೆ, ಆದರೆ ಕಂಪನಿಯ ಪ್ರಕಟನೆಯು ಸ್ಮಾರ್ಟ್‌ಫೋನ್ AMOLED ಡಿಸ್ಪ್ಲೇಯನ್ನು ಹೊಂದಿದೆ ಎಂದು ತಿಳಿಸಿದೆ.
ಮುಂಬರುವ Realme 9 4G ಈ ಹಿಂದೆ ವಿವಿಧ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ ಗುರುತಿಸಲಾಗಿತ್ತು ಮತ್ತು 33W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು. ಹಿಂದಿನ ವರದಿಗಳ ಪ್ರಕಾರ ಹ್ಯಾಂಡ್‌ಸೆಟ್ಟನ್ನು 6GB + 128GB ಸ್ಟೋರೇಜ್ ಮಾದರಿಯಲ್ಲಿ, ಹಾಗೆಯೇ 8GB + 128GB ಸ್ಟೋರೇಜ್ ಮಾದರಿಯಲ್ಲಿ ಪ್ರಾರಂಭಿಸಬಹುದು. ಆದಾಗ್ಯೂ, ಏಪ್ರಿಲ್ 7 ರಂದು Realme 9 4G ಬಿಡುಗಡೆಯಾಗಲಿದ್ದು ರಿಯಲ್‌ಮಿ ಇನ್ನಷ್ಟೇ ವಿವರಗಳನ್ನು ಬಹಿರಂಪಡಿಸಬೇಕಿದೆ.